TDS rate: ಜುಲೈ 1ರಿಂದ ಯಾರಿಗೆಲ್ಲ ಹೆಚ್ಚಿನ ಟಿಡಿಎಸ್ ಕಡಿತ ಆಗುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

TDS rate: ಜುಲೈ 1ರಿಂದ ಯಾರಿಗೆಲ್ಲ ಹೆಚ್ಚಿನ ಟಿಡಿಎಸ್ ಕಡಿತ ಆಗುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ

ಜುಲೈ 1, 2021ರಿಂದ ಅನ್ವಯ ಆಗುವಂತೆ ಕೆಲವು ತೆರಿಗೆ ಪಾವತಿದಾರರು ಹೆಚ್ಚಿನ ಟಿಡಿಎಸ್ ಪಾವತಿ ಮಾಡಬೇಕಾಗಬಹುದು. ಇದ್ಯಾಕೆ ಹೀಗೆ ಎಂಬುದರ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Jun 10, 2021 | 1:07 PM

ಜುಲೈನಿಂದ ಮೊದಲುಗೊಂಡಂತೆ ಕೆಲವು ತೆರಿಗೆ ಪಾವತಿದಾರರು ಹೆಚ್ಚಿನ ದರದಲ್ಲಿ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಪಾವತಿಸಬೇಕಾಗಬಹುದು. ಹಣಕಾಸು ಕಾಯ್ದೆ 2021ರ ಪ್ರಕಾರ, ಒಂದು ವೇಳೆ ತೆರಿಗೆ ಪಾವತಿದಾರರು ಕಳೆದ ಎರಡು ವರ್ಷದಲ್ಲಿ ಟಿಡಿಎಸ್​ ಫೈಲ್ ಮಾಡದಿದ್ದಲ್ಲಿ ಮತ್ತು ಪ್ರತಿ ವರ್ಷ ಕಡಿತ ಆಗುತ್ತಿರುವ ಟಿಡಿಎಸ್ 50,000 ರೂಪಾಯಿ ದಾಟಿದಲ್ಲಿ ಇನ್​ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ವೇಳೆ ಜುಲೈ 1ರಿಂದ ಅನ್ವಯ ಆಗುವಂತೆ ಆದಾಯ ತೆರಿಗೆ ಇಲಾಖೆಯಿಂದ ಹೆಚ್ಚು ಟಿಡಿಎಸ್ ದರ ವಿಧಿಸಲಾಗುತ್ತದೆ. “ಕೆಲವು ನಿರ್ದಿಷ್ಟ ಬಗೆಯ ಆದಾಯಗಳಿಗೆ ಹೆಚ್ಚಿನ ಟಿಡಿಎಸ್​ ಕಡಿತ ಮಾಡುವ ಉದ್ದೇಶದಿಂದ ಬಜೆಟ್ 2021ರಲ್ಲಿ 206AB ಪರಿಚಯಿಸಲಾಯಿತು. ಹಿಂದಿನ ಎರಡು ವರ್ಷಗಳಲ್ಲಿ ಯಾರು ಐಟಿಆರ್ ಫೈಲ್ ಮಾಡಿರುವುದಿಲ್ಲವೋ ಮತ್ತು ಪ್ರತಿ ವರ್ಷ ಕಡಿತ ಆಗಿರುವ ಟಿಡಿಎಸ್ 50,000 ದಾಟಿರುತ್ತದೋ ಅಂಥ ಸಂದರ್ಭಕ್ಕೆ ಇದು ಅನ್ವಯಿಸುತ್ತದೆ,” ಎಂದು ತಜ್ಞರು ಹೇಳುತ್ತಾರೆ.

ಟಿಡಿಎಸ್​ ದರವು ಈ ಕೆಳಗಿನ ಮಿತಿಗಿಂತ ಹೆಚ್ಚಿರುತ್ತದೆ: 1) ನಿರ್ದಿಷ್ಟ ಸೆಕ್ಷನ್/ಪ್ರಾವಿಷನ್​ನಲ್ಲಿ ತಿಳಿಸಿರುವ ದರದ ದುಪ್ಪಟ್ಟು ಅಥವಾ 2) ಚಾಲ್ತಿಯಲ್ಲಿ ಇರುವುದಕ್ಕಿಂತ ದುಪ್ಪಟ್ಟು ದರ/ದರಗಳು ಅಥವಾ 3) ಶೇ 5ರಷ್ಟು ದರ

2021ರ ಹಣಕಾಸು ವರ್ಷಕ್ಕೆ ತೆರಿಗೆ ರಿಟರ್ನ್ಸ್ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ವಿಸ್ತರಣೆ ಮಾಡಿದೆ. 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಟಿಡಿಎಸ್ ಫೈಲಿಂಗ್​ಗೆ ಜೂನ್ 30ನೇ ತಾರೀಕಿನವರೆಗೆ ಗಡುವು ವಿಸ್ತರಿಸಲಾಗಿದೆ. ಈ ಹಿಂದೆ ಟಿಡಿಎಸ್ ಫೈಲಿಂಗ್​ಗೆ ಮೇ 31ರ ಗಡುವು ನಿಗದಿ ಆಗಿತ್ತು. “ಟಿಡಿಎಸ್​ ಕಡಿತ ಆಗುತ್ತಿದ್ದವರಿಗೆ ಇದು ದೊಡ್ಡ ನಿರಾಳ. ಈ ರಿಟರ್ನ್ಸ್​ಗಾಗಿ ಬಹಳ ದಾಖಲೆಗಳು ಮತ್ತು ಡೇಟಾ ಒಳಗೊಳ್ಳುತ್ತಿದ್ದವು” ಎಂದು ಸಂಬಂಧಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಿಳಿಸುತ್ತಾರೆ. ಜತೆಗೆ ಫಾರ್ಮ್ 16 ವಿತರಣೆ ದಿನವನ್ನು ಸಹ ಜೂನ್ 15ರಿಂದ ಜುಲೈ 15ಕ್ಕೆ ವಿಸ್ತರಣೆ ಮಾಡಲಾಗಿದೆ.

ಅಂದಹಾಗೆ, ಸೆಕ್ಷನ್ 206ABಯಲ್ಲಿ ತಿಳಿಸಿರುವಂತೆ, ಯಾರು ಹಣ ಪಾವತಿ ಮಾಡುತ್ತಾರೋ ಅವರು ಟಿಡಿಎಸ್ ಕಡಿತ ಮಾಡಬೇಕಾಗುತ್ತದೆ. ಅಂದರೆ, ಹಣ ಪಾವತಿ ವೇಳೆಯಲ್ಲಿ ಅದನ್ನು ಸ್ವೀಕರಿಸುತ್ತಿರುವವರು ಕಳೆದ ಎರಡು ವರ್ಷ ಐಟಿಆರ್ ಫೈಲ್ ಮಾಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಹೊಸದಾಗಿ ಆರಂಭವಾಗಿರುವ ಆದಾಯ ತೆರಿಗೆ ಇಲಾಖೆ ಪೋರ್ಟಲ್​ನಲ್ಲಿ ಹೊಸ ವ್ಯವಸ್ಥೆ ಇರಬೇಕಿದೆ. ಒಂದು ವೇಳೆ ಅದು ಇಲ್ಲದಿದ್ದಲ್ಲಿ ಸೆಕ್ಷನ್ 206AB ಜಾರಿಯೇ ಸಾಧ್ಯವಾಗುವುದಿಲ್ಲ. ಜಿಎಸ್​ಟಿಆರ್​ ನಿಯಮಾವಳಿಗೆ ಬದ್ಧವಾಗಿದೆಯಾ ಎಂದು ತಿಳಿಯಲು ಈಗಾಗಲೇ ಜಿಎಸ್​ಟಿ ಪೋರ್ಟಲ್ ಇದೆ. ಒಂದು ಉದಾಹರಣೆ ಹೇಳುವುದಾದರೆ, ಒಂದು ಕಂಪೆನಿಯು ಕಾಂಟ್ರ್ಯಾಕ್ಟರ್ ಒಬ್ಬರಿಗೆ ಪಾವತಿ ಮಾಡುವಾಗ ಶೇ 2ರಷ್ಟು ಟಿಡಿಎಸ್ ಕಡಿತ ಮಾಡಬೇಕು. ಅದಕ್ಕೂ ಮುಂಚೆ ಪೋರ್ಟಲ್​ನಲ್ಲಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ; ಆ ಕಾಂಟ್ರ್ಯಾಕ್ಟರ್ ಕಳೆದ ಎರಡು ವರ್ಷ ಐಟಿಆರ್​ ಫೈಲ್ ಮಾಡಿದ್ದಾರೋ ಇಲ್ಲವೋ ಎಂಬ ಅಂಶ. ಒಂದು ವೇಳೆ ಆ ಕಾಂಟ್ರ್ಯಾಕ್ಟರ್ ಐಟಿಆರ್ ಫೈಲ್ ಮಾಡಿಲ್ಲದಿದ್ದಲ್ಲಿ ಶೇ 5ರಷ್ಟು ಟಿಡಿಎಸ್ ಕಡಿತ ಮಾಡಬೇಕಾಗುತ್ತದೆ.

ಹೊಸ ನಿಯಮ ಎಲ್ಲೆಲ್ಲಿ ಅನ್ವಯ ಆಗಲ್ಲ ಆದರೆ, ಹೊಸ ಸೆಕ್ಷನ್ 206AB ಅನ್ವಯ ಆಗದಂಥ ಸನ್ನಿವೇಶಗಳೂ ಇವೆ. ಸೆಕ್ಷನ್ 192ರ ಅಡಿಯಲ್ಲಿ ವೇತನ ಅಥವಾ 192A ಅಡಿಯಲ್ಲಿ ಪ್ರಾವಿಡೆಂಟ್ ಫಂಡ್​ಗಳ ವಿಥ್​ಡ್ರಾ ಮಾಡುವಾಗ ಟಿಡಿಎಸ್​ ಬರುತ್ತದಲ್ಲಾ ಅದಕ್ಕೆ ಹೊಸ ಸೆಕ್ಷನ್ ಅನ್ವಯಿಸಲ್ಲ. ಕಾರ್ಡ್ ಆಟ, ಕ್ರಾಸ್​ವರ್ಡ್, ಲಾಟರಿ, ಪಜಲ್ ಅಥವಾ ಯಾವುದೇ ಆಟಗಳಿಗೆ ಅನ್ಚಯಿಸಲ್ಲ ಮತ್ತು ಸೆಕ್ಷನ್ 194B ಅಡಿಯಲ್ಲಿ ಬರುವ ಕುದುರೆ ರೇಸ್ ಅಥವಾ ಹೊಸ ಸೆಕ್ಷನ್ ಅಡಿಯಲ್ಲಿ ಬಾರದ ಸೆಕ್ಷನ್ 194BBಯಲ್ಲಿ ವಿನಾಯಿತಿ ಇದೆ. 1 ಕೋಟಿ ರೂಪಾಯಿ ಮೇಲಿನ ನಗದು ವಿಥ್​ಡ್ರಾಗೆ ಸೆಕ್ಷನ್ 194N ಅಡಿಯಲ್ಲಿ ಇದು ಅನ್ವಯಿಸಲ್ಲ. ಸೆಕ್ಯುರಿಟೈಸೇಷನ್ ಟ್ರಸ್ಟ್ ಹೂಡಿಕೆ ಮೇಲೆ ಬರುವ ಸೆಕ್ಷನ್ 194LBCಗೆ ಕೂಡ ಹೊಸ ಸೆಕ್ಷನ್ ವ್ಯಾಪ್ತಿ ಬರಲ್ಲ.

ಇಲ್ಲಿ ಗೊತ್ತಿರಬೇಕಾದ್ದು ಏನೆಂದರೆ ಈ ಟಿಡಿಎಸ್ ಅನ್ನೋದು ಪ್ರೀಪೇಯ್ಡ್ ತೆರಿಗೆ. ಇದನ್ನು ದಂಡ ಅಂತಲೋ ಬಡ್ಡಿ ಅಂತಲೋ ಅಂದುಕೊಳ್ಳಬೇಕಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಈ ಟಿಡಿಎಸ್ ಕ್ರೆಡಿಟ್ (ವಾಪಸ್ ಬರುವುದಕ್ಕೆ) ಕ್ಲೇಮ್ ಮಾಡಬಹುದು.

ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು

ಇದನ್ನೂ ಓದಿ: Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ

(TDS rate of these tax payers may increase from July. Here is an explainer)

Follow us on

Related Stories

Most Read Stories

Click on your DTH Provider to Add TV9 Kannada