ಬ್ಲೂ ಆಧಾರ್ ಕಾರ್ಡ್ ಬಗ್ಗೆ ನೀವು ಕೇಳಿರಬೇಕು. ಇದು ಬಾಲ ಆಧಾರ್ ಕಾರ್ಡ್ (Bal Aadhaar Card). ಇದೂ ಕೂಡ ಒಂದು ವಿಧದ ಆಧಾರ್ ಕಾರ್ಡ್. 5 ವರ್ಷದೊಳಗಿನ ಮಕ್ಕಳಿಗೆ ಯುಐಡಿಎಐನಿಂದ ಕೊಡಲಾಗುವ ಬಾಲ್ ಆಧಾರ್ ಕಾರ್ಡ್. ಈ ಕಾರ್ಡ್ನ ಬಣ್ಣ ನೀಲಿಯದ್ದಾದ್ದರಿಂದ ಇದಕ್ಕೆ ಬ್ಲೂ ಆಧಾರ್ ಕಾರ್ಡ್ (Blue Aadhaar Card) ಎಂದೂ ಸಂಬೋಧಿಸುವುದುಂಟು. ಉಚಿತವಾಗಿ ಮಾಡಿಸಬಹುದಾದ ಈ ಬ್ಲೂ ಆಧಾರ್ ಕಾರ್ಡ್ಗೆ ಮಗುವಿನ ಫಿಂಗರ್ ಪ್ರಿಂಟ್ (Finger Print), ಕಣ್ಣಿನ ಸ್ಕ್ಯಾನ್ (Iris Scan) ಇತ್ಯಾದಿ ಬಯೋಮೆಟ್ರಿಕ್ ಮಾಹಿತಿಯ ಅಗತ್ಯ ಇರುವುದಿಲ್ಲ. ಈ ಮಗುವಿನ ವಯಸ್ಸು 5 ವರ್ಷ ದಾಟಿದ ಬಳಿಕ ಅದರ ಆಧಾರ್ ಕಾರ್ಡ್ನಲ್ಲಿ ಬಯೋಮೆಟ್ರಿಕ್ ಮಾಹಿತಿ ಸೇರಿಸಬೇಕಾಗುತ್ತದೆ. ಅಂದರೆ ಬಾಲ್ ಆಧಾರ್ ಕಾರ್ಡ್ ಹೊಂದಿರುವ ಮಗು 5 ವರ್ಷ ವಯಸ್ಸು ದಾಟುತ್ತಲೇ ಆಧಾರ್ ಕೇಂದ್ರಕ್ಕೆ ಹೋಗಿ ಅದರ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ನ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕು.
ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಮುಖ್ಯವಾಗಿರುವ ಒಂದು ದಾಖಲೆ. 5 ವರ್ಷದೊಳಗಿನ ಮಗುವಿಗೂ ಇದು ಅಗತ್ಯ ಬೀಳಬಹುದು. ಹೀಗಾಗಿ, ಬಹಳ ಮಂದಿ ಈಗ ಮಗು ಒಂದು ವರ್ಷ ತುಂಬುವುದರೊಳಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸುತ್ತಾರೆ.
ಬಾಲ್ ಆಧಾರ್ ಕಾರ್ಡ್ ಮಾಡಿಸಬೇಕಾದರೆ ಮಗುವಿನ ಜನನ ಪ್ರಮಾಣಪತ್ರ ನೀಡಬೇಕು. ಮತ್ತು ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಆಧಾರ್ ಕಾರ್ಡ್ ಬೇಕಾಗುತ್ತದೆ. ಬಾಲ್ ಆಧಾರ್ ಕಾರ್ಡ್ಗೆ ಒಬ್ಬ ಪೋಷಕರ ಆಧಾರ್ ನಂಬರ್ ಅನ್ನು ಲಿಂಕ್ ಮಾಡಲಾಗುತ್ತದೆ.
ಆನ್ಲೈನ್ನಲ್ಲಿ ಬೇಡ ಎನ್ನುವುದಾದರೆ ಎನ್ರೋಲ್ಮೆಂಟ್ ಕೇಂದ್ರಕ್ಕೆ ಹೋಗಿ ಅಲ್ಲಿ ನೊಂದಣಿ ದಿನಾಂಕವನ್ನು ಮುಂಗಡವಾಗಿ ಪಡೆದು ಬರಬಹುದು.
ಇದನ್ನೂ ಓದಿ: PAN, Aadhaar: ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ದುರ್ಬಳಕೆ ಆಗದೇ ಸುರಕ್ಷಿತವಾಗಿರುವಂತೆ ಏನು ಮಾಡಬೇಕು?