ನವದೆಹಲಿ: ಬೇಡಿಕೆ ಕುಸಿತದ ಕಾರಣ ಕಚ್ಚಾ ತೈಲದ (Crude oil futures) ಬೆಲೆ ಬುಧವಾರ ಶೇಕಡಾ 0.25ರಷ್ಟು ಇಳಿಕೆಯಾಗಿದೆ. ಸದ್ಯ ಬ್ಯಾರೆಲ್ ಕಚ್ಚಾ ತೈಲದ ದರ 6,846 ರೂ. ಆಗಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (Multi Commodity Exchange) ನವೆಂಬರ್ನಲ್ಲಿ ಪೂರೈಕೆಯಾಗಬೇಕಿರುವ ಕಚ್ಚಾ ತೈಲದ ಬೆಲೆ 17 ರೂ. ಇಳಿಕೆಯಾಗಿದೆ. 5,621 ಬ್ಯಾರೆಲ್ ಕಚ್ಚಾ ತೈಲಕ್ಕೆ ಪ್ರತಿ ಬ್ಯಾರೆಲ್ಗೆ 6,846 ರೂ.ನಂತೆ ನಿಗದಿಯಾಗಿದೆ. ಜಾಗತಿಕವಾಗಿ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ಶೇಕಡಾ 1.26ರಷ್ಟು ಹೆಚ್ಚುವರಿ ದರಕ್ಕೆ, ಅಂದರೆ ಪ್ರತಿ ಬ್ಯಾರೆಲ್ಗೆ 83.86 ಡಾಲರ್ನಂತೆ ಮಾರಾಟವಾಗುತ್ತಿದೆ. ನ್ಯೂಯಾರ್ಕ್ನಲ್ಲಿ ಬ್ರೆಂಟ್ ಕಚ್ಚಾ ತೈಲದ ದರ ಶೇಕಡಾ 0.68ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್ಗೆ 90.64 ಡಾಲರ್ನಂತೆ ಮಾರಾಟವಾಗುತ್ತಿದೆ.
ಕ್ರೂಡ್ ಆಯಿಲ್ ಫ್ಯೂಚರ್ಸ್ ಎಂದರೆ…:
ಒಂದು ನಿಗದಿತ ಮೊತ್ತಕ್ಕೆ ನಿರ್ದಿಷ್ಟ ದಿನದಂದು ಕಚ್ಚಾ ತೈಲ ಖರೀದಿಸುವ ಬಗ್ಗೆ ಮುಂಚಿತವಾಗಿಯೇ ಕರಾರು ಏರ್ಪಟ್ಟಿರುತ್ತದೆ. ಈ ರೀತಿಯ ಕರಾರಿಗೆ ಒಳಪಟ್ಟ ಕಚ್ಚಾ ತೈಲದವನ್ನು ‘ಕ್ರೂಡ್ ಆಯಿಲ್ ಫ್ಯೂಚರ್ಸ್’ ಎಂದು ಕರೆಯುತ್ತಾರೆ. ಇಂಥ ಕಚ್ಚಾ ತೈಲವನ್ನು ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಇದು ವಿವಿಧ ರೀತಿಯ ತೈಲಗಳ ಬೇಡಿಕೆಯನ್ನು ಪ್ರತಿಬಿಂಬಿಸಿರುತ್ತದೆ. ತೈಲ ಖರೀದಿ ಮತ್ತು ಮಾರಾಟದ ಒಂದು ಸಾಮಾನ್ಯ ವಿಧವಾಗಿ ‘ಆಯಿಲ್ ಫ್ಯೂಚರ್ಸ್’ ಅನ್ನು ಪರಿಗಣಿಸಲಾಗಿದೆ.
ಇದನ್ನೂ ಓದಿ: Petrol Price on October 19: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?; ಇಲ್ಲಿದೆ ಮಾಹಿತಿ
ಬೇಡಿಕೆ ಕುಸಿದಿರುವ ಕಾರಣ ಒಪೆಕ್ ರಾಷ್ಟ್ರಗಳು ಇತ್ತೀಚೆಗೆ ಉತ್ಪಾದನೆಯನ್ನು ಕಡಿತಗೊಳಿಸಿದ್ದವು. ಕಳೆದ ಒಂದು ವಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 4ರಷ್ಟು ಇಳಿಕೆ ಕಂಡಿತ್ತು. ಇಂದು (ಅಕ್ಟೋಬರ್ 19) ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ದರ ಲೀಟರ್‌ಗೆ 89.62 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 1 ಲೀಟರ್‌ಗೆ 101.94 ರೂ, ಡೀಸೆಲ್ಗೆ 87.89 ರೂ. ಇದೆ. ಕಳೆದ 5 ತಿಂಗಳುಗಳಿಂದ ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ