Subramanian Swamy: ಆರ್ಥಿಕತೆ, ಚೀನಾದ ಗಡಿ ವಿವಾದ ನಿರ್ವಹಣೆ ರೀತಿಗೆ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ

| Updated By: Srinivas Mata

Updated on: Dec 14, 2021 | 12:57 PM

ದೇಶದ ಆರ್ಥಿಕತೆ ಹಾಗೂ ಚೀನಾದ ಜತೆಗಿನ ಗಡಿ ತಂಟೆಯನ್ನು ನಿರ್ವಹಿಸುತ್ತಿರುವ ರೀತಿಗೆ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

Subramanian Swamy: ಆರ್ಥಿಕತೆ, ಚೀನಾದ ಗಡಿ ವಿವಾದ ನಿರ್ವಹಣೆ ರೀತಿಗೆ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ
ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us on

ದೇಶದ ಆರ್ಥಿಕ ಪರಿಸ್ಥಿತಿಯನ್ನು ಮುಂದೆ ಮಾಡಿಕೊಂಡು, ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ. ಪ್ರಧಾನಮಂತ್ರಿಗಾಗಲೀ ಅಥಚಾ ಹಣಕಾಸು ಸಚಿವೆಗಾಗಲೀ ಅರ್ಥಶಾಸ್ತ್ರದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಅಂದ ಹಾಗೆ ಸುಬ್ರಮಣಿಯನ್ ಸ್ವಾಮಿ ಅವರು ಈ ರೀತಿ ಟೀಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹೀಗೇ ಹೇಳಿದ್ದರು. ದೇಶದಲ್ಲಿ ಬೆಲೆ ಹೆಚ್ಚಳವಾಗಲು ಕೇಂದ್ರ ಹಣಕಾಸು ಸಚಿವೆಯೇ ಜವಾಬ್ದಾರಿ. ಅವರು ಯಾರ ಜತೆಗೂ ಈ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. “ಸರ್ಕಾರಕ್ಕೆ ಅರ್ಥಶಾಸ್ತ್ರವೇ ತಿಳಿಯುತ್ತಿಲ್ಲ. ಪ್ರಧಾನಮಂತ್ರಿಗಳಿಗಾಗಲೀ ವಿತ್ತ ಸಚಿವೆಗಾಗಲೀ ಅರ್ಥಶಾಸ್ತ್ರ ತಿಳಿದಿಲ್ಲ,” ಎಂದು ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿರುವ ಸ್ವಾಮಿ, ಈ ಬಗ್ಗೆ ಯಾರ ಬಳಿಯೂ ಚರ್ಚೆ ಕೂಡ ನಡೆಸುತ್ತಿಲ್ಲ ಎಂದಿದ್ದಾರೆ.

ಈಗ ಮಸೀದಿಗಳಾಗಿರುವ ಸ್ಥಳಗಳಲ್ಲಿ ಒಂದು ಕಾಲಕ್ಕೆ ಹಿಂದೂ ಶ್ರದ್ಧಾ ಕೇಂದ್ರಗಳು ಇದ್ದವು ಎಂದು ಕೆಲವು ಹಿಂದೂಪರ ಸಂಘಟನೆಗಳ ವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸ್ವಾಮಿ, ಹಿಂದೂ ಶ್ರದ್ಧಾ ಕೇಂದ್ರ (ವಿಶೇಷ ನಿಯಮಾವಳಿ) ಕಾಯ್ದೆ, 1991ರ ಹಿಂದಕ್ಕೆ ಪಡೆಯಲು ತಾವು ಹೂಡಿರುವ ಪ್ರಕರಣಕ್ಕೆ ಸರ್ಕಾರವು ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಉತ್ತರ ನೀಡಿದ್ದಾರೆ.

ಈ ಕಾಯ್ದೆ ಅಡಿಯಲ್ಲಿ, ಆಗಸ್ಟ್ 15, 1947ರಂದು ಧಾರ್ಮಿಕ ಕೇಂದ್ರಗಳು ಯಾವ ಸ್ವರೂಪದಲ್ಲಿ ಇದ್ದವೋ ಅದರಲ್ಲೇ ಉಳಿಸಬೇಕಾಗುತ್ತದೆ. ಅದರ ಮರುಸ್ಥಾಪನೆಗೆ ಅಥವಾ ಬದಲಾವಣೆಗೆ ಮೊಕದ್ದಮೆ ಹೂಡುವುದಕ್ಕೆ ಅವಕಾಶ ಇಲ್ಲ. ಕೆಲವು ಹಿಂದೂಪರ ಸಂಘಟನೆಗಳು ಮಥುರಾ ಮತ್ತು ಕಾಶಿಯಲ್ಲಿನ ಧಾರ್ಮಿಕ ಕೇಂದ್ರಗಳನ್ನು ಮರುಪಡೆಯುವಂತೆ ಒತ್ತಾಯಿಸುತ್ತಿವೆ.

ಇದರ ಜತೆಗೆ, ಚೀನಾದೊಂದಿಗಿನ ಗಡಿ ವಿವಾದವನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಸಮಾಧಾನ ಇಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಳೆ ಬೆಳಗ್ಗೆಯೊಳಗೆ ಮಾಳವಿಯಾನನ್ನು ಐಟಿ ಸೆಲ್​ನಿಂದ ಕಿತ್ತೊಗೆಯಿರಿ: ಸುಬ್ರಮಣಿಯನ್​ ಸ್ವಾಮಿ

Published On - 12:56 pm, Tue, 14 December 21