ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (NBS) ಅಕ್ಟೋಬರ್ 18ರ ಸೋಮವಾರದಂದು ತಿಳಿಸಿರುವಂತೆ, ದೇಶದ ಜಿಡಿಪಿ ಬೆಳವಣಿಗೆಯ ದರವು ಮೂರನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್ 2021) ಶೇ 4.9 ಎಂದು ಹೇಳಿದೆ. ಇದು ಶೇ 5ರ ಸರಾಸರಿ ಮುನ್ಸೂಚನೆಗಿಂತ ಕಡಿಮೆಯಾಗಿದೆ ಮತ್ತು ಒಂದು ವರ್ಷದ ಹಿಂದೆ ದಾಖಲಾಗಿದ್ದ ಶೇ 7.9ಕ್ಕಿಂತ ಬಹಳ ಕಡಿಮೆ ಇದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎವರ್‌ಗ್ರ್ಯಾಂಡ್ ಸಮೂಹದ ಸಾಲ ಬಿಕ್ಕಟ್ಟು ಪ್ರಾಪರ್ಟಿ ಮಾರುಕಟ್ಟೆಗೆ ಹರಡಿ, ನಿರ್ಮಾಣ ಚಟುವಟಿಕೆ, ಭೂಮಿ ಮಾರಾಟ ಮತ್ತು ವಲಯದ ಹಣಕಾಸು ಸ್ಥಗಿತಗೊಂಡಿತು. ಇನ್ನೊಂದು ಅಂಶವೆಂದರೆ, ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಕಡಿತದಿಂದಾಗಿ ಕಾರ್ಖಾನೆಗಳು ಉತ್ಪಾದನೆಯನ್ನು ಕಡಿಮೆ ಮಾಡಿದವು ಅಥವಾ ಸಂಪೂರ್ಣ ಸ್ಥಗಿತಗೊಳಿಸುವಂತಾಯಿತು.
ಈ ಎರಡೂ ಬಿಕ್ಕಟ್ಟು ಉಕ್ಕು ಮತ್ತು ಸಿಮೆಂಟ್ ವಲಯಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಅಲ್ಲದೆ, ಕೊವಿಡ್ -19 ನಿರ್ಬಂಧಗಳು ಗ್ರಾಹಕರ ವೆಚ್ಚವನ್ನು ಹೆಚ್ಚಿಸಿದ್ದು, ಇದು ಬೆಳವಣಿಗೆಯ ಸಂಖ್ಯೆ ಮೇಲೆ ಪ್ರಭಾವ ಬೀರಿದೆ. ಆರ್ಥಿಕ ಚೇತರಿಕೆ “ಅಸಮತೋಲಿತ ಆಗಿರುತ್ತದೆ, ಆದರೂ ಚೀನಾ ತನ್ನ ವಾರ್ಷಿಕ ಗುರಿಗಳನ್ನು ಸಾಧಿಸುವುದನ್ನು ಖಾತ್ರಿಪಡಿಸುತ್ತದೆ,” ಎಂದು NBS ಹೇಳಿದೆ. ಬ್ಯಾಂಕ್ ಆಫ್ ಅಮೆರಿಕಾ ಕಾರ್ಪೊರೇಷನ್ನ ಮುಖ್ಯ ಗ್ರೇಟರ್ ಚೀನಾದ ಅರ್ಥಶಾಸ್ತ್ರಜ್ಞರಾದ ಹೆಲೆನ್ ಕಿಯಾವೊ ಬ್ಲೂಮ್‌ಬರ್ಗ್ ಟಿವಿಗೆ ಹೇಳಿದ್ದು, ಹೂಡಿಕೆಯ ಬದಿ ಬೇಡಿಕೆಯು “ಬಹಳ ದುರ್ಬಲವಾಗಿದೆ”, ಆದರೆ ಪೂರೈಕೆ ಭಾಗದಲ್ಲಿ ವಿದ್ಯುತ್ ಸಮಸ್ಯೆಗಳ ಪರಿಣಾಮವೂ ತೀವ್ರವಾಗಿತ್ತು. ನಾಲ್ಕನೇ ತ್ರೈಮಾಸಿಕ ಬೆಳವಣಿಗೆ ಶೇ 3-4 ಇಳಿಯುತ್ತದೆ ಎಂದಿದ್ದಾರೆ.
ವಿದ್ಯುತ್ ಮತ್ತು ರಿಯಲ್ ಎಸ್ಟೇಟ್ ಕುಸಿತಕ್ಕೆ ಮುಂಚೆಯೇ ಬೆಳವಣಿಗೆಯ ನಿರೀಕ್ಷೆಗಳು ನಿಧಾನವಾಗಿದ್ದವು. ಆದರೆ ವಾಸ್ತವಿಕ ಕುಸಿತವು “ಅರ್ಥಶಾಸ್ತ್ರಜ್ಞರನ್ನು ಅಚ್ಚರಿಗೊಳಿಸಿದೆ” ಮತ್ತು ಪೂರ್ಣ ವರ್ಷದ GDP ಡೌನ್ಗ್ರೇಡ್ ಮಾಡಲು ಪ್ರೇರೇಪಿಸಿತು. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಗವರ್ನರ್ ಯಿ ಗ್ಯಾಂಗ್, ಈ ವರ್ಷ ಆರ್ಥಿಕತೆಯು ಶೇ 8ರಷ್ಟು ವಿಸ್ತರಿಸಲಿದೆ ಎಂದಿರುವುದು “ಮಧ್ಯಮ” ಬೆಳವಣಿಗೆಯೊಂದಿಗೆ ಮುನ್ಸೂಚನೆ ನೀಡಿದೆ. ಕೇಂದ್ರೀಯ ಬ್ಯಾಂಕ್ನ ಮೀಸಲು ಅನುಪಾತದ ಅಗತ್ಯಗಳಲ್ಲಿ ಸಣ್ಣ ಕಡಿತದೊಂದಿಗೆ ಉದ್ದೇಶಿತ ವಿತ್ತೀಯ ಮತ್ತು ಹಣಕಾಸಿನ ಬೆಂಬಲವನ್ನು ಆರ್ಥಿಕ ತಜ್ಞರು ನಿರೀಕ್ಷಿಸುತ್ತಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: China Economy: ಕೊರೊನಾಗೆ ಮುಂಚಿನ 2020ರ ಫೆಬ್ರವರಿಗಿಂತ ಕೆಳಗಿಳಿಯಿತು ಚೀನಾದ ಕೈಗಾರಿಕೆ ಚಟುವಟಿಕೆ