ಸರ್ಜರಿ ಬಳಿಕ ಫಿಟ್ ಆ್ಯಂಡ್ ಫೈನ್ ಆದ ಶಿವರಾಜ್ಕುಮಾರ್; ಇಲ್ಲಿದೆ ಫೋಟೋ
ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ ಮತ್ತು ಅಮೆರಿಕಾದಲ್ಲಿ ತಮ್ಮ ಕುಟುಂಬದೊಂದಿಗೆ ಚೇತರಿಸಿಕೊಳ್ಳುತ್ತಿದ್ದಾರೆ. ಜನವರಿ 24 ರ ನಂತರ ಅವರು ಬೆಂಗಳೂರಿಗೆ ಮರಳಿ ವಿಶ್ರಾಂತಿ ಪಡೆಯಲಿದ್ದಾರೆ
ನಟ ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದರ ಶಸ್ತ್ರಚಿಕಿತ್ಸೆ ಕೂಡ ಅವರು ಮಾಡಿಸಿಕೊಂಡಿದ್ದರು. ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಶಸ್ತ್ರಚಿಕಿತ್ಸೆ ನಡೆದಿತ್ತು. ಈಗ ಶಿವಣ್ಣ ಅವರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ಹೊಸ ಫೋಟೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರು ಆದಷ್ಟು ಬೇಗ ಭಾರತಕ್ಕೆ ಮರಳಲಿ ಎಂದು ಕೋರುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದರು. ಡಿಸೆಂಬರ್ 24ರಂದು ಅಮೆರಿಕದ ಫ್ಲೋರಿಡಾದಲ್ಲಿ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ನಾಲ್ಕೈದು ಗಂಟೆಗಳ ಕಾಲ ಸರ್ಜರಿ ನಡೆದಿತ್ತು. ಈಗ ಶಿವಣ್ಣ ಅವರು ಆಸ್ಪತ್ರೆ ಪಕ್ಕದಲ್ಲೇ ಇರುವ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕುಟುಂಬದ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ.
ಕ್ಯಾನ್ಸರ್ ಸರ್ಜರಿ ಯಶಸ್ವಿ ಆಗಿದ್ದರೂ ಕೆಲ ದಿನಗಳ ಕಾಲ ಅವರು ಅಲ್ಲಿಯೇ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಹೀಗಾಗಿ, ಜನವರಿ 24ರವರೆಗೆ ಶಿವರಾಜ್ಕುಮಾರ್ ಅಮೆರಿಕದಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆ ಬಳಿಕ ಅವರು ಬೆಂಗಳೂರಿಗೆ ಬಂದ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಶಿವರಾಜ್ಕುಮಾರ್ ಅವರು ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ.
Boss @NimmaShivanna eXclusive pic from USA 🤩❤️#shivanna #drshivarajkumar#shivarajkumar #shivuaDDa pic.twitter.com/gKBBFaboMe
— ಶಿವು ಅಡ್ಡ™ | shivu aDDa™ (@shivuaDDa) January 4, 2025
ಇತ್ತೀಚೆಗೆ ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಲೈವ್ ಬಂದಿದ್ದರು. ಈ ವೇಳೆ ಕ್ಯಾನ್ಸರ್ ಸರ್ಜರಿ ಬಗ್ಗೆ ಮಾತನಾಡಿದ್ದರು. ಶಿವರಾಜ್ಕುಮಾರ್ ಅವರು ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತ ಆಗಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಆಪರೇಷನ್ ಬಳಿಕ ಶಿವರಾಜ್ಕುಮಾರ್ ಹೆಲ್ತ್ಅಪ್ಡೇಟ್ ನೀಡಿದ ವೈದ್ಯರು
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಕಾರಣಕ್ಕೆ ಸಂಪೂರ್ಣವಾಗಿ ಜಿಮ್ ಹಾಗೂ ಎಕ್ಸಸೈಸ್ ಬಿಟ್ಟಿದ್ದರು. ಅವರು ಗುಣಮುಖರಾಗಿ ಮರಳಿದ ನಂತರ ಮತ್ತೆ ತಮ್ಮ ಕೆಲಸ ಆರಂಭಿಸಬೇಕಿದೆ.
ಶಿವರಾಜ್ಕುಮಾರ್ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಆರೋಗದ್ಯದ ಮೇಲೆ ಅವರು ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಹೋಂ ಬ್ಯಾನರ್ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಅವರು, ಇದರ ಪ್ರಚಾರದಲ್ಲಿ ಭಾಗಿ ಆದರು. ಈಗ ಅವರ ನಟನೆಯ ‘45’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:35 pm, Sat, 4 January 25