LPG gas: ಎಲ್​ಪಿಜಿ ಗ್ಯಾಸ್​ ರೀಫಿಲ್​ ಬುಕ್ಕಿಂಗ್ ಯಾವ ವಿತರಕರಿಂದಾದರೂ ಮಾಡಿಸಬಹುದು ಎಂಬ ನಿಯಮ ಶೀಘ್ರದಲ್ಲಿ

ಎಲ್​ಪಿಜಿ ರೀಫಿಲ್ ಬುಕ್ಕಿಂಗ್ ಮಾಡಬೇಕಾದಾಗ ಯಾವ ವಿತರಿಕರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶ ಸದ್ಯದಲ್ಲೇ ಗ್ರಾಹಕರಿಗೆ ದೊರೆಯಲಿದೆ.

LPG gas: ಎಲ್​ಪಿಜಿ ಗ್ಯಾಸ್​ ರೀಫಿಲ್​ ಬುಕ್ಕಿಂಗ್ ಯಾವ ವಿತರಕರಿಂದಾದರೂ ಮಾಡಿಸಬಹುದು ಎಂಬ ನಿಯಮ ಶೀಘ್ರದಲ್ಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 10, 2021 | 6:56 PM

ಗ್ರಾಹಕರು ಎಲ್​ಪಿಜಿಯನ್ನು ಯಾವ ವಿತರಕರಿಂದ ರೀಫಿಲ್ ಮಾಡಿಸಿಕೊಳ್ಳಲು ಬಯಸುತ್ತಾರೋ ಅವರಿಂದ ಮಾಡಿಸುವ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಸದ್ಯದಲ್ಲೇ ಸಾಧ್ಯವಾಗಲಿದೆ. ಚಂಡೀಗಢ, ಕೊಯಮತ್ತೂರು, ಗುರ್​ಗಾಂವ್, ಪುಣೆ ಮತ್ತು ರಾಂಚಿಯಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಗ್ರಾಹಕರು ಮೊಬೈಲ್ ಆ್ಯಪ್/ಗ್ರಾಹಕ ಪೋರ್ಟಲ್ ಮೂಲಕ ಎಲ್​ಪಿಜಿ ಬುಕ್ಕಿಂಗ್ ಮಾಡುವ ವೇಳೆ ಡೆಲಿವರಿ ಮಾಡುವ ವಿತರಕರ ಪಟ್ಟಿ ಮತ್ತು ಅವರ ಪರ್ಫಾರ್ಮೆನ್ಸ್ ರೇಟಿಂಗ್ ತೋರಿಸುತ್ತದೆ. ಗ್ರಾಹಕರು ತಮ್ಮ ಪ್ರದೇಶದಲ್ಲಿನ ಯಾವುದಾದರೂ ವಿತರಕರನ್ನು ಆರಿಸಿಕೊಂಡು, ಎಲ್​ಪಿಜಿ ರೀಫಿಲ್​ ಡೆಲಿವರಿ ಪಡೆಯಬಹುದು. ಈ ಸೇವೆ ಮೂಲಕ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯುವುದಷ್ಟೇ ಅಲ್ಲ, ಅತ್ಯುತ್ತಮ ಸೇವೆ ನೀಡಬೇಕು ಎಂಬ ನಿಟ್ಟಿನಲ್ಲಿ ವಿತರಕರ ಮಧ್ಯೆಯೇ ಆರೋಗ್ಯಕರವಾದ ಪೈಪೋಟಿ ಉದ್ಭವಿಸುತ್ತದೆ. ತಮ್ಮ ಪರ್ಫಾರ್ಮೆನ್ಸ್ ರೇಟಿಂಗ್ ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನು ಹೊರತುಪಡಿಸಿದಂತೆ ಇಂಡೇನ್, ಭಾರತ್ ಗ್ಯಾಸ್, ಎಚ್​ಪಿ ಗ್ಯಾಸ್ ಇವೆಲ್ಲವೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲೇ ಬರುತ್ತದೆ. ಗ್ರಾಹಕರಿಗೆ ಮತ್ತೊಂದು ಹಂತದ ಇತರ ಸೇವೆಗಳನ್ನು ಆನ್​ಲೈನ್​ ಮೂಲಕ ಒದಗಿಸುತ್ತವೆ. ಇದರಲ್ಲಿ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಕೂಡ ಒಳಗೊಂಡಿದೆ. ಅದರ ಮೂಲಕ ಗ್ರಾಹಕರು ರೀಫಿಲ್ ಬುಕ್ ಮಾಡಬಹುದು, ತಮ್ಮ ವೈಯಕ್ತಿಕ ದಾಖಲೆ ಅಪ್​ಡೇಟ್, ಸಂಪರ್ಕದ ವರ್ಗಾವಣೆಗೆ ಅಪ್ಲೈ ಮುಂತಾದವನ್ನು ಮಾಡಬಹುದು.

ಗ್ರಾಹಕರು ಈ ಕಂಪೆನಿಗಳ ಬಳಿಯಲ್ಲಿ ಮಿಸ್ಡ್​ ಕಾಲ್ ಅಥವಾ ವಾಟ್ಸಾಪ್ ಸಂದೇಶಗಳ ಮೂಲಕ ಕೂಡ ರೀಫಿಲ್ ಬುಕ್ ಬುಕ್ ಮಾಡಬಹುದು. UMANG (ಯೂನಿಫೈಡ್ ಮೊಬೈಲ್ ಆ್ಯಪ್ ಫಾರ್ ನ್ಯೂ ಗವರ್ನೆನ್ಸ್) ಆ್ಯಪ್ ಅಥವಾ ಭಾರತ್ ಬಿಲ್ ಪೇ ಸಿಸ್ಟಮ್ ಮತ್ತು ಪ್ಲಾಟ್​ಫಾರ್ಮ್​ಗಳ ಮೂಲಕವೂ ಎಲ್​ಪಿಜಿ ರೀಫಿಲ್​ಗಳನ್ನು ಬುಕ್ ಮಾಡಬಹುದು. ಇನ್ನೂ ಮುಂದುವರಿದು ಹೇಳಬೇಕೆಂದರೆ ಜನಪ್ರಿಯ ಇ-ಕಾಮರ್ಸ್ ಆ್ಯಪ್​ಗಳಾದ ಅಮೆಜಾನ್ ಮತ್ತು ಪೇಟಿಎಂನಿಂದಲೂ ಗ್ರಾಹಕರು ರೀಫಿಲ್ ಬುಕ್ ಮಾಡಬಹುದು.

ಇದನ್ನೂ ಓದಿ: LPG Cylinder Price: ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿಗೂ ಹೆಚ್ಚು ಇಳಿಕೆ ಮಾಡಿದ ತೈಲ ಕಂಪೆನಿಗಳು

ಇದನ್ನೂ ಓದಿ: LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್

(Customers can choose distributors according to their choice for LPG refill booking soon, here is the details)

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ