AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How To Check Gold Purity: ಚಿನ್ನದ ಶುದ್ಧತೆ ಪರಿಶೀಲಿಸುವುದಕ್ಕೆ ಇಲ್ಲಿದೆ ಮೊಬೈಲ್ ಆ್ಯಪ್; ಡೌನ್​ಲೋಡ್, ಬಳಕೆ ಹೇಗೆಂದು ತಿಳಿಯಿರಿ

ಬಿಐಎಸ್ ಕೇರ್ ಅಪ್ಲಿಕೇಷನ್ ಎಂಬ ಈ ಮೊಬೈಲ್ ಆ್ಯಪ್ ಮೂಲಕ ಚಿನ್ನದ ಶುದ್ಧತೆಯನ್ನು ಪರಿಶೀಲಿಸಬಹುದು. ಇದನ್ನು ಹೇಗೆ ಡೌನ್​ಲೋಡ್ ಮಾಡಬಹುದು ತಿಳಿಯಿರಿ.

How To Check Gold Purity: ಚಿನ್ನದ ಶುದ್ಧತೆ ಪರಿಶೀಲಿಸುವುದಕ್ಕೆ ಇಲ್ಲಿದೆ ಮೊಬೈಲ್ ಆ್ಯಪ್; ಡೌನ್​ಲೋಡ್, ಬಳಕೆ ಹೇಗೆಂದು ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 29, 2022 | 4:02 PM

Share

ಚಿನ್ನದ ಆಭರಣ ಖರೀದಿ ಮಾಡಿದ ಮೇಲೆ ಅದರ ಶುದ್ಧತೆ ಬಗ್ಗೆ ಒಂದು ಸಣ್ಣ ಗುಮಾನಿ ಇರುತ್ತದೆ. ಎಷ್ಟು ಶುದ್ಧವಾಗಿದೆಯೋ ಏನೋ, ಎಲ್ಲಿ ಪರೀಕ್ಷೆ ಮಾಡಿಸಬಹುದು ಎಂಬ ಹುಳ ಕೊರೆಯುತ್ತಾ ಇರುತ್ತದೆ. ಚಿಂತೆ ಮಾಡಬ್ಯಾಡ್ರೀ, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಒಂದು ಸ್ಮಾರ್ಟ್​ಫೋನ್ ಅಪ್ಲಿಕೇಷನ್ ಮಾಡಿದ್ದು, ಅದನ್ನು “BIS Care App” ಎಂದು ಕರೆಯಲಾಗಿದೆ. ಅದರ ಮೂಲಕವಾಗಿ ಎಲ್ಲ ಐಎಸ್ಐ ಹಾಗೂ ಹಾಲ್​ಮಾರ್ಕ್​ (Hallmark) ಪ್ರಮಾಣಪತ್ರ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಟ್ರ್ಯಾಕ್ ಮಾಡಬಹುದು. ರಿಯಲ್​ ಟೈಮ್​ನಲ್ಲಿ ಹಾಲ್​ಮಾರ್ಕ್ ಆಭರಣಗಳ ಶುದ್ಧತೆಯನ್ನು ಪರಿಶೀಲಿಸಲು ಗ್ರಾಹಕರಿಗೆ ಈ ಆ್ಯಪ್ ಅನುವು ಮಾಡಿಕೊಡುತ್ತದೆ. ವೆಬ್​ಸೈಟ್​ ಪ್ರಕಾರ, ಬಿಐಎಸ್​ ಎಂಬುದು ಭಾರತದ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಯಾಗಿದ್ದು, ಬಿಐಎಸ್ ಕಾಯ್ದೆ 2016ರ ಅಡಿಯಲ್ಲಿ ಸ್ಥಾಪನೆಯಾಗಿದೆ. ಸರಕುಗಳ ಪ್ರಮಾಣೀಕರಣ, ಗುರುತು ಮತ್ತು ಗುಣಮಟ್ಟದ ಪ್ರಮಾಣೀಕರಣದ ಚಟುವಟಿಕೆಗಳ ಸಾಮರಸ್ಯದ ಅಭಿವೃದ್ಧಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗಾಗಿ ಇದು ಸ್ಥಾಪಿಸಲಾಗಿದೆ.

ಸರ್ಕಾರವು ಜುಲೈ 1, 2021ರಂದು ಸರ್ಕಾರದಿಂದ ಹಾಲ್​ಮಾರ್ಕ್ ಗುರುತನ್ನು ಪರಿಷ್ಕರಿಸಲಾಯಿತು. ಹಾಲ್​ಮಾರ್ಕ್​ ಆದ ಆಭರಣದಲ್ಲಿ ಮೂರು ಸಂಕೇತಗಳಿರುತ್ತವೆ. ಅದಕ್ಕೂ ಮುಂಚೆ ನಾಲ್ಕರಿಂದ ಐದು ಇರುತ್ತಿದ್ದವು. ಹೊಸದಾದ ಸಂಕೇತ ಅಂದರೆ, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಹಾಲ್​ಮಾರ್ಕ್, ಶುದ್ಧತೆ/ಪರಿಪೂರ್ಣತೆಯ ಗ್ರೇಡ್ ಮತ್ತು ಆರು ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ (HUID ಸಂಖ್ಯೆ).

ಏನಿದು HUID ಸಂಖ್ಯೆ? ಹಾಲ್​ಮಾರ್ಕ್ ಯೂನಿಕ್ ಐಡೆಂಟಿಫಿಕೇಷನ್ (HUID) ಸಂಖ್ಯೆಯು ಆರು ಅಂಕಿಯ ಆಲ್ಫಾನ್ಯೂಮರಿಕ್ ಕೋಡ್. ಅದನ್ನು ಅಕ್ಷರಗಳು ಮತ್ತು ಅಂಕಿಗಳಿಂದ ಮಾಡಲಾಗಿರುತ್ತದೆ ಎಂದು ಗ್ರಾಹಕರು ವ್ಯವಹಾರಗಳ ಇಲಾಖೆಯ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ಹಾಲ್​ಮಾರ್ಕ್ ಮಾಡುವ ವೇಳೆ, ಪ್ರತಿ ಆಭರಣದ ತುಂಡಿಗೂ HUID ಸಂಖ್ಯೆ ನೀಡಲಾಗುತ್ತದೆ. ಅದು ವಿಶಿಷ್ಟವಾಗಿರುತ್ತದೆ. ಹಾಲ್​ಮಾರ್ಕ್​ ಕೇಂದ್ರದಲ್ಲಿ ಆಭರಣದ ಮೇಲೆ ಕೈಯಿಂದ ಅದನ್ನು ಹಾಕಲಾಗುತ್ತದೆ.

BIS Care ಆ್ಯಪ್ ಡೌನ್ ಲೋಡ್​ ಮಾಡುವುದು ಹೇಗೆ? ಹಂತ 1: BIS Care ಆ್ಯಪ್ ಹುಡುಕಿ ಮತ್ತು ಇನ್​ಸ್ಟಾಲ್ ಮಾಡಿ ಹಂತ 2: ಡೌನ್ ಲೋಡ್ ಆದ ಮೇಲೆ BIS Care ಆ್ಯಪ್ ತೆರೆಯಿರಿ ಹಂತ 3: ನಿಮ್ಮ ಹೆಸರು, ಫೋನ್ ನಂಬರ್, ಇಮೇಲ್ ವಿಳಾಸ ನಮೂದಿಸಿ ಹಂತ 4: ಒಟಿಪಿ ಮೂಲಕ ಫೋನ್​ ನಂಬರ್ ಮತ್ತು ಇಮೇಲ್​ ವಿಳಾಸ ಖಾತ್ರಿ ಮಾಡಿ

ಚಿನ್ನದ ಶುದ್ಧತೆಯನ್ನು BIS Care ಆ್ಯಪ್​ನಲ್ಲಿ ಪರಿಶೀಲಿಸುವುದು ಹೇಗೆ? ಬಿಐಎಸ್​ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿನ ಟ್ವೀಟ್ ಪ್ರಕಾರ, BIS Care ಆ್ಯಪ್​ನಲ್ಲಿನ “Verify HUID” ಫೀಚರ್ ಬಳಸಿ ಹಾಲ್​ಮಾರ್ಕ್ ಆದ ಆಭರಣದ ಶುದ್ಧತೆಯನ್ನು ಪರಿಶೀಲಿಸಬಹುದು. ಆ್ಯಪ್ ಇನ್​ಸ್ಟಾಲ್ ಆದ ಮೇಲೆ ಖರೀದಿದಾರರು “check licensing details” ಸೆಕ್ಷನ್ ಪರಿಶೀಲಿಸಬೇಕು. ಆ ಮೂಲಕ ಐಎಸ್​ಐ ಬ್ರ್ಯಾಂಡೆಡ್ ಉತ್ಪನ್ನಗಳ ಕಾನೂನು ಮಾನ್ಯತೆ ತಿಳಿಯುತ್ತದೆ. ಒಂದು ವೇಳೆ ಹಾಲ್​ಮಾರ್ಕ್ ಆಭರಣ ಆಗಿದ್ದಲ್ಲಿ “Verify HUID” ಸೆಕ್ಷನ್​ಗೆ ತೆರಳಿ ಪ್ರಯತ್ನಿಸಬೇಕು.

BIS ಅಪ್ಲಿಕೇಷನ್‌ನ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅದರ ಅಧಿಕೃತ BIS ಅಪ್ಲಿಕೇಷನ್ ವಿವರಗಳ ಪುಟದ ಪ್ರಕಾರ, BIS ಅಪ್ಲಿಕೇಷನ್ ಅನ್ನು ಬಳಸುವ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ಇಲ್ಲಿದೆ; – ಗುರುತಿಸಲಾದ ಉತ್ಪನ್ನಗಳ ಕಳಪೆ ಅಥವಾ ಕೆಳದರ್ಜೆಯ ಗುಣಮಟ್ಟ, ನಮ್ಮ ಗುರುತುಗಳ ದುರುಪಯೋಗ, ಗುಣಮಟ್ಟದ ಸುಳ್ಳು ಭರವಸೆಗಳು ಅಥವಾ ನಮ್ಮ ಸೇವೆಗಳಲ್ಲಿನ ಅಂತರದಂತಹ ಸಮಸ್ಯೆಗಳ ಕುರಿತು ಅಪ್ಲಿಕೇಷನ್‌ನ ‘ದೂರುಗಳು’ ವೈಶಿಷ್ಟ್ಯವನ್ನು ಬಳಸಿಕೊಂಡು ನಿಮ್ಮ ಕುಂದುಕೊರತೆಗಳು ಅಥವಾ ದೂರುಗಳನ್ನು ಸಲ್ಲಿಸಬಹುದು. – BIS ಅಪ್ಲಿಕೇಷನ್ ಯಾವುದೇ ಐಟಂ ಅಥವಾ ಉತ್ಪನ್ನದ ಮೇಲೆ ISI, ಹಾಲ್‌ಮಾರ್ಕ್ ಮತ್ತು CRS ನೋಂದಣಿ ಗುರುತುಗಳ ದೃಢೀಕರಣವನ್ನು ಪರಿಶೀಲಿಸಬಹುದು. – ಸರಳ ಬಳಕೆದಾರ ನೋಂದಣಿ ಅಥವಾ OTP-ಆಧಾರಿತ ಲಾಗಿನ್ ಮೂಲಕ ನೀವು ನೋಂದಾಯಿಸಲು ಬಯಸುವ ದೂರಿನ ಪ್ರಕಾರವನ್ನು ಆಯ್ಕೆ ಮಾಡಿ, ದೂರಿನ ವಿವರಗಳನ್ನು, ಮೇಲಾಗಿ ಪುರಾವೆಗಳೊಂದಿಗೆ ಉತ್ತಮವಾಗಿ ವಿನ್ಯಾಸಗೊಳಿಸಿದ ಮತ್ತು ನೇರವಾದ ಫಾರ್ಮ್‌ಗಳ ಮೂಲಕ ಭರ್ತಿ ಮಾಡಿ ಮತ್ತು ಸಲ್ಲಿಸಿ. – ತಯಾರಕರ ಹೆಸರು ಮತ್ತು ವಿಳಾಸ, ಪರವಾನಗಿ ಅಥವಾ ನೋಂದಣಿಯ ಮಾನ್ಯತೆಯಂತಹ ಎಲ್ಲ ಸಂಬಂಧಿತ ಮಾಹಿತಿಯನ್ನು ಪಡೆಯಲು ಉತ್ಪನ್ನ ಅಥವಾ ಐಟಂನಲ್ಲಿ ಕಂಡುಬರುವ ಪರವಾನಗಿ ಸಂಖ್ಯೆ/HUID ಸಂಖ್ಯೆ/ನೋಂದಣಿ ಸಂಖ್ಯೆಯನ್ನು ನಮೂದಿಸಿ. – ಭವಿಷ್ಯದ ಉಲ್ಲೇಖಕ್ಕಾಗಿ ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಕಳುಹಿಸಿದ ದೂರಿನ ಸಂಖ್ಯೆ ಮತ್ತು ನಿಮ್ಮ ದೂರಿನ ಸ್ವೀಕೃತಿಯನ್ನು ಪಡೆಯಿರಿ. – ಸರಕುಗಳ ದೃಢೀಕರಣ, ಪರವಾನಗಿಗಳು, ನೋಂದಣಿಗಳು ಮತ್ತು ಹಾಲ್‌ಮಾರ್ಕ್‌ಗಳು ಎಲ್ಲವನ್ನೂ ಪರಿಶೀಲಿಸಬಹುದು. – ಸರಕುಗಳ ಪರವಾನಗಿ, ನೋಂದಣಿ ಅಥವಾ ಹಾಲ್‌ಮಾರ್ಕ್ ಸಂಖ್ಯೆಯು ತಪ್ಪಾಗಿದ್ದರೆ, ಗ್ರಾಹಕರು ಈಗಿನಿಂದಲೇ ದೂರು ಸಲ್ಲಿಸಬಹುದು. – ISIನಿಂದ ಟ್ರೇಡ್‌ಮಾರ್ಕ್ ಉಲ್ಲಂಘನೆ ಮತ್ತು ಹಾಲ್‌ಮಾರ್ಕ್ ಉಲ್ಲಂಘನೆಯ ಬಗ್ಗೆ ದೂರುಗಳನ್ನು ಸಲ್ಲಿಸಬಹುದು. – ನೋಂದಣಿ ಗುರುತುಗಳು, ಮೋಸಗೊಳಿಸುವ ಜಾಹೀರಾತು ಮತ್ತು ಇತರ BIS-ಸಂಬಂಧಿತ ಸಮಸ್ಯೆಗಳ ಕುರಿತು ಸಹ ನೀವು ದೂರನ್ನು ಸಲ್ಲಿಸಬಹುದು. – ಆ್ಯಪ್ ಬಳಸಿ ಈಗಿನಿಂದಲೇ ದೂರು ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಗ್ರಾಹಕರು ಸ್ವೀಕರಿಸುತ್ತಾರೆ.

ಇದನ್ನೂ ಓದಿ: Gold Price Today: ಭಾರತದಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆ; 1,200 ರೂ. ಕುಸಿತ ಕಂಡ ಬೆಳ್ಳಿ ದರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ