AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bitcoin: ಬಿಟ್​ಕಾಯಿನ್​ ಬೆಲೆ ನವೆಂಬರ್​ ತಿಂಗಳ ಗರಿಷ್ಠ ಮಟ್ಟದಿಂದ ಶೇ 50ರಷ್ಟು ಕುಸಿತ

2021ರ ನವೆಂಬರ್​ನಲ್ಲಿ ತಲುಪಿದ್ದ ಗರಿಷ್ಠ ಮಟ್ಟದಿಂದ ಬಿಟ್​ಕಾಯಿನ್ ಶೇ 50ರಷ್ಟು ಇಳಿಕೆ ಕಂಡಿದೆ. ಷೇರು ಮಾರುಕಟ್ಟೆಯ ಏರಿಳಿತಕ್ಕೂ ಹಾಗೂ ಬಿಟ್​ಕಾಯಿನ್​ಗೂ ನೇರ ಸಂಬಂಧ ಇದೆ.

Bitcoin: ಬಿಟ್​ಕಾಯಿನ್​ ಬೆಲೆ ನವೆಂಬರ್​ ತಿಂಗಳ ಗರಿಷ್ಠ ಮಟ್ಟದಿಂದ ಶೇ 50ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 22, 2022 | 8:46 PM

Share

ಅತಿ ದೊಡ್ಡ ಡಿಜಿಟಲ್ ಆಸ್ತಿಯಾದ ಬಿಟ್​ಕಾಯಿನ್ (Bitcoin)​ ಶನಿವಾರದಂದು ನಷ್ಟವನ್ನು ವಿಸ್ತರಿಸಿಕೊಂಡಿದೆ. ನವೆಂಬರ್​ನಲ್ಲಿ ತಲುಪಿದ್ದ ದಾಖಲೆಯ ಮಟ್ಟದಿಂದ ಶೆಕಡಾ 50ಕ್ಕಿಂತ ಹೆಚ್ಚು, ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಾಖಲೆಯ ಮಟ್ಟವನ್ನು ತಲುಪಿದ ಬಿಟ್​ಕಾಯಿನ್​ ಅಲ್ಲಿಂದ ಕೆಳಗೆ ಇಳಿದು, ಮಾರುಕಟ್ಟೆ ಮೌಲ್ಯ 60,000 ಕೋಟಿ ಡಾಲರ್​ಗೂ ಹೆಚ್ಚನ್ನು ಕಳೆದುಕೊಂಡಿದೆ. ಮತ್ತು ಕ್ರಿಪ್ಟೋ ಮಾರುಕಟ್ಟೆಯಲ್ಲಿ ಸರಾಸರಿ 1 ಲಕ್ಷ ಕೋಟಿ ಡಾಲರ್ ಕಳೆದುಕೊಂಡಿದೆ. ಬಿಟ್​ಕಾಯಿನ್ ಮತ್ತು ಸರಾಸರಿ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಮೌಲ್ಯದಲ್ಲಿ ಕುಸಿತ ಕಂಡಿದೆ.

ಎರಡಕ್ಕೂ ಇದು ಡಾಲರ್​ ಮೌಲ್ಯದಲ್ಲಿ ಅತಿ ದೊಡ್ಡ ಇಳಿಕೆ ಇದಾಗಿದೆ ಎಂದು ಬೀಸ್ಪೋಕ್ ಇನ್​ವೆಸ್ಟ್​ಮೆಂಟ್ ಸಮೂಹವು ಹೇಳಿದೆ. ಅಮೆರಿಕದ ಫೆಡ್​ನ ಉದ್ದೇಶವು ಕ್ರಿಪ್ಟೋಕರೆನ್ಸಿಗಳು ಹಾಗೂ ಸ್ಟಾಕ್​ಗಳು ಎರಡರ ಮೇಲೂ ಪ್ರಭಾವ ಬೀರಿದೆ. ಡಿಜಿಟಲ್ ಆಸ್ತಿ ವರ್ಗದಲ್ಲಿ ಪ್ರಮುಖ ಥೀಮ್ ಕಾಣಿಸಿಕೊಂಡಿದೆ: ಕ್ರಿಪ್ಟೋಗಳ ಬದಲಾವಣೆಯು ಈಕ್ವಿಟಿಗಳಂತೆಯೇ ವರ್ತಿಸುತ್ತಿದೆ. ಕಾಯಿನ್​ಡೆಸ್ಕ್​ ಅನ್ನು ಉದಾಹರಿಸಿ ವಾಲ್​ಸ್ಟ್ರೀಟ್ ಜರ್ನಲ್ ವರದಿ ಮಾಡಿರುವಂತೆ, 2021ರ ಆಗಸ್ಟ್ ನಂತರದಲ್ಲಿ ಬಿಟ್​ಕಾಯಿನ್ ಡಾಲರ್​ ಮೌಲ್ಯದಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಬಿಟ್​ಕಾಯಿನ್ ಶನಿವಾರದಂದು ಶೇ 7.2ರಷ್ಟು ಇಳಿಕೆ ಕಂಡು, 34,042 ಡಾಲರ್​ಗೆ ಇಳಿದಿದೆ. ಬಿಟ್​ಕಾಯಿನ್ ದರದ ಏರಿಳಿತಕ್ಕೂ ಹಾಗೂ ಷೇರು ಮಾರುಕಟ್ಟೆಯ ಏರಿಳಿತಕ್ಕೂ 2020ರ ಸೆಪ್ಟೆಂಬರ್​ನಿಂದ ನೇರ ಸಂಬಂಧ ಇದೆ ಎಂಬುದು ಕಂಡುಬಂದಿದೆ. ಯಾವಾಗೆಲ್ಲ ಷೇರು ಮಾರುಕಟ್ಟೆ ಕುಸಿದಿದೆಯೋ ಆಗ ಬಿಟ್​ ಕಾಯಿನ್ ದರ ಕೂಡ ಕುಸಿತ ಕಂಡಿದೆ. ಶುಕ್ರವಾರದಂದು ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ನೆಟ್​ಫ್ಲಿಕ್ಸ್​ ಷೇರು ಸಹ ಶೇ 20ರಷ್ಟು ನೆಲ ಕಚ್ಚಿ, 4000 ಕೋಟಿ ಅಮೆರಿಕನ್ ಡಾಲರ್​ನಷ್ಟು ಮಾರುಕಟ್ಟೆ ಮೌಲ್ಯದ ನಷ್ಟ ಅನುಭವಿಸಿದೆ. ಅದೇ ರೀತಿ ಬಿಟ್​ಕಾಯಿನ್​ ಪರ್ಫಾರ್ಮೆನ್ಸ್​ ಟ್ರ್ಯಾಕ್ ಮಾಡುವ ಷೇರುಗಳ ದರ ಕೂ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿವೆ.

ಇದನ್ನೂ ಓದಿ: Cryptocurrencies: ಕ್ರಿಪ್ಟೋಕರೆನ್ಸಿಗಳಿಗೆ ಹೊಸ ತೆರಿಗೆ ಕಾನೂನು ತರಲು ಕೇಂದ್ರ ಸರ್ಕಾರದ ಚಿಂತನೆ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ