ATM Cash Withdrawal: ಎಟಿಎಂ/ಡೆಬಿಟ್​ ಕಾರ್ಡ್ ಇಲ್ಲದೆಯೂ ಎಚ್​ಡಿಎಫ್​ಸಿ ಎಟಿಎಂನಲ್ಲಿ ಕ್ಯಾಶ್​ ವಿಥ್​ ಡ್ರಾ ಹೀಗೆ ಮಾಡಿ

| Updated By: Srinivas Mata

Updated on: Jul 30, 2021 | 11:08 AM

ಬ್ಯಾಂಕ್​ ಗ್ರಾಹಕರು ಎಟಿಎಂ ಕಾರ್ಡ್​ ಅಥವಾ ಡೆಬಿಟ್ ಕಾರ್ಡ್ ಇಲ್ಲದಂತೆ ಆಟೋಮೆಟಿಕ್ ಟೆಲ್ಲರ್ ಮಶೀನ್​ಗಳಿಂದ (ಎಟಿಎಂ) ಹಣ ವಿಥ್​ಡ್ರಾ ಮಾಡುವುದಕ್ಕೆ ಸಾಧ್ಯವಾ? ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಅವಕಾಶ ನೀಡುತ್ತಿದೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿಥ್​ಡ್ರಾ ಮಾಡಬಹುದು. ಯಾವ ಗ್ರಾಹಕರು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೋ ಅಂಥವರು ದೇಶದಾದ್ಯಂತ ಇರುವ ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು. ನೆನಪಿನಲ್ಲಿಡಿ: ಈ ಅವಕಾಶ ಇರುವುದು […]

ATM Cash Withdrawal: ಎಟಿಎಂ/ಡೆಬಿಟ್​ ಕಾರ್ಡ್ ಇಲ್ಲದೆಯೂ ಎಚ್​ಡಿಎಫ್​ಸಿ ಎಟಿಎಂನಲ್ಲಿ ಕ್ಯಾಶ್​ ವಿಥ್​ ಡ್ರಾ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಬ್ಯಾಂಕ್​ ಗ್ರಾಹಕರು ಎಟಿಎಂ ಕಾರ್ಡ್​ ಅಥವಾ ಡೆಬಿಟ್ ಕಾರ್ಡ್ ಇಲ್ಲದಂತೆ ಆಟೋಮೆಟಿಕ್ ಟೆಲ್ಲರ್ ಮಶೀನ್​ಗಳಿಂದ (ಎಟಿಎಂ) ಹಣ ವಿಥ್​ಡ್ರಾ ಮಾಡುವುದಕ್ಕೆ ಸಾಧ್ಯವಾ? ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಅವಕಾಶ ನೀಡುತ್ತಿದೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿಥ್​ಡ್ರಾ ಮಾಡಬಹುದು. ಯಾವ ಗ್ರಾಹಕರು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೋ ಅಂಥವರು ದೇಶದಾದ್ಯಂತ ಇರುವ ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು. ನೆನಪಿನಲ್ಲಿಡಿ: ಈ ಅವಕಾಶ ಇರುವುದು ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಲ್ಲಿ ಮಾತ್ರ. ಅಂದಹಾಗೆ ಬ್ಯಾಂಕ್​ನಿಂದಲೇ ಹೇಳಿಕೊಂಡಿರುವಂತೆ, ಈ ಪ್ರಕ್ರಿಯೆ ಬಹಳ ಸರಳ ಮತ್ತು ಸುರಕ್ಷಿತವಾಗಿರುತ್ತದೆ. ಗ್ರಾಹಕರು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂಗಳಿಂದ ಎಟಿಎಂ ಕಾರ್ಡ್ ಅಥವಾ ಡೆಬಿಟ್​ ಕಾರ್ಡ್ ಅಗತ್ಯ ಇಲ್ಲದೆಯೇ ಹಣ ವಿಥ್​ ಡ್ರಾ ಮಾಡಬಹುದು.

ಈ ಬಗ್ಗೆ ಎಚ್​ಡಿಎಫ್​ಸಿಯಿಂದ ಟ್ವೀಟ್ ಕೂಡ ಮಾಡಲಾಗಿದೆ. ನಿಮ್ಮ ಎಟಿಎಂ ಕಾರ್ಡ್ ಮರೆತಿರಾ? ಯೋಚಿಸಬೇಡಿ. ಎಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ಲೆಸ್ ಕ್ಯಾಶ್​ ಡಿಜಿಟಲಿ ನಿಮ್ಮದು. 24X7 ಎಚ್​ಡಿಎಫ್​ಸಿ ಎಟಿಎಂಗಳಿಂದ ನಗದು ವಿಥ್​ಡ್ರಾ ಮಾಡುವ ಸೇವೆ ಒದಗಿಸುತ್ತದೆ. ಎಟಿಎಂ/ಡೆಬಿಟ್ ಕಾರ್ಡ್​ ಇಲ್ಲದೆ ತಕ್ಷಣದ ಹಾಗೂ ಸುರಕ್ಷಿತ ವಿಧಾನದ ನಗದು ವಿಥ್​ಡ್ರಾ ಎಂಜಾಯ್​ ಮಾಡಿ ಎಂದಿದೆ. ಆದರೆ ಹೀಗೆ ಹಣ ವಿಥ್​ಡ್ರಾ ಮಾಡುವಾಗ ಗ್ರಾಹಕರು ಗಮನಿಸಬೇಕಾದ ಅಂಶಗಳು ಇಲ್ಲಿವೆ.

– ಗ್ರಾಹಕರು ಈ ಕಾರ್ಡ್​ಲೆಸ್ ವಿಥ್​ ಡ್ರಾ ವ್ಯವಸ್ಥೆ ಅಡಿಯಲ್ಲಿ ಕನಿಷ್ಠ 100 ರೂ. ಹಾಗೂ ಗರಿಷ್ಠ 10 ಸಾವಿರ ರೂಪಾಯಿ ಒಂದು ದಿನಕ್ಕೆ ವಿಥ್​ ಡ್ರಾ ಮಾಡಬಹುದು.

– ಎಚ್​ಡಿಎಫ್​ಸಿ ಬ್ಯಾಂಕ್ ಎಟಿಎಂಗಳಿಂದ ಒಂದು ತಿಂಗಳಲ್ಲಿ ಗರಿಷ್ಠ 25,000 ರೂಪಾಯಿ ಮೊತ್ತವನ್ನು ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆ ಡ್ರಾ ಮಾಡಬಹುದು.

ಕಾರ್ಡ್​ಲೆಸ್​ ಆಗಿ ಹಣ ವಿಥ್​ಡ್ರಾ ಮಾಡುವ ಹಂತಹಂತವಾದ ವಿಧಾನ ಇಲ್ಲಿದೆ:
1. ಹತ್ತಿರದ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಭೇಟಿ ನೀಡಬೇಕು.
2. ಮೆನು ಎಂಬ ಆಯ್ಕೆಯಿಂದ ಕಾರ್ಡ್​ಲೆಸ್ ಕ್ಯಾಶ್ ಆರಿಸಿಕೊಳ್ಳಬೇಕು. ಸಾಮಾನ್ಯವಾಗಿ ಅದು ಹಾಗೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
3. ಆದ್ಯತೆಯ ಭಾಷೆ ಯಾವುದು ಎಂಬುದನ್ನು ಆರಿಸಿಕೊಳ್ಳಬೇಕು.
4. ಗ್ರಾಹಕರು ನೋಂದಾಯಿತ ಫೋನ್​ ನಂಬರ್​ ಅನ್ನು ಹಂಚಿಕೊಳ್ಳಬೇಕು.
5. ಸುರಕ್ಷಿತ ವಹಿವಾಟಿಗಾಗಿ ಆ ಸಂಖ್ಯೆಯನ್ನು ಪರಿಶೀಲಿಸುವುದಕ್ಕೆ ಮೊಬೈಲ್​ ನಂಬರ್​ಗೆ ಒಟಿಪಿ (ಒನ್​ ಟೈಮ್ ಪಾಸ್​ವರ್ಡ್​) ಬರುತ್ತದೆ.
6. ಡಿಜಿಟ್ ಆರ್ಡರ್ ಐಡಿಯನ್ನು ಮತ್ತು ಎಷ್ಟು ಮೊತ್ತ ವಿಥ್​ಡ್ರಾ ಮಾಡಬೇಕು ಎಂದು ನಮೂದಿಸಿ.

ಇದನ್ನೂ ಓದಿ: HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್

(Customers Can Withdraw Money From HDFC ATM Without Debit Or ATM Card Know How)

Published On - 11:08 am, Fri, 30 July 21