AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Of India: ಸಿಸ್ಟಮ್​ ಅಪ್​ಡೇಟ್​ ನಂತರ ಬ್ಯಾಂಕ್ ಆಫ್ ಇಂಡಿಯಾದ ನೆಟ್​ ಬ್ಯಾಂಕಿಂಗ್​ ಸೇರಿ ಇತರ ಯಾವುದೂ ನೆಟ್ಟಗಿಲ್ಲ

ಬ್ಯಾಂಕ್ ಆಫ್ ಇಂಡಿಯಾ ಸಿಸ್ಟಮ್ ಅಪ್​ಗ್ರೇಡ್ ಆದ ನಂತರ ಗ್ರಾಹಕರು ನೆಟ್​ ಬ್ಯಾಂಕಿಂಗ್ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Bank Of India: ಸಿಸ್ಟಮ್​ ಅಪ್​ಡೇಟ್​ ನಂತರ ಬ್ಯಾಂಕ್ ಆಫ್ ಇಂಡಿಯಾದ ನೆಟ್​ ಬ್ಯಾಂಕಿಂಗ್​ ಸೇರಿ ಇತರ ಯಾವುದೂ ನೆಟ್ಟಗಿಲ್ಲ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jan 29, 2022 | 2:56 PM

Share

ಕಳೆದ ನಾಲ್ಕು ದಿನಗಳಿಂದ ಹಲವಾರು ದೂರುಗಳು ಬಂದ ನಂತರ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ತನ್ನ ಆನ್​ಲೈನ್​ ಸೇವೆಗಳು ಮತ್ತೆ ಆರಂಭಗೊಂಡಿದೆ. ಈ ವಾರದ ಆರಂಭದಲ್ಲಿ ಟ್ವಿಟರ್​ನಲ್ಲಿ ತಿಳಿಸಿದ ಪ್ರಕಾರ, ಕೋರ್ ಬ್ಯಾಂಕಿಂಗ್ ಸಿಸ್ಟಮ್​ ಅನ್ನು ಅಪ್​ಗ್ರೇಡ್​ ಮಾಡುತ್ತಿರುವುದಾಗಿ ಹೇಳಿದೆ. ಆದರೆ ಈ ಅಪ್​ಗ್ರೇಡ್​ ನಂತರ ಆನ್​ಲೈನ್​ ಸೇವೆಗಳು ಡೌನ್​ ಆಗಿದೆ ಎಂದು ಟ್ವಿಟರ್​ನಲ್ಲಿ ಗ್ರಾಹಕರು ದೂರಿದ್ದರು. ಅಚ್ಚರಿಕರ ಸಂಗತಿ ಏನೆಂದರೆ, ಈ ಸಮಸ್ಯೆಯು ನಾಲ್ಕು ದಿನಗಳ ತನಕ ಮುಂದುವರಿಯಿತು. ಬ್ಯಾಂಕ್​ನ ಎಲ್ಲ ವ್ಯವಸ್ಥೆಯು ಸರಾಗವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬ್ಯಾಂಕ್ ಹೇಳಿಕೊಂಡಿತ್ತು. “ಆರ್​ಟಿಜಿಎಸ್​, ಎನ್​ಇಎಫ್​ಟಿ, ಇಂಟರ್​ನೆಟ್​ ಬ್ಯಾಂಕಿಂಗ್ (Internet Banking) ಮತ್ತು ಬ್ಯಾಂಕ್ ಆಫ್ ಇಂಡಿಯಾದ ಮೊಬೈಲ್ ಸೇವೆಗಳು ಅಪ್​ಗ್ರೇಡೇಷನ್​ ನಂತರ ಬಳಕೆಯಲ್ಲಿದೆ ಮತ್ತು ಸುಸ್ಥಿರವಾಗುತ್ತಿದೆ,” ಎಂದು ಆ ನಂತರ ಟ್ವಿಟರ್​ ಪೋಸ್ಟ್​ನಲ್ಲಿ ಹೇಳಲಾಗಿತ್ತು. ಗ್ರಾಹಕರಿಗೆ ನೀಡಿದ ಪ್ರತಿಕ್ರಿಯೆಯಲ್ಲೂ ಇದನ್ನೇ ಪುನರಾವರ್ತನೆ ಮಾಡಲಾಗಿದೆ. “ಸರ್, ನಿಮಗೆ ಆದ ಸಮಸ್ಯೆಗೆ ಕ್ಷಮೆ ಕೇಳುತ್ತೇವೆ. ಎಲ್ಲ ಬ್ಯಾಂಕಿಂಗ್ ಸೇವೆಗಳು ಮತ್ತೆ ಆರಂಭಗೊಂಡಿದೆ ಎಂದು ತಿಳಿಸಲು ನಾವು ಬಯಸುತ್ತೇವೆ. ಆದರೆ ಈಗಲೂ ಸಮಸ್ಯೆ ಎದುರಿಸುತ್ತಿದ್ದಲ್ಲಿ ಮತ್ತೆ ನಮ್ಮ ಗಮನಕ್ಕೆ ತನ್ನಿ,” ಎಂದು ಗ್ರಾಹಕರಿಗೆ ತಿಳಿಸಲಾಗಿದೆ.

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಗಿದ್ದೇನು? ಜನವರಿ 23ನೇ ತಾರೀಕಿನಂದು ಬ್ಯಾಂಕ್ ಆಫ್ ಇಂಡಿಯಾವು ಟ್ವಿಟರ್​ನಲ್ಲಿ ಹೇಳಿಕೆಯೊಂದನ್ನು ನೀಡಿ, ಜನವರಿ 21ರಿಂದ ಗ್ರಾಹಕರ ಮೈಗ್ರೇಷನ್ ಪ್ರಕ್ರಿಯೆಯನ್ನು ಕೋರ್ ಸಿಸ್ಟಮ್ ಅಪ್​ಗ್ರೆಡೇಷನ್ ಭಾಗವಾಗಿ ಸಮಯ ನಿಗದಿ ಮಾಡಲಾಗಿದೆ. ಜನವರಿ 24ಕ್ಕೆ ಸಂಪೂರ್ಣ ಆಗುತ್ತದೆ ಎಂದು ತಿಳಿಸಿತ್ತು.

ಆದರೆ, ಆ ದಿನದ ಆಚೆಗೆ ಗ್ರಾಹಕರು ದೂರನ್ನು ನೀಡಲು ಆರಂಭಿಸಿದರು. ಆನ್​ಲೈನ್ ವಹಿವಾಟುಗಳು ವಿಫಲ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಟ್ವಿಟರ್​ನಲ್ಲಿ ರಾಶಿರಾಶಿ ದೂರುಗಳ ಸುರಿಮಳೆ ಆಯಿತು. ನೆಟ್ ಬ್ಯಾಂಕಿಂಗ್ ಸಮಸ್ಯೆ, ಚೆಕ್ ಕ್ಲಿಯರೆನ್ಸ್ ಆಗುತ್ತಿಲ್ಲ, ವಹಿವಾಟುಗಳು ವಿಫಲವಾಗುವುದು ಮತ್ತು ಹಲವಾರು ದೂರುಗಳು ಬರತೊಡಗಿದವು. ಸಿಎನ್​ಬಿಸಿ-ಟಿವಿ 18 ಪ್ರಕಾರ, “ಸಣ್ಣ ತಾಂತ್ರಿಕ ಸಮಸ್ಯೆಗಳು” ಅಪ್​ಗ್ರೇಡ್​ ಕಾರಣಕ್ಕೆ ಆಗಿದೆ ಎಂದು ಬ್ಯಾಂಕ್​ ತಿಳಿಸಿದೆ. ಎಲ್ಲ ದೂರುಗಳಿಗೂ ಒಂದೇ ಪ್ರತಿಕ್ರಿಯೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಭಾರತದ ಬ್ಯಾಡ್​ ಬ್ಯಾಂಕ್​ಗೆ ನಿಯಂತ್ರಕರ ಅನುಮತಿ; ಮಾರ್ಚ್​ನೊಳಗೆ ಕನಿಷ್ಠ 50 ಸಾವಿರ ಕೋಟಿ ರೂ. ವರ್ಗಾವಣೆ

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ