Bank Holidays: ಈ ನಗರಗಳಲ್ಲಿ ಈ ವಾರ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ

| Updated By: Srinivas Mata

Updated on: Sep 06, 2021 | 2:21 PM

ಈ ನಗರಗಳಲ್ಲಿ ಈ ವಾರ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ ಇರುತ್ತದೆ. ಯಾವುವು ಆ ನಗರಗಳು ಮತ್ತು ಯಾವ ಕಾರಣಕ್ಕೆ ರಜಾ ಎಂಬ ವಿವರ ಇಲ್ಲಿದೆ.

Bank Holidays: ಈ ನಗರಗಳಲ್ಲಿ ಈ ವಾರ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ರಜಾ
ಸಾಂದರ್ಭಿಕ ಚಿತ್ರ
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಬ್ಯಾಂಕ್ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 12 ರಜಾ ದಿನಗಳಿವೆ. ಅದರಲ್ಲೂ ಈ ವಾರವೇ ವಿವಿಧ ಹಬ್ಬಗಳಿಗೂ ಸೇರಿ 5 ದಿನ ರಜಾ ಇರುತ್ತದೆ ಎಂಬುದನ್ನು ಬ್ಯಾಂಕ್ ಗ್ರಾಹಕರು ತಿಳಿದಿರಬೇಕು. ಇವುಗಳಲ್ಲಿ ಎರಡನೇ ಶನಿವಾರ ಮತ್ತು ಭಾನುವಾರವೂ ಸೇರಿವೆ. ಕೆಲವು ನಗರಗಳಲ್ಲಿ ಬ್ಯಾಂಕ್​ಗಳು ಸತತವಾಗಿ ಐದು ದಿನಗಳವರೆಗೆ ಮುಚ್ಚಿರುತ್ತವೆ. ಆದ್ದರಿಂದ ನೀವು ಯಾವುದೇ ನಗರಗಳಲ್ಲಿ ವಾಸಿಸುತ್ತಿದ್ದರೂ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಬಯಸಿದರೆ ದಯವಿಟ್ಟು ಎಲ್ಲ ರಜಾ ದಿನಗಳನ್ನು ಗಮನಿಸಿ ಮತ್ತು ಅದಕ್ಕೆ ತಕ್ಕಂತೆ ನಿಮ್ಮ ಬ್ಯಾಂಕಿಂಗ್ ವಹಿವಾಟನ್ನು ಮಾಡಿ.

8 ಸೆಪ್ಟೆಂಬರ್ 2021- ಶ್ರೀಮಂತ ಸಂಕರದೇವರ ತಿಥಿ: ಗುವಾಹತಿಯಲ್ಲಿ ಬ್ಯಾಂಕ್ ಅನ್ನು ಮುಚ್ಚಲಾಗುವುದು.
9 ಸೆಪ್ಟೆಂಬರ್ 2021 – ತೀಜ್ (ಹರಿತಾಳಿಕ): ಗ್ಯಾಂಗ್ಟಕ್‌ನಲ್ಲಿ ಸೆಪ್ಟೆಂಬರ್ 9 ಮತ್ತು ಸೆಪ್ಟೆಂಬರ್ 10 ರಂದು ಕ್ರಮವಾಗಿ ತೀಜ್ (ಹರಿತಾಳಿಕಾ) ಮತ್ತು ಇಂದ್ರಜಾತ್ರಾದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು.
10 ಸೆಪ್ಟೆಂಬರ್ 2021- ಈ ತಿಂಗಳ ಪ್ರಮುಖ ರಜಾದಿನವೆಂದರೆ ಗಣೇಶ ಚತುರ್ಥಿ (ಸೆಪ್ಟೆಂಬರ್ 10). ಈ ದಿನ ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿಯಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲ್ಲ.
11 ಸೆಪ್ಟೆಂಬರ್ 2021- ಗಣೇಶ್ ಚತುರ್ಥಿ (2ನೇ ದಿನ) (ಎರಡನೇ ಶನಿವಾರ): ಗಣೇಶ ಚತುರ್ಥಿಯ ಎರಡನೇ ದಿನವಾದ ಶನಿವಾರದಂದು ಬ್ಯಾಂಕ್​ಗಳು ಮುಚ್ಚಿರುತ್ತವೆ.
12 ಸೆಪ್ಟೆಂಬರ್ 2021- ಭಾನುವಾರ ರಜೆ

ಎಲ್ಲ ಬ್ಯಾಂಕ್​ಗಳು ಸಾರ್ವಜನಿಕ ರಜಾ ದಿನಗಳಲ್ಲಿ ಮುಚ್ಚಿರುತ್ತವೆ ಮತ್ತು ಕೆಲವು ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಆದರೆ ಬ್ಯಾಂಕ್​ಗಳು ರಜಾ ಇದ್ದರೂ ಎಟಿಎಂಗಳು, ಇಂಟರ್​ನೆಟ್ ಬ್ಯಾಂಕಿಂಗ್ ಮತ್ತಿತರ ಡಿಜಿಟಲ್ ವ್ಯವಹಾರಗಳು ನಡೆಯುವುದಕ್ಕೆ ಏನೂ ಸಮಸ್ಯೆ ಆಗಲ್ಲ.

ಇದನ್ನೂ ಓದಿ: Bank Holidays: ನಿಮ್ಮ ವ್ಯವಹಾರ ಮಾಡುವಾಗ ಈ ದಿನಗಳನ್ನು ಗಮನಿಸಿ; ಸೆಪ್ಟೆಂಬರ್​ ತಿಂಗಳಲ್ಲಿ 12 ದಿನ ಬ್ಯಾಂಕ್ ರಜಾ

(Banking Holidays Banks In These Cities Will Shut For 5 Days This Week)