Perplexity AI: ಏರ್​ಟೆಲ್ ಬಳಕೆದಾರರಿಗೆ 17,000 ರೂ ಮೌಲ್ಯದ ಪರ್​ಪ್ಲೆಕ್ಸಿಟಿ ಪ್ರೋ ಸಬ್​ಸ್ಕ್ರಿಪ್ಷನ್ ಉಚಿತ ಲಭ್ಯ

Bharti Airtel collaboration with Perplexity AI: ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್​ವೊಂದು ಸಿಕ್ಕಿದೆ. 17,000 ರೂ ಮೌಲ್ಯದ 12 ತಿಂಗಳ ಪರ್​ಪ್ಲೆಕ್ಸಿಟಿ ಪ್ರೋ ಸಬ್​ಸಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಏರ್ಟೆಲ್ ಥ್ಯಾಂಕ್ಸ್ ಆ್ಯಪ್​ನಲ್ಲಿ ಇದನ್ನು ಪಡೆಯಬಹುದು. 36 ಕೋಟಿ ಏರ್ಟೆಲ್ ಬಳಕೆದಾರರೆಲ್ಲರಿಗೂ ಇದು ಸಿಗುತ್ತದೆ. ವಿವಿಧ ಅಡ್ವಾನ್ಸ್ಡ್ ಎಐ ಮಾಡಲ್​ಗಳ ಸೇವೆ ಪರ್​ಪ್ಲೆಕ್ಸಿಟಿ ಪ್ರೋನಲ್ಲಿ ಲಭ್ಯ ಇರುತ್ತದೆ.

Perplexity AI: ಏರ್​ಟೆಲ್ ಬಳಕೆದಾರರಿಗೆ 17,000 ರೂ ಮೌಲ್ಯದ ಪರ್​ಪ್ಲೆಕ್ಸಿಟಿ ಪ್ರೋ ಸಬ್​ಸ್ಕ್ರಿಪ್ಷನ್ ಉಚಿತ ಲಭ್ಯ
ಏರ್ಟೆಲ್, ಪರ್​ಪ್ಲೆಕ್ಸಿಟಿ ಪ್ರೋ
Updated By: Digi Tech Desk

Updated on: Jul 17, 2025 | 12:25 PM

ನವದೆಹಲಿ, ಜುಲೈ 17: ಭಾರತದಲ್ಲಿ ಎಐ ಟೂಲ್​ಗಳು ನಿಧಾನವಾಗಿ ಜನಪ್ರಿಯವಾಗತೊಡಗಿವೆ. ಹೆಚ್ಚಿನ ಜನರು ಈಗಲೂ ಕೂಡ ಬೇಸಿಕ್ ವರ್ಷನ್ ಎಐ ಟೂಲ್​ಗಳನ್ನು ಬಳಸುತ್ತಿದ್ದಾರೆ. ಸುಧಾರಿತ ಎಐ ಟೂಲ್​ಗಳಿಗೆ (Advanced AI tools) ಸಬ್​ಸ್ಕ್ರಿಪ್ಷನ್ ಶುಲ್ಕ ಇರುವುದರಿಂದ ಹೆಚ್ಚಿನ ಜನರು ಮೂಲ ಆವೃತ್ತಿಗಳನ್ನು ಬಳಸುತ್ತಿದ್ದಾರೆ. ಇದೇ ವೇಳೆ, ಏರ್​ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಎಐ ಪ್ರೋ ಮಾಡಲ್ ಅನ್ನು ಉಚಿತವಾಗಿ ಸಿಗುವಂತೆ ಮಾಡಿದೆ. ಏರ್​ಟೆಲ್ ಗ್ರಾಹಕರು ಪರ್​ಪ್ಲೆಕ್ಸಿಟಿ ಪ್ರೋ (Perplexity Pro) ಮಾಡಲ್ ಅನ್ನು ಒಂದು ವರ್ಷಕ್ಕೆ ಸಬ್​ಸ್ಕ್ರಿಪ್ಷನ್ ಪಡೆಯಬಹುದು. ಅದೂ ಉಚಿತವಾಗಿ.

ಈ ಅಡ್ವಾನ್ಸ್ಡ್ ಎಐ ಮಾಡಲ್​ನ 12 ತಿಂಗಳ ಸಬ್​ಸ್ಕ್ರಿಪ್ಷನ್ ದರ 17,000 ರೂ ಇದೆ. ಏರ್ಟೆಲ್ ಗ್ರಾಹಕರು ಇಷ್ಟು ದೊಡ್ಡ ಮೌಲ್ಯದ ಸಾಧನವನ್ನು ಒಂದು ವರ್ಷ ಕಾಲ ಉಚಿತವಾಗಿ ಬಳಸಬಹುದಾಗಿದೆ.

ಏರ್​ಟೆಲ್ ಗ್ರಾಹಕರು Perplexity Pro ಅನ್ನು ಹೇಗೆ ಪಡೆಯುವುದು?

ಏರ್​ಟೆಲ್ ಗ್ರಾಹಕರು ಏರ್​ಟೆಲ್ ಥ್ಯಾಂಕ್ಸ್ ಆ್ಯಪ್​ನಲ್ಲಿ ಈ ಆಫರ್ ಪಡೆಯಬಹುದು. ಆ್ಯಪ್​ನಲ್ಲಿ ರಿವಾರ್ಡ್ಸ್ ಅಂಡ್ ಒಟಿಟಿ ಎನ್ನುವ ಸೆಕ್ಷನ್ ಒತ್ತಿದರೆ ಈ ಆಫರ್ ಅನ್ನು ಕಾಣಬಹುದು. ನಿಮ್ಮ ಇಮೇಲ್ ಐಡಿ ಹಾಕಿ ನೊಂದಾಯಿಸಿಕೊಳ್ಳಬಹುದು. ಬಹಳ ಸರಳವಾಗಿ ನೀವು Perplexity Pro ಅನ್ನು ಪಡೆಯಬಹುದು.

ಇದನ್ನೂ ಓದಿ: ಟೋಲ್ ಬಂದಾಗ ಕೈಯಲ್ಲಿ ಟ್ಯಾಗ್ ಹಿಡಿದು ತೋರಿಸ್ತಾರಾ? ಬ್ಲ್ಯಾಕ್​ಲಿಸ್ಟ್ ಆಗಲಿದೆ ನಿಮ್ಮ ಫಾಸ್​ಟ್ಯಾಗ್

ಹಲವು ಅಡ್ವಾನ್ಸ್ಡ್ ಮಾಡಲ್​ಗಳ ಅಗ್ರಿಗೇಟರ್ ಈ Perplexity Pro

Perplexity Pro ನಲ್ಲಿ ಕೆಲ ಪ್ರಮುಖ ಅಡ್ವಾನ್ಸ್ಡ್ ಎಐ ಮಾಡಲ್​ಗಳನ್ನು ಒಳಗೊಂಡಿರಲಾಗುತ್ತದೆ. ಪರ್​ಪ್ಲೆಕ್ಸಿಟಿಯ ಸೋನಾರ್ ಮತ್ತು ಆರ್1 1776, ಆಂಥ್ರೋಪಿಕ್​ನ ಕ್ಲಾಡ್ 4.0 ಸಾನೆಟ್ ಮತ್ತು ಸಾನೆಟ್ ಥಿಂಕಿಂಗ್ ಹಾಗೂ ಓಪಸ್ ಥಿಂಕಿಂಗ್, ಓಪನ್​ಎಐನ ಜಿಪಿಟಿ 4.1, ಒ3 ಮತ್ತು ಒ3 ಪ್ರೋ, ಗೂಗಲ್​ನ ಜೆಮಿನಿ 2.5 ಪ್ರೋ, ಎಕ್ಸ್​ಎಐನ ಗ್ರೋಕ್-4 ಇತ್ಯಾದಿ ಹೊಚ್ಚ ಹೊಸ ಹಾಗೂ ಶಕ್ತಿಶಾಲಿ ಎಐ ಮಾಡಲ್​ಗಳನ್ನು ಬಳಸಲು ಅವಕಾಶ ಇರುತ್ತದೆ.

Perplexity Pro ಅನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು?

ನೀವು ಯಾವುದೇ ಮಾಹಿತಿಯನ್ನಾದರೂ ಕೇಳಿದರೆ ಕ್ಷಣ ಮಾತ್ರದಲ್ಲಿ ನಿಮಗೆ ಉತ್ತರ ಸಿಗುತ್ತದೆ. ಬಹಳ ಆಳವಾದ ಸಂಶೋಧನೆಯ ಕೆಲಸಗಳನ್ನೂ ತ್ವರಿತವಾಗಿ ಇದು ಮಾಡಬಲ್ಲುದು.

ಇದನ್ನೂ ಓದಿ: ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್​ಬಿಐ ವರದಿಯಲ್ಲಿ ಆತಂಕ

ನೀವು ವಿವರಿಸಿದ ರೀತಿಯಲ್ಲಿ ಇಮೇಜ್ ಜನರೇಟ್ ಮಾಡುತ್ತದೆ. ಕೋಡಿಂಗ್ ಮಾಡಿಕೊಡಬಲ್ಲುದು. ಸರಳವಾದ ವೆಬ್ ಆ್ಯಪ್​ಗಳನ್ನು ತಯಾರಿಸಿಕೊಡಬಲ್ಲುದು.

ಭಾಷಣ, ಪ್ರೆಸೆಂಟೇಶನ್, ರಿಪೋರ್ಟ್, ಪ್ಲಾನಿಂಗ್ ಹೀಗೆ ನಾನಾ ರೀತಿಯ ಕೆಲಸಗಳನ್ನು ಎಐ ಮಾಡಲ್​ಗಳಿಂದ ಮಾಡಿಸಬಹುದು. ನೂರಾರು ಪುಟಗಳಷ್ಟಿರುವ ಪಿಡಿಎಫ್ ಫೈಲ್​ಗಳಲ್ಲಿರುವ ಮಾಹಿತಿಯಲ್ಲಿ ಮುಖ್ಯಾಂಶಗಳನ್ನು ಇದು ಹೆಕ್ಕಿ ತೆಗೆದು ನಿಮಗೆ ನೀಡಬಲ್ಲುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Thu, 17 July 25