AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Silver: ಬಂದಿದೆ ಡಿಜಿಟಲ್ ಬೆಳ್ಳಿ; ಪೇಟಿಎಂ, ಫೋನ್​ಪೇಯಲ್ಲೂ ಖರೀದಿಗೆ ಲಭ್ಯ

ಡಿಜಿಟಲ್ ಚಿನ್ನದ ಮಾದರಿಯಲ್ಲಿಯೇ ಕನಿಷ್ಠ 1 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಬಹುದಾಗಿದೆ. ಭೌತಿಕ ಬೆಳ್ಳಿ ಖರೀದಿಯಿಂದ ದೊರೆಯುವ ಎಲ್ಲ ಪ್ರಯೋಜನಗಳೂ ಡಿಜಿಟಲ್ ಬೆಳ್ಳಿಯಲ್ಲಿ ದೊರೆಯಲಿವೆ. ಜತೆಗೆ ಹಲವು ಹೆಚ್ಚುವರಿ ಪ್ರಯೋಜನಗಳು ಡಿಜಿಟಲ್ ಬೆಳ್ಳಿಯಲ್ಲಿವೆ ಎಂದು ಕಂಪನಿ ಹೇಳಿದೆ.

Digital Silver: ಬಂದಿದೆ ಡಿಜಿಟಲ್ ಬೆಳ್ಳಿ; ಪೇಟಿಎಂ, ಫೋನ್​ಪೇಯಲ್ಲೂ ಖರೀದಿಗೆ ಲಭ್ಯ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Feb 09, 2023 | 3:45 PM

Share

ನವದೆಹಲಿ: ಡಿಜಿಟಲ್ ಚಿನ್ನದ (Digital Gold) ಮಾದರಿಯಲ್ಲಿಯೇ ಇನ್ನು ಮುಂದೆ ಫೋನ್​ಪೇ, ಪೇಟಿಎಂ ಇತ್ಯಾದಿ ಆ್ಯಪ್​ಗಳ ಮೂಲಕ ಡಿಜಿಟಲ್ ಬೆಳ್ಳಿಯನ್ನೂ (Digital Silver) ಖರೀದಿಸಬಹುದಾಗಿದೆ. ಎಂಎಂಟಿಸಿ-ಪಿಎಎಂಪಿ ಕಂಪನಿಯು ಡಿಜಿಟಲ್ ಬೆಳ್ಳಿಯನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು 999.9+ ಶುದ್ಧತೆಯ ಬೆಳ್ಳಿಯನ್ನು ಕಂಪನಿಯ ವೆಬ್​ಸೈಟ್ ಮತ್ತು ಸಹಭಾಗಿತ್ವ ಹೊಂದಿರುವ ಪೇಟಿಎಂ, ಫೋನ್​ಪೇ ಹಾಗೂ ಇತರ ಆ್ಯಪ್​ಗಳ ಮೂಲಕ ಖರೀದಿಸಬಹುದಾಗಿದೆ ಎಂದು ತಿಳಿಸಿದೆ. ಭೌತಿಕ ಬೆಳ್ಳಿಗೆ ಸಮ ಪ್ರಮಾಣದ ಡಿಜಿಟಲ್ ಬೆಳ್ಳಿ ಖರೀದಿಗೆ ಲಭ್ಯವಿರಲಿದೆ. ಡಿಜಿಟಲ್ ರೂಪದಲ್ಲಿ ಖರೀದಿಸಿದ ಬೆಳ್ಳಿಯನ್ನು ಪ್ರಮಾಣೀಕೃತ ಬ್ಯಾಂಕ್​ನ ಸುರಕ್ಷಿತ ಖಜಾನೆಯಲ್ಲಿ ಇಡಲಾಗುತ್ತದೆ. ವಿಶ್ವಾಸಾರ್ಹ ಮಧ್ಯವರ್ತಿ ಸಂಸ್ಥೆ ಅದರ ಸ್ಥಿತಿಗತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿರಲಿದೆ ಎಂದು ಕಂಪನಿ ಹೇಳಿದೆ.

ಗ್ರಾಹಕರು ಬ್ಯಾಂಕ್​​ನ ಖಜಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅವರು ಆನ್​​ಲೈನ್ ಮೂಲಕ ತಾವು ಹೊಂದಿರುವ ಬೆಳ್ಳಿಯನ್ನು ಪರಿಶೀಲಿಸುತ್ತಿರಬಹುದು. ರಿಯಲ್​ಟೈಮ್​ನಲ್ಲಿ ಅದನ್ನು ಹೊಂದಬಹುದು ಎಂದು ಎಂಎಂಟಿಸಿ-ಪಿಎಎಂಪಿ ಕಂಪನಿಯ ಮುಖ್ಯ ಡಿಜಿಟಲ್ ಅಧಿಕಾರಿ ಅಮುಲ್ ಸಾಹಾ ತಿಳಿಸಿದ್ದಾರೆ.

ಹೇಗಿರಲಿದೆ ಡಿಜಿಟಲ್ ಬೆಳ್ಳಿ?

ಡಿಜಿಟಲ್ ಚಿನ್ನದ ಮಾದರಿಯಲ್ಲಿಯೇ ಕನಿಷ್ಠ 1 ರೂ.ನಿಂದ ಡಿಜಿಟಲ್ ಬೆಳ್ಳಿ ಖರೀದಿಸಬಹುದಾಗಿದೆ. ಭೌತಿಕ ಬೆಳ್ಳಿ ಖರೀದಿಯಿಂದ ದೊರೆಯುವ ಎಲ್ಲ ಪ್ರಯೋಜನಗಳೂ ಡಿಜಿಟಲ್ ಬೆಳ್ಳಿಯಲ್ಲಿ ದೊರೆಯಲಿವೆ. 24/7 ಲಭ್ಯತೆ, ಖಾತರಿಪಡಿಸಿದ ಪರಿಶುದ್ಧತೆ, ಕಡಿಮೆ ಮೊತ್ತದಲ್ಲಿಯೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅವಕಾಶ, ಮೇಕಿಂಗ್ ಶುಲ್ಕ ಇಲ್ಲದಿರುವುದು ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳು ಡಿಜಿಟಲ್ ಬೆಳ್ಳಿಯಲ್ಲಿವೆ ಎಂದು ಕಂಪನಿ ಹೇಳಿದೆ.

ಯಾವಾಗ ಬೇಕಿದ್ದರೂ ವಾಪಸ್ ಪಡೆಯಿರಿ

ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಡಿಜಿಟಲ್ ಬೆಳ್ಳಿಯನ್ನು ಕಂಪನಿ ನೀಡುವ ಯಾವುದೇ ಉತ್ಪನ್ನದ ರೂಪದಲ್ಲಿ ಭೌತಿಕ ರೂಪದಲ್ಲಿ ಪಡೆಯಲು ಅವಕಾಶವಿದೆ. ಆದರೆ, ಗ್ರಾಹಕರಿಗೆ ಬೇಕಾದ ರೂಪದಲ್ಲಿ ಪಡೆಯುವ (ಕಸ್ಟಮ್ ಮೇಡ್) ಆಯ್ಕೆ ಇರುವುದಿಲ್ಲ. ಡಿಜಿಟಲ್ ಬೆಳ್ಳಿಯನ್ನು ಭೌತಿಕ ಬೆಳ್ಳಿಯಾಗಿ ಖರೀದಿ ಮಾಡುವುದಿದ್ದರೆ ಆಗ ಮೇಕಿಂಗ್ ಶುಲ್ಕ ನೀಡಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ

ಜನವರಿ 30ರಂದೇ ಡಿಜಿಟಲ್ ಬೆಳ್ಳಿ ಮಾರಾಟ ಆರಂಭಿಸಲಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದೂ ಅಮುಲ್ ಸಾಹಾ ಹೇಳಿದ್ದಾರೆ. ಪ್ರಸ್ತುತ ಕಂಪನಿಯ ಲಾಕರ್​​ನಲ್ಲೇ ಉಚಿತವಾಗಿ ಬೆಳ್ಳಿ ಸಂಗ್ರಹಿಸಲು ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಪ್ರೊಸೆಸಿಂಗ್ ಶುಲ್ಕವೂ ಇರುವುದಿಲ್ಲ. ಆದರೆ ಶೇ 3ರ ಜಿಎಸ್​ಟಿ ಪಾವತಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು