AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Axis Mutual Fund Irregularities: ಅಕ್ರಮಗಳ ಆರೋಪದ ಮೇಲೆ ಮುಖ್ಯ ಡೀಲರ್ ವಿರೇಶ್ ಜೋಶಿಯನ್ನು ವಜಾಗೊಳಿಸಿದ ಆಕ್ಸಿಸ್ ಮ್ಯೂಚುವಲ್ ಫಂಡ್

ಅವ್ಯವಹಾರದ ಆರೋಪದ ಮೇಲೆ ಮುಖ್ಯ ಡೀಲರ್ ವಿರೇಶ್ ಅವರನ್ನು ಆಕ್ಸಿಸ್ ಮ್ಯೂಚುವಲ್ ಫಂಡ್ ಮೇ 18ನೇ ತಾರೀಕಿನಂದು ವಜಾ ಮಾಡಿದೆ.

Axis Mutual Fund Irregularities: ಅಕ್ರಮಗಳ ಆರೋಪದ ಮೇಲೆ ಮುಖ್ಯ ಡೀಲರ್ ವಿರೇಶ್ ಜೋಶಿಯನ್ನು ವಜಾಗೊಳಿಸಿದ ಆಕ್ಸಿಸ್ ಮ್ಯೂಚುವಲ್ ಫಂಡ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: May 19, 2022 | 6:30 AM

Share

ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದ್ದ ಆಕ್ಸಿಸ್ ಮ್ಯೂಚುವಲ್ ಫಂಡ್ (Mutual Fund) ತನ್ನ ಮುಖ್ಯ ಡೀಲರ್ ವಿರೇಶ್ ಜೋಶಿ ಅವರನ್ನು ವಜಾಗೊಳಿಸಿದೆ. “ಆಕ್ಸಿಸ್ ಎಎಂಸಿ ಫೆಬ್ರವರಿ 2022ರಿಂದ ಸ್ವಯಂ ಪ್ರೇರಿತ ಆಂತರಿಕ ತನಿಖೆಯನ್ನು ನಡೆಸುತ್ತಿದ್ದು, ಈಗ ನಡೆಯುತ್ತಿರುವ ತನಿಖೆಗೆ ಸಹಾಯ ಮಾಡಲು ಹೆಸರಾಂತ ಬಾಹ್ಯ ಸಲಹೆಗಾರರನ್ನು ಬಳಸುತ್ತಿದೆ. ನಮ್ಮ ತನಿಖೆ, ಅವರ ನಡವಳಿಕೆ ಮತ್ತು ಅವರನ್ನು ಅಮಾನತುಗೊಳಿಸುವ ನಿರ್ಧಾರದ ನಂತರ, ವಿರೇಶ್ ಜೋಶಿಯವರಿಗೆ ಮೇ 18, 2022 ರಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆಯಲಾಗಿದೆ,” ಎಂದು ಆಕ್ಸಿಸ್ ಮ್ಯೂಚುವಲ್ ಫಂಡ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಅದರ ಪ್ರಕಾರ, ವೀರೇಶ್ ಜೋಶಿ ಅವರು ಆಕ್ಸಿಸ್ ಎಎಂಸಿಯ ಪ್ರಮುಖ ವ್ಯಕ್ತಿಯಾಗಿ ಇರುವುದಿಲ್ಲ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಕ್ರಮಗಳ ಆರೋಪದ ಮೇಲೆ ಸಹಾಯಕ ಫಂಡ್​ ಮ್ಯಾನೇಜರ್ ದೀಪಕ್ ಅಗರ್​ವಾಲ್ ಜತೆಗೆ ಫಂಡ್ ಹೌಸ್ ಜೋಶಿ ಅವರನ್ನು ಅಮಾನತುಗೊಳಿಸಿದೆ ಎಂಬ ವರದಿಯನ್ನು ಮೇ 6ರಂದು ಮನಿಕಂಟ್ರೋಲ್ ಬಯಲು ಮಾಡಿತ್ತು. ಆಕ್ಸಿಸ್ ಮ್ಯೂಚುವಲ್ ನಂತರ ಫೆಬ್ರವರಿ 2022ರಿಂದ ಕಳೆದ ಎರಡು ತಿಂಗಳಲ್ಲಿ ಸ್ವಯಂ ಪ್ರೇರಿತ ತನಿಖೆ ನಡೆಸುತ್ತಿದೆ ಮತ್ತು ತನಿಖೆಯಲ್ಲಿ ಸಹಾಯ ಮಾಡಲು ಹೆಸರಾಂತ ಬಾಹ್ಯ ಸಲಹೆಗಾರರನ್ನು ನೇಮಿಸಿದೆ ಎಂದು ದೃಢಪಡಿಸಿತು.

ಇದನ್ನೂ ಓದಿ: SEBI Probe: ಆಕ್ಸಿಸ್ ಅಸೆಟ್ ಮ್ಯಾನೇಜ್​ಮೆಂಟ್​ನಲ್ಲಿ 2.5 ಲಕ್ಷ ಕೋಟಿ ರೂಪಾಯಿ ಫಂಡ್​ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸೆಬಿ

ಮೇ 2ರಂದು, ಲ್ಯಾಂಬೋರ್ಗಿನಿಯಲ್ಲಿ ಸುತ್ತಾಡುವ ಫಂಡ್ ಹೌಸ್‌ನಲ್ಲಿನ ವಿತರಕರ ಬಗ್ಗೆ ಒಂದು ಸಣ್ಣ ವರದಿಯನ್ನು “MC ಇನ್‌ಸೈಡರ್” ಪ್ರಕಟಿಸಿತು, ಅದು ಅವರ ದುಡಿಮೆಗಿಂತ ಹೆಚ್ಚಿನ ಆಸ್ತಿ ಇರುವುದನ್ನು ಸೂಚಿಸುತ್ತದೆ ಎಂದು ಸಹ ತಿಳಿಸಿತ್ತು. ಫಂಡ್ ಹೌಸ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿರುವ ಜೋಶಿ ಅವರು ಐದು ಯೋಜನೆಗಳಲ್ಲಿ ಫಂಡ್ ಮ್ಯಾನೇಜರ್ ಪಾತ್ರದಲ್ಲಿದ್ದರು – ಆಕ್ಸಿಸ್ ಆರ್ಬಿಟ್ರೇಜ್ ಫಂಡ್, ಆಕ್ಸಿಸ್ ಬ್ಯಾಂಕಿಂಗ್ ಇಟಿಎಫ್, ಆಕ್ಸಿಸ್ ನಿಫ್ಟಿ ಇಟಿಎಫ್, ಆಕ್ಸಿಸ್ ಟೆಕ್ನಾಲಜಿ ಇಟಿಎಫ್ ಮತ್ತು ಆಕ್ಸಿಸ್ ಕನ್ಸಂಪ್ಷನ್ ಇಟಿಎಫ್. Axis MF ದೇಶದ ಏಳನೇ ಅತಿ ದೊಡ್ಡ ಮ್ಯೂಚುವಲ್ ಫಂಡ್ ಆಗಿದ್ದು, 2.59 ಲಕ್ಷ ಕೋಟಿ ರೂಪಾಯಿ ಆಸ್ತಿ ಇದರ ನಿರ್ವಹಣೆಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!