Sign In

By signing in or creating an account, you agree with Associated Broadcasting Company's Terms & Conditions and Privacy Policy.

BSE Share Buyback: ಟೆಂಡರ್ ಮೂಲಕ ಷೇರುದಾರರಿಂದ ಹೆಚ್ಚಿನ ಬೆಲೆಗೆ ಷೇರು ಖರೀದಿಸಲಿರುವ ಬಿಎಸ್​ಇ

Bombay Stock Exchange Company: ಜುಲೈ 6ರಂದು ಅಂತ್ಯಗೊಂಡ ಷೇರುಬೆಲೆಗಿಂತ ಶೇ. 19ರಷ್ಟು ಹೆಚ್ಚಿನ ಬೆಲೆಗೆ ಷೇರುಗಳನ್ನು ಮರುಖರೀದಿಸಲು ಬಿಎಸ್​ಇ ಸಂಸ್ಥೆ ನಿರ್ಧರಿಸಿದೆ. 816 ರು ಬೆಲೆಯಂತೆ 375 ಕೋಟಿ ರೂ ಮೌಲ್ಯದ ಷೇರುಗಳನ್ನು ಟೆಂಡರ್ ಮೂಲಕ ಬಿಎಸ್​ಇ ಖರೀದಿಸಲಿದೆ.

BSE Share Buyback: ಟೆಂಡರ್ ಮೂಲಕ ಷೇರುದಾರರಿಂದ ಹೆಚ್ಚಿನ ಬೆಲೆಗೆ ಷೇರು ಖರೀದಿಸಲಿರುವ ಬಿಎಸ್​ಇ
ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2023 | 6:39 PM

ನವದೆಹಲಿ: ಷೇರು ವಹಿವಾಟಿನ ಪ್ಲಾಟ್​ಫಾರ್ಮ್ ಆಗಿರುವ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆ (BSE Company) ಇದೀಗ ತನ್ನದೇ ಷೇರುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಮರುಖರೀದಿಸುತ್ತಿದೆ (Share Buyback). ಟೆಂಡರ್ ಮೂಲಕ 375 ಕೋಟಿ ರೂವರೆಗೆ ಷೇರು ಮರುಖರೀದಿ ಪ್ರಕ್ರಿಯೆಗೆ ಬಿಎಸ್​ಇ ಮಂಡಳಿ ಜುಲೈ 6ರಂದು ಅನುಮೋದನೆ ನೀಡಿದೆ. ಜುಲೈ 6ರಂದು ಇದ್ದುದಕ್ಕಿಂತ ಶೇ. 19ರಷ್ಟು ಹೆಚ್ಚು ಬೆಲೆಗೆ ಷೇರು ಮರುಖರೀದಿಗೆ ಮಂಡಳಿ ಒಪ್ಪಿಗೆ ಕೊಟ್ಟಿದೆ. ಅಂದರೆ, ಜುಲೈ 6ರ ಅಂತ್ಯದಲ್ಲಿ ಬಿಎಸ್​ಇ ಷೇರುಬೆಲೆ 705.40 ರೂ ಇದೆ. ಈಗ 816 ರೂಗೆ ಬಿಎಸ್​ಇ ತನ್ನ ಷೇರುಗಳನ್ನು ಖರೀದಿಸಲಿದೆ.

ಟೆಂಡರ್ ಮೂಲಕ ಈ ಪ್ರಕ್ರಿಯೆ ನಡೆಯಲಿದೆ. ಮರುಖರೀದಿ ಸಮಿತಿ ಅಥವಾ ಬಯ್​ಬ್ಯಾಕ್ ಕಮಿಟಿ ಈ ಟೆಂಡರ್ ದಿನಾಂಕವನ್ನು ನಿಗದಿಪಡಿಸಲಿದೆ. ಒಟ್ಟು 375 ಕೋಟಿ ರೂ ಮೊತ್ತದ ಷೇರುಗಳನ್ನು ಖರೀದಿಸಲಾಗುತ್ತದೆ. ಬಿಎಸ್​ಇ ಕಂಪನಿಯ ಒಟ್ಟು ಷೇರುಗಳಲ್ಲಿ ಶೇ. 3.39ರಷ್ಟನ್ನು ಅದು ಮರುಖರೀದಿಸುತ್ತದೆ. 45,93,137 ಈಕ್ವಿಟಿ ಷೇರುಗಳನ್ನು ಬಿಎಸ್​ಇ ಖರೀದಿಸುತ್ತಿರುವುದರಿಂದ ಒಟ್ಟು ಸಾರ್ವಜನಿಕ ವಹಿವಾಟಿಗೆ ಲಭ್ಯ ಇರುವ ಷೇರುಗಳ ಸಂಖ್ಯೆ ಕಡಿಮೆ ಆಗುತ್ತದೆ.

ಇದನ್ನೂ ಓದಿMultibagger: ಮಲ್ಟಿಬ್ಯಾಗರ್ ಆದ ಜೆಎಸ್​ಡಬ್ಲ್ಯೂ ಎನರ್ಜಿ ಷೇರು; 3 ವರ್ಷದಲ್ಲಿ ಸೂಪರ್ ಜಿಗಿತ; 1 ಲಕ್ಷಕ್ಕೆ 8 ಲಕ್ಷ ಲಾಭ; ಇನ್ನೂ ಏರುತ್ತಂತೆ ಬೆಲೆ

ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್ ಮುಂಬೈನಲ್ಲಿ 1875ರಲ್ಲಿ ಸ್ಥಾಪನೆಯಾಗಿದ್ದು. ಪ್ರೇಮಚಂದ್ ರಾಯಚಂದ್ ಅವರು ಶುರುಮಾಡಿದ ಇದು ಭಾರತ ಮಾತ್ರವಲ್ಲ ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್ ಎನಿಸಿದೆ. ವಿಶ್ವದ 10ನೇ ಅತ್ಯಂತ ಹಳೆಯ ಷೇರುವಿನಿಮಯ ಕೇಂದ್ರವೂ ಅದು. ಬಿಎಸ್​ಇ ಎಂಬುದು ಸ್ವತಃ ಒಂದು ಕಂಪನಿ. 2017ರಲ್ಲಿ ಇದು ತನ್ನ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಯಿತು. ಹೀಗೆ ಷೇರುಪೇಟೆಯಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಸ್ಟಾಕ್ ಎಕ್ಸ್​ಚೇಂಜ್ ಕೂಡ ಅದಾಗಿದೆ.

ಇದೂ ಸೇರಿ ಒಟ್ಟು 5,300ಕ್ಕೂ ಹೆಚ್ಚು ಕಂಪನಿಗಳು ಬಿಎಸ್​ಇನಲ್ಲಿ ಲಿಸ್ಟ್ ಆಗಿವೆ. ಇವೆಲ್ಲಾ ಕಂಪನಿಗಳ ಷೇರುಸಂಪತ್ತು 280 ಲಕ್ಷ ಕೋಟಿಗೂ ಅಧಿಕ. ವಿಶ್ವದಲ್ಲಿ ಅತಿಹೆಚ್ಚು ಷೇರುಸಂಪತ್ತು ಇರುವ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳಲ್ಲಿ ಬಿಎಸ್​ಇ ಒಂದು. ಭಾರತದಲ್ಲಿರುವ ಇನ್ನೊಂದು ಪ್ರಮುಖ ಸ್ಟಾಕ್ ಎಕ್ಸ್​ಚೇಂಜ್ ಪ್ಲಾಟ್​ಫಾರ್ಮ್ ಎಂದರೆ ಎನ್​ಎಸ್​ಇ. ಅದು ಹೆಚ್ಚು ಉನ್ನತ ತಂತ್ರಜ್ಞಾನದಿಂದ ಕೂಡಿದ್ದಾಗಿದೆ. ಹಲವು ಕಂಪನಿಗಳು ಎರಡೂ ಪ್ಲಾಟ್​ಫಾರ್ಮ್​ಗಳಲ್ಲಿ ಷೇರುಗಳನ್ನು ಲಿಸ್ಟ್ ಮಾಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ