Corporate Tax: ರಿಯಾಯಿತಿ ತೆರಿಗೆ ದರವನ್ನು ಪಡೆಯಲು ಕಂಪೆನಿಗಳಿಗೆ ಜೂನ್ 30ರ ವರೆಗೆ ಅವಕಾಶ
ಕಂಪೆನಿಗಳು ತೆರಿಗೆ ವಿನಾಯಿತಿಯನ್ನಯ ಪಡೆಯುವುದಕ್ಕೆ ಜೂನ್ 30, 2022ರ ತನಕ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಹೊಸ ಉತ್ಪಾದನಾ ಸಂಸ್ಥೆಗಳು ಶೇ 22ರ ರಿಯಾಯಿತಿ ತೆರಿಗೆ ದರವನ್ನು ಪಡೆಯಲು ಬಯಸುವುದಿದ್ದಲ್ಲಿ ಆದಾಯ ತೆರಿಗೆ ಇಲಾಖೆಯು (Income Tax Department) ಇನ್ನೂ ಮೂರು ತಿಂಗಳ ಕಾಲಾವಕಾಶವನ್ನು ನೀಡಿದೆ. ಆದಾಯ ತೆರಿಗೆ (I-T) ಇಲಾಖೆಯು ಹೊರಡಿಸಿದ ಸುತ್ತೋಲೆಯು ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 119(2)(b) ಅಡಿಯಲ್ಲಿ 2020-21ರ ಅಸೆಸ್ಮೆಂಟ್ ವರ್ಷಕ್ಕಾಗಿ ಫಾರ್ಮ್ 10-IC ಅನ್ನು ಸಲ್ಲಿಸುವಲ್ಲಿ ವಿಳಂಬವಾದರೂ ಅವಕಾಶವನ್ನು ಕಲ್ಪಿಸಿದೆ. ಒಂದು ದೇಶೀಯ ಕಂಪೆನಿಯು ಶೇ 22ರಷ್ಟು ರಿಯಾಯಿತಿ ದರದಲ್ಲಿ ತೆರಿಗೆಯನ್ನು ಪಾವತಿಸಲು ಆಯ್ಕೆ ಮಾಡಿದರೆ ಮಾತ್ರ ಫಾರ್ಮ್ 10-IC ಸಲ್ಲಿಸುವ ಅಗತ್ಯವಿದೆ. ಶೇ 22ರಷ್ಟು ಲಾಭದಾಯಕ ದರವನ್ನು ಪಡೆಯಲು ಬಯಸುವ ಕಂಪೆನಿಗಳು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ನೀಡಲಾಗುವ ವಿನಾಯಿತಿಗಳು ಮತ್ತು ಪ್ರೋತ್ಸಾಹಕಗಳನ್ನು ಬಿಡಬೇಕಾಗುತ್ತದೆ. ಅಸೆಸ್ಮೆಂಟ್ ವರ್ಷ 2020-21ಕ್ಕಾಗಿ ರಿಟರ್ನ್ ಸಲ್ಲಿಸುವ ದಿನಾಂಕದ ಮೊದಲು ಕಂಪೆನಿಗಳು ಎಲೆಕ್ಟ್ರಾನಿಕಲಿ ಫಾರ್ಮ್‌ಗಳನ್ನು ಸಲ್ಲಿಸುವ ಅಗತ್ಯವಿದೆ.
“ಫಾರ್ಮ್ 10-IC ಅನ್ನು ಜೂನ್ 30, 2022ರಂದು ಅಥವಾ ಮೊದಲು ಅಥವಾ ಈ ಸುತ್ತೋಲೆ ಹೊರಡಿಸಿದ ತಿಂಗಳ ಅಂತ್ಯದಿಂದ 3 ತಿಂಗಳು, ಯಾವುದು ನಂತರವೋ ಆಗ ಎಲೆಕ್ಟ್ರಾನಿಕಲಿ ಸಲ್ಲಿಸಲಾಗುತ್ತದೆ,” ಎಂದು ಸುತ್ತೋಲೆ ಹೇಳಿದೆ. ಈ ಫಾರ್ಮ್ ಅನ್ನು ಸಲ್ಲಿಸಿದ ಮೊದಲ ವರ್ಷವಾದ ಅಸೆಸ್ಮೆಂಟ್ ವರ್ಷ 2020-21ಕ್ಕಾಗಿ ಆದಾಯದ ರಿಟರ್ನ್ ಜೊತೆಗೆ ಫಾರ್ಮ್ 10-IC ಅನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ತೆರಿಗೆ ಮಂಡಳಿ ಸ್ವೀಕರಿಸಿದ ಅರ್ಜಿಗಳ ಆಧಾರದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2019ರ ಸೆಪ್ಟೆಂಬರ್ನಲ್ಲಿ, ಈಗಾಗಲೇ ಅಸ್ತಿತ್ವದಲ್ಲಿರುವ ಕಂಪೆನಿಗಳಿಗೆ ಮೂಲ ಕಾರ್ಪೊರೇಟ್ ತೆರಿಗೆಯನ್ನು ಪ್ರಸ್ತುತ ಶೇ 30ರಿಂದ ಶೇ 22ಕ್ಕೆ ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿತು; ಮತ್ತು ಹೊಸ ಉತ್ಪಾದನಾ ಸಂಸ್ಥೆಗಳಿಗೆ, ಅಕ್ಟೋಬರ್ 1, 2019ರ ನಂತರ ಇನ್ಕಾರ್ಪೊರೇಟ್ ಆದಂಥದ್ದು ಮತ್ತು ಮಾರ್ಚ್ 31, 2023ರ ಮೊದಲು ಕಾರ್ಯಾಚರಣೆಯನ್ನು ಪ್ರಾರಂಭಿಸುವುದಕ್ಕೆ ಪ್ರಸ್ತುತ ಶೇ 25ರಿಂದ ಶೇ 15ಕ್ಕೆ ಇಳಿಸಲಾಗಿದೆ.
ಈ ಹೊಸ ತೆರಿಗೆ ದರಗಳನ್ನು ಆಯ್ಕೆ ಮಾಡುವ ಕಂಪೆನಿಗಳು ಎಲ್ಲ ವಿನಾಯಿತಿಗಳು ಮತ್ತು ಪ್ರೋತ್ಸಾಹಕಗಳನ್ನು ಬಿಡಬೇಕಾಗುತ್ತದೆ. ಕಾಯ್ದೆಯ ಸೆಕ್ಷನ್ 139(1) ಅಡಿಯಲ್ಲಿ ನಿರ್ದಿಷ್ಟಪಡಿಸಿದ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ಅಸೆಸ್ಮೆಂಟ್ ವರ್ಷ 2020-21ಕ್ಕಾಗಿ ಆದಾಯದ ರಿಟರ್ನ್ ಅನ್ನು ಸಲ್ಲಿಸಿದ ಸಂದರ್ಭಗಳಲ್ಲಿ ಮತ್ತು ಮೌಲ್ಯಮಾಪಕ ಕಂಪೆನಿಯು ರಿಯಾಯಿತಿ ದರವನ್ನು ಆರಿಸಿಕೊಂಡಾಗ ಫಾರ್ಮ್ 10-IC ಅನ್ನು ಸಲ್ಲಿಸುವಲ್ಲಿ ವಿಳಂಬವನ್ನು ಅನುಮತಿಸಲಾಗುತ್ತದೆ.
ಇತರೆ ವಿನಾಯಿತಿ ಫೇಸ್ಲೆಸ್ ಮೌಲ್ಯಮಾಪನಗಳಿಗೆ ಹೊರಗಿಡುವಿಕೆಯನ್ನು ಎಲ್ಲ ಸಂದರ್ಭಗಳಲ್ಲಿ ಮಾರ್ಚ್ 31, 2022ರಂದು ಮುಕ್ತಾಯಗೊಳ್ಳುವ ಸಮಯ ಮಿತಿ ಮತ್ತು ನ್ಯಾಯವ್ಯಾಪ್ತಿಯ ಅಸೆಸ್ಮೆಂಟ್ ಅಧಿಕಾರಿಯ ಬಳಿ ಬಾಕಿ ಉಳಿದಿರುವ ಮತ್ತು ತಾಂತ್ರಿಕ ಕಾರ್ಯವಿಧಾನದ ಕಾರಣದಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದಕ್ಕೆ ಮಾರ್ಚ್ 15, 2022ಕ್ಕೆ ಅವಕಾಶ ಒದಗಿಸುವ ಸುತ್ತೋಲೆಯನ್ನು CBDT ಹೊರಡಿಸಿದೆ. ಇದು ಅರ್ಜಿಯನ್ನು ಎಲೆಕ್ಟ್ರಾನಿಕ್ ಫೈಲಿಂಗ್‌ನ ಅಗತ್ಯವಿರುವ ನಮೂನೆ ಸಂಖ್ಯೆ 3CF ನಿಂದ ಪ್ರತ್ಯೇಕ ಸುತ್ತೋಲೆಯಲ್ಲಿ ಸಂಶೋಧನಾ ಸಂಘಕ್ಕೆ ಒದಗಿಸಬೇಕಾದ್ದರಿಂದ ವಿನಾಯಿತಿ ನೀಡುತ್ತದೆ.
ಅರ್ಜಿದಾರರು ಸೆಪ್ಟೆಂಬರ್ 30, 2022ರವರೆಗೆ ಭೌತಿಕವಾಗಿ ಅರ್ಜಿಯನ್ನು ಸಲ್ಲಿಸಬಹುದು; ಅಥವಾ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಎಲೆಕ್ಟ್ರಾನಿಕ್ ಫೈಲಿಂಗ್‌ಗಾಗಿ ಫಾರ್ಮ್ ಸಂಖ್ಯೆ 3CF ಎಲ್ಲಿಯವರೆಗೆ ಲಭ್ಯ ಇರುತ್ತದೋ ಇವೆರಡರಲ್ಲಿ ಯಾವುದು ಮೊದಲು ಆ ದಿನಾಂಕದವರೆಗೆ ಸಲ್ಲಿಸಬಹುದು.
ಇದನ್ನೂ ಓದಿ: ಇವೇ ನೋಡಿ ಜಗತ್ತಿನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಗಳಿಸುವ ದೇಶಗಳು