ಕೊವಿಡ್-19 ಬಿಕ್ಕಟ್ಟು ಈ ಹಿಂದೆಂದೂ ಕಾಣದಂಥ ಬದಲಾವಣೆ ಉದ್ಯೋಗ ಜೀವನದಲ್ಲಿ ಆಗಿದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ 82ರಷ್ಟು ಮಂದಿ ಕಚೇರಿಗೆ ಹೋಗುವ ಬದಲು ವರ್ಕಿಂಗ್ ಫ್ರಮ್ ಹೋಮ್ಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಕೊರೊನಾ ಕಾರಣಕ್ಕೆ ದೂರದಿಂದ ಕೆಲಸ ಮಾಡುವುದನ್ನು ಮೊದಮೊದಲಿಗೆ ಹೇರಿಕೆ ಮಾಡಲಾಯಿತು. ಆದರೆ ರಿಮೋಟ್ ವರ್ಕಿಂಗ್ ಇದೀಗ ಸಾಮಾನ್ಯ ಎಂಬಂತಾಗಿದೆ. ಎಲ್ಲವೂ ಸರಿಯಾದ ಮೇಲೆ ಹೊಸ ಅಭ್ಯಾಸ ಸೃಷ್ಟಿಯಾಗಿದೆ, ಎಂದು ಉದ್ಯೋಗ ವೆಬ್ಸೈಟ್ SCIKEY ಟೆಕ್ ಟ್ಯಾಲೆಂಟ್ ಔಟ್ಲುಕ್ ತಿಳಿಸಿದೆ. ಅಧ್ಯಯನದ ಪ್ರಕಾರ ಶೇ 82ರಷ್ಟು ಮಂದಿ ಕಚೇರಿಯ ಬದಲಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ (Work From Home) ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ದ ಟ್ಯಾಲೆಂಟ್ ಟೆಕ್ ಔಟ್ಲುಕ್ 2022ರ ಅಧ್ಯಯನವು ನಾಲ್ಕು ಖಂಡಗಳಾದ್ಯಂತ 100ಕ್ಕೂ ಹೆಚ್ಚು ಸಿ-ಸ್ವೀಟ್ ಮತ್ತು ಮಾನವ ಬಂಡವಾಳ ನಾಯಕರು ತಿಳಿಸಿದ ವಿಚಾರಗಳು ವಿಶ್ಲೇಷಣೆಯು, SCIKEYಯಿಂದ ಸಮೀಕ್ಷೆಗಳು, ಸಾಮಾಜಿಕ ಮಾಧ್ಯಮದ ಮಾಹಿತಿಗಳು, ಸಂದರ್ಶನಗಳು ಮತ್ತು ಪ್ಯಾನೆಲ್ ಚರ್ಚೆಗಳಿಂದ ಕಲೆ ಹಾಕಲಾಗಿದೆ.
ಈ ಅಧ್ಯಯನವು ಇನ್ನೂ ಮುಂದುವರಿದು, ಶೇ 64ರಷ್ಟು ಉದ್ಯೋಗಿಗಳು ಹೇಳುವ ಪ್ರಕಾರ, ಮನೆಯಿಂದ ಕೆಲಸ ಮಾಡುವುದರಿಂದ ಹೆಚ್ಚು ಉತ್ಪಾದಕತೆ ಇರುತ್ತದೆ ಮತ್ತು ಕಡಿಮೆ ಒತ್ತಡ ಇರುತ್ತದೆ ಎಂದು ಹೇಳಿರುತ್ತದೆ. ಮಾನವ ಸಂಪನ್ಮೂಲ ವಿಭಾಗದಿಂದ ಮುಖತಃ ಮಾತುಕತೆ ನಡೆಯುತ್ತಿದ್ದ್ದದ್ದು ಈಗ ವರ್ಚುವಲಿ ಭೇಟಿ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಶೇ 80ಕ್ಕೂ ಹೆಚ್ಚು ಮಾನವ ಸಂಪನ್ಮೂಲ ಮ್ಯಾನೇಜರ್ಗಳು ಒಪ್ಪಿಕೊಂಡಂತೆ, ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಬರುವಂತೆ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವುದು ಹೆಚ್ಚು ಕಷ್ಟವಾಗಿದೆ, ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಇನ್ನು ಮುಂದೆ ವರ್ಕಿಂಗ್ ಫ್ರಮ್ ಹೋಮ್ ಸಹಜ ಆಯ್ಕೆ ಆಗಿರಲಾರದು. ಆದರೆ ಎಲ್ಲ ಟೆಕ್ ಪ್ರತಿಭಾವಂತರು ತಮ್ಮ ಉದ್ಯೋಗದಾತರಿಂದ ಈ ಹೊಸದನ್ನೇ ನಿರೀಕ್ಷಿಸುತ್ತಿದ್ದಾರೆ. ಜತೆಗೆ ಈಗಾಗಲೇ ನೇಮಕ ಮಾಡಿಕೊಂಡವರನ್ನು ಉಳಿಸಿಕೊಳ್ಳುವುದು ಸಹ ಸವಾಲಾಗಿದೆ ಎಂಬುದು ಗಮನಕ್ಕೆ ಬಂದಿದೆ. ರಿಮೋಟ್ ವರ್ಕಿಂಗ್ನಿಂದ ಸ್ವಾತಂತ್ರ್ಯ ದೊರೆಯುತ್ತದೆ ಮತ್ತು ಉತ್ಪಾದಕತೆ ಹೆಚ್ಚಾಗುತ್ತದೆ. ಇದರಿಂದ ಮಾನವ ಸಂಪನ್ಮೂಲ ವಿಭಾಗದವರು ನಂಬಬೇಕು ಎಂದು ಬಯಸುತ್ತಾರೆ. ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಅಥವಾ ಕಡಿಮೆ ಬಳಕೆ ಆಗುವ ಉದ್ಯೋಗಿಗಳು ಬಹಳ ವೇಗವಾಗಿ ಪರ್ಯಾಯ ಹುಡುಕಿಕೊಳ್ಳುತ್ತಿದ್ದಾರೆ ಮತ್ತು ಕೊವಿಡ್ ಪೂರ್ವ ಅವಧಿಗಿಂತ ಬಹಳ ವೇಗವಾಗಿ ಉದ್ಯೋಗ ತೊರೆಯುತ್ತಿದ್ದಾರೆ.
ತಂತ್ರಜ್ಞಾನ ಬಹಳ ವೇಗವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ಆ ಮೂಲಕ ಕಂಪೆನಿಗಳಲ್ಲಿ ತಮ್ಮ ಉದ್ಯೋಗಿಗಳು ಕೆಲಸ ಮಾಡುವ ರೀತಿ ಬದಲಾಯಿಸಿದೆ. ಇನ್ನೂ ಹೆಚ್ಚು ಆಳವಾದ ಹಾಗೂ ಅರ್ಥಪೂರ್ಣ ಒಳಗೊಳ್ಳುವಿಕೆಯನ್ನು ಎಲ್ಲರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಮಧ್ಯೆ, ಅಧ್ಯಯನದಿಂದ ತಿಳಿದುಬರುವಂತೆ, ಕೇವಲ ಶೇ 18ರಷ್ಟು ಟೆಕ್ ನೇಮಕಾತಿ ಮ್ಯಾನೇಜರ್ಗಳು ನೇಮಕ ಪ್ರಕ್ರಿಯೆಗಾಗಿ 2022ರಲ್ಲಿ ಮಾನಸಿಕ ಮೌಲ್ಯಮಾಪನವನ್ನು ನೋಡುತ್ತಿದ್ದಾರೆ. ಈ ಪ್ರಮಾಣವು 2019ರಲ್ಲಿ ಶೇ 68ರಷ್ಟಿತ್ತು. ದೂರದಿಂದ ಕೆಲಸ ಮಾಡುವುದು ಸಾಮಾನ್ಯ ಆಗಿರುವಾಗ ಕಚೇರಿಯಲ್ಲೂ ಮತ್ತು ಪರ್ಯಾಯ ಸ್ಥಳಗಳಲ್ಲಿ ಆಗಾಗ ಸಭೆಗಳು ನಡೆಯಲಿವೆ, ಎಂದು ಅಧ್ಯಯನ ಹೇಳಿದೆ.
ಶೇಕಡಾ 67ಕ್ಕೂ ಹೆಚ್ಚು ಕಂಪೆನಿಗಳು ಒಪ್ಪಿಕೊಂಡಿರುವಂತೆ, ಕಚೇರಿಯಲ್ಲೇ ಉದ್ಯೋಗ ಮಾಡುವಂಥ ಪರಿಸ್ಥಿತಿ ಬಹಳ ಕಷ್ಟ ಆಗಿದೆ, ಎಂದು ಹೇಳಲಾಗಿದೆ. ಆದರೆ ಎರಡು ವರ್ಷಗಳ ವರ್ಕಿಂಗ್ ಫ್ರಮ್ ಹೋಮ್ ಹೊಸ ಆರಾಮದ ಅನುಭವ ನೀಡಿದ್ದು, ಇದರಿಂದ ಉದ್ಯೋಗದಾತರು ಹಾಗೂ ಉದ್ಯೋಗಿಗಳಿಗೆ ಎರಡೂ ಕಡೆಯಿಂದಲೂ ಅನುಕೂಲ ಆಗುತ್ತಿದೆ ಎಂದು ತಿಳಿಸಲಾಗಿದೆ. ಅಧ್ಯಯನದಲ್ಲಿ ತಿಳಿಸಿರುವಂತೆ, ಶೇ 70ಕ್ಕೂ ಹೆಚ್ಚು ಎಚ್ಆರ್ ಮತ್ತು ಟೆಕ್ ಮ್ಯಾನೇಜರ್ಗಳು ಒಪ್ಪಿಕೊಂಡಂತೆ, ನಾನಾ ಕಡೆ ಹಂಚಿಹೋಗಿರುವ ಸಿಬ್ಬಂದಿ ವರ್ಗವನ್ನು ಉಳಿಸಿಕೊಳ್ಳುವುದಕ್ಕೆ ಉತ್ತಮವಾಗಿ ಕೆಲಸ ಮಾಡುವವರನ್ನು ಗುರುತಿಸಿ, ಪ್ರಶಸ್ತಿಗಳನ್ನು ನೀಡುವುದು ಬಹಳ ಮುಖ್ಯ ಮತ್ತು “ಸಣ್ಣ” ಉತ್ತೇಜನವನ್ನು ನಿಯಮಿತವಾಗಿ ನೀಡುವುದು ಮುಖ್ಯ ಎನ್ನಲಾಗಿದೆ.
ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರಲ್ಲಿ ಶೇ 36ರಷ್ಟು ಮಂದಿ ಹೇಳಿಕೊಂಡಂತೆ, ಪ್ರತಿಭಾವಂತ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಶೀಘ್ರವಾಗಿ ರಿವಾರ್ಡ್ ನೀಡುವುದಕ್ಕೆ ಆರಂಭಿಸಲಾಗಿದೆ, ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Work From Home: ವರ್ಕ್ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?