Mutual Funds: ಮ್ಯೂಚುವಲ್​ ಫಂಡ್ಸ್​ ಪ್ಲಾನ್​ನಲ್ಲಿ ಹೂಡಿಕೆ ಮಾಡುವಾಗ ಈ 5 ಅಂಶಗಳನ್ನು ಗಮನಿಸಿ

| Updated By: Srinivas Mata

Updated on: Mar 19, 2022 | 1:33 PM

ಹೂಡಿಕೆದಾರರು ಮ್ಯೂಚುವಲ್​ ಫಂಡ್​ ಪ್ಲಾನ್​ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಮುಂಚಿತವಾಗಿ ಈ ಐದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

Mutual Funds: ಮ್ಯೂಚುವಲ್​ ಫಂಡ್ಸ್​ ಪ್ಲಾನ್​ನಲ್ಲಿ ಹೂಡಿಕೆ ಮಾಡುವಾಗ ಈ 5 ಅಂಶಗಳನ್ನು ಗಮನಿಸಿ
ಸಾಂದರ್ಭಿಕ ಚಿತ್ರ
Follow us on

ಎಷ್ಟು ಸಾಧ್ಯವೋ ಅಷ್ಟು ದೀರ್ಘಾವಧಿಗೆ ಮ್ಯೂಚುವಲ್ ಫಂಡ್ಸ್​ನಲ್ಲಿ (Mutual Funds) ಹೂಡಿಕೆ ಮಾಡುವುದನ್ನು ಸಂಪತ್ತು ಸಂಗ್ರಹಿಸುವುದಕ್ಕೆ ಅತ್ಯುತ್ತಮ ವಿಧಾನ ಎಂಬ ಭಾವನೆ ಇದೆ. ಹಣದುಬ್ಬರದ ಬೆಳವಣಿಗೆಯನ್ನೂ ಮೀರಿಸುವಂಥ ಒಳ್ಳೆ ರಿಟರ್ನ್ಸ್ ನೀಡಬಲ್ಲ ಒಳ್ಳೆ ರಿಟರ್ನ್ಸ್ ಈ ಮ್ಯೂಚುವಲ್ ಫಂಡ್​ನಿಂದ ದೊರೆಯುತ್ತದೆ. ಆದರೆ ಮ್ಯೂಚುವಲ್ ಫಂಡ್​ ಪ್ಲಾನ್​ ಅನ್ನು ಆರಿಸಿಕೊಳ್ಳುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಆ ಬಗ್ಗೆಯೇ ಈ ಲೇಖನದಲ್ಲಿ ವಿವರಣಾತ್ಮಕವಾದ ಮಾಹಿತಿ ಇದೆ. ನೀವು ಮ್ಯೂಚುವಲ್ ಫಂಡ್ ಪ್ಲಾನ್ ಆಯ್ಕೆ ಮಾಡಿಕೊಳ್ಳುವಾಗ ಈ 5 ಮುಖ್ಯಾಂಶಗಳ ಕಡೆಗೆ ಗಮನ ನೀಡಿ.

1) ಸಮಾಯಾವಧಿ:
ಮ್ಯೂಚುವಲ್ ಫಂಡ್​ನಲ್ಲಿ ಎಷ್ಟು ಸಮಯ ಹೂಡಿಕೆ ಮಾಡಬೇಕು ಅಂದುಕೊಳ್ಳುತ್ತಾರೆ ಎಂಬುದು ಮೊದಲ ಹಾಗೂ ಅತಿ ಮುಖ್ಯವಾದ ಸಂಗತಿ. ಸಲಹೆಗಾರರು ಅದೇ ಮಾತನ್ನು ಹೇಳುತ್ತಾರೆ. ಫಂಡ್​ನ ವಿಭಾಗವನ್ನು ನಿರ್ಧಾರ ಮಾಡಬೇಕು. ಉದಾಹರಣೆಗೆ ದೀರ್ಘಾವಧಿಗೆ ಆದಲ್ಲಿ ಸ್ಮಾಲ್-ಕ್ಯಾಪ್ ಫಂಡ್ ಉತ್ತಮ ಆಯ್ಕೆ ಆಗುತ್ತದೆ. ಮಧ್ಯಮಾವಧಿಗೆ ಆದಲ್ಲಿ ಮಿಡ್​ಕ್ಯಾಪ್ ಫಂಡ್ ಉತ್ತಮ ಆಯ್ಕೆ ಆಗುತ್ತದೆ.

2) ವೆಚ್ಚದ ಅನುಪಾತ:
ಮ್ಯೂಚುವಲ್ ಫಂಡ್ ಕೆಟಗಿರಿ ಆಯ್ಕೆ ಮಾಡಿದ ಮೇಲೆ ಮ್ಯೂಚುವಲ್ ಫಂಡ್ ಪ್ಲಾನ್ ಆರಿಸಬೇಕು. ಆದರೆ ಮ್ಯೂಚುವಲ್ ಫಂಡ್ ಹೌಸ್​ಗಳು ಹೂಡಿಕೆದಾರರ ಪೋರ್ಟ್​ಫೋಲಿಯೋ ನಿರ್ವಹಣೆ ಮಾಡುವುದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಅದನ್ನು ವೆಚ್ಚದ ಅನುಪಾತ ಎನ್ನಲಾಗುತ್ತದೆ. ವಿಶ್ಲೇಷಕರ ಪ್ರಕಾರ, ಸರಾಸರಿ ವೆಚ್ಚದ ಅನುಪಾತ ಶೇ 1ರಿಂದ ಶೇ 3ರಷ್ಟು ಬದಲಾವಣೆ ಆಗುತ್ತದೆ. ಆದರೆ ಶೇ 2ಕ್ಕಿಂತ ಹೆಚ್ಚಿನ ವೆಚ್ಚದ ಅನುಪಾತ ಇರುವ ಕಡೆ ಹೂಡಿಕೆ ಮಾಡಬೇಕು ಎಂಬುದು ಸಲಹೆ.

3)ಎನ್​ಎವಿ:
ಮ್ಯೂಚಯವಲ್ ಫಂಡ್ ಪ್ಲಾನ್ ಆರಿಸಿಕೊಳ್ಳುವಾಗ ಹೂಡಿಕೆದಾರರು ನೆಟ್​ ಅಸೆಟ್ ವ್ಯಾಲ್ಯೂ (NAV) ಕೂಡ ಗಮನಿಸಬೇಕು. ಕಡಿಮೆ ಎನ್​ಎವಿ ಮೌಲ್ಯದ್ದು ಹೆಚ್ಚಿನ ರಿಟರ್ನ್ ನೀಡಬಹುದು. ಎನ್​ಎವಿ ಗಮನಿಸುವಾಗ ಹೂಡಿಕೆದಾರು ಟ್ರ್ಯಾಕ್ ರೆಕಾರ್ಡ್ ಮತ್ತು ಪ್ಲಾನ್​ನ ಫಂಡ್ ಮ್ಯಾನೇಜ್​ಮೆಂಟ್ ಗಮನಿಸಬೇಕು.

4) ಶಾರ್ಪೆ ರೇಷಿಯೋ:
ಮ್ಯೂಚುವಲ್​ ಫಂಡ್​ನ ಶಾರ್ಪೆ ರೇಷಿಯೋ ಅನ್ನು ಮ್ಯೂಚುವಲ್ ಫಂಡ್​ ಪ್ಲಾನ್​ನ ರಿಸ್ಕ್ ಅಡ್ಜಸ್ಟಡ್ ರಿಟರ್ನ್​ ಅನ್ನು ಲೆಕ್ಕ ಹಾಕುವುದಕ್ಕೆ ಬಳಸಲಾಗುತ್ತದೆ. ಅಪಾಯಕರ ಆಸ್ತಿಯನ್ನು ಇಟ್ಟುಕೊಳ್ಳುವುದರಿಂದ ಎಷ್ಟು ಹೆಚ್ಚುವರಿ ರಿಟರ್ನ್ ದೊರೆಯುತ್ತದೆ ಎಂಬುದನ್ನು ಪ್ರಾಥಮಿಕವಾಗಿ ಇದು ತಿಳಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಅದೆಷ್ಟು ರಿಟರ್ನ್ ನೀಡಿರುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಒಂದೇ ವಿಭಾಗ ಮ್ಯೂಚುವಲ್ ಫಂಡ್ ಪ್ಲಾನ್​ಗಳನ್ನು ಹೋಲಿಸುವಾಗ ಹೂಡಿಕೆ ಮಾಡುವವರು ಮ್ಯೂಚುವಲ್ ಫಂಡ್ಸ್ ಫಾರ್ಮುಲಾ ಬಳಸಬೇಕು.

5) ಟ್ರೇಯ್ನರ್ ಅನುಪಾತ:
ಏರಿಳಿತಗಳು ನೇರವಾಗಿ ಮ್ಯೂಚುವಲ್ ಫಂಡ್​ಗಳ ಏರಿಳಿತದೊಂದಿಗೆ ನೇರ ಸಂಬಂಧ ಹೊಂದಿದೆ. ಹೂಡಿಕೆದಾರರು ಹೂಡಿಕೆ ಮಾಡುವಾಗ ಮ್ಯೂಚುವಲ್​ ಫಂಡ್​ನ ಟ್ರೇಯ್ನರ್​ ರೇಷಿಯೋವನ್ನು ಗಮನಿಸಬೇಕು. ಮ್ಯೂಚುವಲ್​ ಫಂಡ್​ಗಳ ಮಾರುಕಟ್ಟೆ ಏರಿಳಿತಗಳ ಅಡ್ಜಸ್ಟಡ್ ರಿಟರ್ನ್ ಸೂಚಿಸುವುದು ಟ್ರೇಯ್ನರ್ ರೇಷಿಯೋ. ಮ್ಯೂಚುವಲ್ ಫಂಡ್ ಹೂಡಿಕೆಯು ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತದೆ. ಮ್ಯೂಚುವಲ್ ಫಂಡ್ ಪ್ಲಾನ್ ಹೋಲಿಸುವಾಗ ಟ್ರೇಯ್ನರ್ ರೇಷಿಯೋ ಗಮನಿಸಬೇಕು. ಇಡಿಗಂಟು ಮತ್ತು ಎಸ್​ಐಪಿ ಹೂಡಿಕೆ ಎರಡಕ್ಕೂ ಪ್ರತ್ಯೇಕ ಫಾರ್ಮುಲಾಗಳಿವೆ.

ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಆರಂಭಿಸಲು ಇದು ಸಕಾಲವೇ