AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೆಲ ಕಳೆದುಕೊಳ್ಳುವ ಆತಂಕದಲ್ಲಿ ಬೈಜುಸ್​ ಉದ್ಯೋಗಿಗಳು; ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಬೈಜೂಸ್​ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್

BYJU'S To Layoff 11pc Employees: ವೆಚ್ಚ ಕಡಿತ ಮತ್ತು ಕಂಪನಿ ಪುನಾರಚನೆಯ ಭಾಗವಾಗಿ ಬೈಜುಸ್​ನ ಬಹಳಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಕಂಪನಿಯ ಈ ಹೊಸ ಸುತ್ತಿನ ಲೇ ಆಫ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 4,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಬೈಜುಸ್​ನಲ್ಲಿರುವ 35 ಸಾವಿರ ಮಂದಿ ಉದ್ಯೋಗಿಗಳಲ್ಲಿ ಶೇ. 11ರಷ್ಟು ಮಂದಿ ಕೆಲಸ ಕಳೆದುಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿಯಲ್ಲಿ ಹೇಳಿದೆ.

ಮತ್ತೆ ಕೆಲ ಕಳೆದುಕೊಳ್ಳುವ ಆತಂಕದಲ್ಲಿ ಬೈಜುಸ್​ ಉದ್ಯೋಗಿಗಳು; ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಬೈಜೂಸ್​ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್
ಬೈಜುಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 12:40 PM

Share

ಬೆಂಗಳೂರು, ಸೆಪ್ಟೆಂಬರ್ 27: ಸಾಲ ಮತ್ತು ವಿವಾದಗಳಿಂದ ಬಾಧಿತವಾಗಿರುವ ಭಾರತದ ಪ್ರಮುಖ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (BYJU’S) ಮತ್ತೊಂದು ಸುತ್ತಿನ ಲೇ ಆಫ್​ಗೆ ಕೈ ಹಾಕಲು ನಿರ್ಧರಿಸಿದೆ. ಬಿಸಿನೆಸ್ ಟುಡೇ ವಾಹಿನಿಯಲ್ಲಿ ಬಂದಿರುವ ವರದಿ ಪ್ರಕಾರ ವೆಚ್ಚ ಕಡಿತ ಮತ್ತು ಕಂಪನಿ ಪುನಾರಚನೆಯ (Restructuring) ಭಾಗವಾಗಿ ಬೈಜುಸ್​ನ ಬಹಳಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಕಂಪನಿಯ ಈ ಹೊಸ ಸುತ್ತಿನ ಲೇ ಆಫ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 4,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ (Job Loss) ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಬೈಜುಸ್​ನಲ್ಲಿರುವ 35 ಸಾವಿರ ಮಂದಿ ಉದ್ಯೋಗಿಗಳಲ್ಲಿ ಶೇ. 11ರಷ್ಟು ಮಂದಿ ಕೆಲಸ ಕಳೆದುಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿಯಲ್ಲಿ ಹೇಳಿದೆ.

ಇಷ್ಟು ಅಗಾಧ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಬೈಜುಸ್​ನಿಂದ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. ಆದರೆ, ಬಿಸಿನೆಸ್ ರೀಸ್ಟ್ರಕ್ಚರಿಂಗ್ ಕಾರ್ಯದ ಅಂತಿಮ ಹಂತದಲ್ಲಿದ್ದೇವೆ ಎಂದು ಮಾಧ್ಯಮಗಳಿಗೆ ಬೈಜುಸ್​ನ ವಕ್ತಾರರು ತಿಳಿಸಿದ್ದಾರೆ.

‘ಕಾರ್ಯಾಚರಣೆ ರಚನೆಯನ್ನು (Operational structure) ಸರಳಗೊಳಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಗದು ಹರಿವಿನ ನಿರ್ವಹಣೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವ್ಯವಹಾರ ಪುನಾರಚನೆ (business restructuring) ಕಾರ್ಯದ ಅಂತಿಮ ಹಂತದಲ್ಲಿದ್ದೇವೆ,’ ಎಂದು ಬೈಜುಸ್​ನ ವಕ್ತಾರರು ಪ್ರತಿಕ್ರಿಯಿಸಿದರೆಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

ಇದನ್ನೂ ಓದಿ: ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ

ಕೆಲ ವಾರಗಳ ಹಿಂದಷ್ಟೇ ಬೈಜುಸ್​ನ ಭಾರತ ವಿಭಾಗಕ್ಕೆ ಹೊಸ ಸಿಇಒ ಆಗಿ ಬಂದಿರುವ ಅರ್ಜುನ್ ಮೋಹನ್ ಅವರ ನೇತೃತ್ವದಲ್ಲಿ ಮುಂದಿನ ಕೆಲ ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ.

ಸಾಲು ಸಾಲು ರಾಜೀನಾಮೆ

ಸಿಇಒ ಆಗಿ ಮೃಣಾಲ್ ಮೋಹಿತ್ ಅವರ ಸ್ಥಾನವನ್ನು ತುಂಬುವ ಮುನ್ನ ಅರ್ಜುನ್ ಮೋಹನ್ ಅವರು ಬೈಜುಸ್​ನ ಚೀಫ್ ಬಿಸಿನೆಸ್ ಆಫೀಸರ್ ಆಗಿದ್ದರು. ಮೃಣಾಲ್ ಮೋಹಿತ್ ಅವರು ಬೈಜುಸ್​ನ ಪ್ರತಿಸ್ಪರ್ಧಿ ಅಪ್​ಗ್ರಾಡ್ ಅನ್ನು ಸೇರಿಕೊಂಡಿದ್ದಾರೆ. ಅವರಷ್ಟೇ ಅಲ್ಲ, ಬೈಜುಸ್​ನ ಇತರ ನಾಲ್ವರು ಹಿರಿಯ ಎಕ್ಸಿಕ್ಯೂಟಿವ್​ಗಳಾದ ಪ್ರತ್ಯುಶಾ ಅಗರ್ವಾಲ್, ಹಿಮಾಂಶು ಬಜಾಜ್, ಮುಕುತ್ ದೀಪಕ್ ಮತ್ತು ಚೆರಿಯನ್ ಥಾಮಸ್ ಅವರೂ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!

ಸಾಕಷ್ಟು ಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಬೈಜುಸ್​ನ ಚುಕ್ಕಾಣಿ ಹಿಡಿದಿರುವ ಅರ್ಜುನ್ ಮೋಹನ್ ಅವರಿಗೆ ಗುರುತರ ಜವಾಬ್ದಾರಿಗಳಿವೆ. ಹಣಕಾಸು ಸಂಕಷ್ಟದಲ್ಲಿರುವ ಬೈಜುಸ್​ಗೆ ಫಂಡಿಂಗ್ ತರುವುದು, ವೆಚ್ಚ ಕಡಿತ ಮಾಡುವುದು, ಬಿಸಿನೆಸ್ ಹೆಚ್ಚಿಸುವುದು ಹೇಗೆ ಕಠಿಣ ಸವಾಲುಗಳಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗಕಡಿತದಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೈಜುಸ್​ಗೆ ಅನಿವಾರ್ಯವಾಗಬಹುದು.

ಬೈಜುಸ್ ಈ ಮುಂಚೆ ಮೂರ್ನಾಲ್ಕು ಬಾರಿ ಲೇ ಆಫ್ ಮಾಡಿದ್ದಿದೆ. ಕಳೆದ ವರ್ಷ 2,500 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಈಗ 4,000 ಮಂದಿ ಕೆಲಸ ಕಳೆದುಕೊಳ್ಳುವುದು ನಿಜವೇ ಆದಲ್ಲಿ ಬೈಜುಸ್​ನಿಂದ ಆಗಿರುವ ಅತಿದೊಡ್ಡ ಲೇ ಆಫ್ ಎನಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ