AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Car Loan: ಈ ಸಾರ್ವಜನಿಕ, ಖಾಸಗಿ ಬ್ಯಾಂಕ್​ಗಳಲ್ಲಿ ಕಾರು ಸಾಲದ ಮೇಲಿನ ಬಡ್ಡಿ ಶೇಕಡಾ 8ರೊಳಗೆ ಶುರು

ಭಾರತದ ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್​ಗಳಲ್ಲಿ ಕಾರುಗಳ ಮೇಲಿನ ಬಡ್ಡಿ ದರದ ವಿವರ ಇಲ್ಲಿದೆ. ಬಹುತೇಕ ಬ್ಯಾಂಕ್​ಗಳಲ್ಲಿ ಬಡ್ಡಿ ದರವು ಶೇ 8ರೊಳಗೆ ಆರಂಭ ಆಗುತ್ತದೆ.

Car Loan: ಈ ಸಾರ್ವಜನಿಕ, ಖಾಸಗಿ ಬ್ಯಾಂಕ್​ಗಳಲ್ಲಿ ಕಾರು ಸಾಲದ ಮೇಲಿನ ಬಡ್ಡಿ ಶೇಕಡಾ 8ರೊಳಗೆ ಶುರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 22, 2021 | 6:03 PM

ಕಾರು ಖರೀದಿ ಮಾಡಬೇಕು ಅಂತಿದ್ದೀರಾ? ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಈ ಋತುವು ಸರಿಯಾದ ಸಮಯ ಆಗಲಿದೆ. ಈ ಹಬ್ಬದ ಋತುವಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್​ಗಳಿಂದ ಆಕರ್ಷಕ ಆಫರ್​ಗಳನ್ನು ನೀಡಲಾಗುತ್ತಿದೆ. ಈ ವರೆಗಿನ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವಾಹನ ಖರೀದಿದಾರರಿಗೆ ಸಾಲ ದೊರೆಯುತ್ತಿದೆ. ಹಲವು ಬ್ಯಾಂಕ್​ಗಳು ಪ್ರೊಸೆಸಿಂಗ್​ ಶುಲ್ಕವನ್ನು ಹಿಂಪಡೆದಿವೆ. ಇನ್ನೂ ಕೆಲವು ಬ್ಯಾಂಕ್​ಗಳು ವಾಹನದ ಆನ್​- ರೋಡ್​ ಬೆಲೆಯ ಶೇ 90ರ ತನಕ ಸಾಲ ದೊರೆಯುತ್ತದೆ. ಸದ್ಯಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ಅಗ್ಗದ ವಾಹನ ಸಾಲ ಒದಗಿಸುತ್ತಿದೆ. ದರ ಪರಿಷ್ಕರಣೆ ನಂತರ ಶೇ 0.50ರಷ್ಟು ಇಳಿಕೆ ಮಾಡಲಾಗಿದೆ. ಆ ನಂತರ ಬಡ್ಡಿ ದರವು ವಾರ್ಷಿಕ ಶೇ 6.85 ಆಗಿದೆ. ಉಳಿದ ಪ್ರಮುಖ ಬ್ಯಾಂಕ್​ಗಳಾದ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್​ ನ್ಯಾಷನಲ್ ಬ್ಯಾಂಕ್​ನಲ್ಲಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಸದ್ಯಕ್ಕೆ ಶೇ 7.25ರ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ. ಅಷ್ಟೇ ಅಲ್ಲ, ಕಾರಿನ ಆನ್​ ರೋಡ್​ ಬೆಲೆಯ ಶೇ 90ರ ತನಕ ಸಾಲ ದೊರೆಯುತ್ತದೆ. 5 ಲಕ್ಷ ರೂಪಾಯಿಯ ಸಾಲ ಆಗಿ, ಐದು ವರ್ಷದ ಅವಧಿಗೆ ಆದಲ್ಲಿ ಪ್ರತಿ ತಿಂಗಳು 9960 ರೂಪಾಯಿ ಇಎಂಐ ಬರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಬ್ಬದ ಸೀಸನ್​ ಪ್ರಯುಕ್ತ ದೇಶದ ಎರಡನೇ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಚೆಗೆ ಬಡ್ಡಿ ದರವನ್ನು ಇಳಿಕೆ ಮಾಡಿದ್ದು, ಶೇ 7.15ರ ದರದಲ್ಲಿ ಆರಂಭವಾಗುತ್ತದೆ. ಇದರ ಜತೆಗೆ ಗ್ರಾಹಕರು ಪ್ರೊಸೆಸಿಂಗ್ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಯಾವ ಗ್ರಾಹಕರು 5 ಲಕ್ಷ ರೂಪಾಯಿ ಸಾಲವನ್ನು 5 ವರ್ಷದ ಅವಧಿಗೆ ಪಡೆಯುತ್ತಾರೋ ಅಂಥವರಿಗೆ ಪ್ರತಿ ತಿಂಗಳಿಗೆ 9936 ರೂಪಾಯಿ ಇಎಂಐ ಬರುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್​ ಆದ ಎಚ್​ಡಿಎಫ್​ಸಿ ಬ್ಯಾಂಕ್​ ಹಬ್ಬದ ಋತುವಿನ ಪ್ರಯುಕ್ತ ವಿಶೇಷ ಆಫರ್ ನೀಡುತ್ತಿದೆ. ಬಡ್ಡಿ ದರ ಶೇ 7.50 ಮೇಲ್ಪಟ್ಟು ಇದ್ದು, ಪೂರ್ವ ಪಾವತಿಗೆ ಶೂನ್ಯ ಶುಲ್ಕ ಇದೆ. ಜತೆಗೆ ಕಾರಿನ ಬೆಲೆಯು ಶೇ 100ರಷ್ಟು ಸಾಲ ದೊರೆಯುತ್ತದೆ. ಈ ರಿಯಾಯಿತಿಯು ನವೆಂಬರ್ 30, 2021ರ ತನಕ ಅನ್ವಯಿಸುತ್ತದೆ.

ಐಸಿಐಸಿಐ ಬ್ಯಾಂಕ್​ ಐಸಿಐಸಿಐ ಬ್ಯಾಂಕ್​​ನಿಂದ ಕಾರು ಸಾಲವು ಶೇ 7.90 ಬಡ್ಡಿ ದರದಲ್ಲಿ ನೀಡಲಾಗುತ್ತದೆ ಗ್ರಾಹಕರಿಗೆ 8 ವರ್ಷಗಳ ಅವಧಿಗೆ ದೊರೆಯುತ್ತದೆ.

ಇದನ್ನೂ ಓದಿ: Deepavali Bank Offers: ದೀಪಾವಳಿಗೆ ಇಂಡಸ್​ಇಂಡ್​, ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಆಕ್ಸಿಸ್​ ಬ್ಯಾಂಕ್ ಆಫರ್​ಗಳಿವು

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು