AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ?

AI Agents power the tech industry: ಏಜೆಂಟಿಕ್ ಎಐ ಟೆಕ್ನಾಲಜಿ ಈಗ ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ತಂತ್ರಜ್ಞಾನ ಕಂಪನಿಗಳು ಈ ಎಐ ಏಜೆಂಟ್ಸನ್ನು ಮುಗಿಬಿದ್ದು ಅಳವಡಿಸಿಕೊಳ್ಳುತ್ತಿವೆ. ಟೆಕ್ ಟೀಮ್​ನಲ್ಲಿ ಮ್ಯಾನೇಜರ್ ಆಗಬೇಕೆನ್ನುವವರಿಗೆ ಈ ಎಐ ಏಜೆಂಟ್​ಗಳನ್ನು ನಿರ್ವಹಿಸುವ ಪರಿಣಿತಿ ಗೊತ್ತಿರಬೇಕಾಗುತ್ತದೆ.

AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ AI ಏಜೆಂಟ್‌ಗಳು; ಏನಿದು ಹೊಸ ಟೆಕ್ನಾಲಜಿ?
ಅರ್ಟಿಫಿಶಿಯಲ್ ಇಂಟೆಲಿಜೆನ್ಸ್
Image Credit source: Getty Images

Updated on: Jun 29, 2026 | 6:25 PM

ಮುಖ್ಯಾಂಶಗಳು

  • ಏಜೆಂಟಿಕ್ ಎಐ ಟೆಕ್ನಾಲಜಿ ಈಗ ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ.
  • ತಂತ್ರಜ್ಞಾನ ಕಂಪನಿಗಳು ಈ ಎಐ ಏಜೆಂಟ್ಸನ್ನು ಮುಗಿಬಿದ್ದು ಅಳವಡಿಸಿಕೊಳ್ಳುತ್ತಿವೆ.
  • ಮ್ಯಾನೇಜರ್ ಆಗಬೇಕೆನ್ನುವವರಿಗೆ ಈ ಎಐ ಏಜೆಂಟ್​ಗಳನ್ನು ನಿರ್ವಹಿಸುವ ಪರಿಣಿತಿ ಬೇಕು.

ನವದೆಹಲಿ, ಜೂನ್ 29: ಇದುವರೆಗೆ ನಾವು ಬಳಸುತ್ತಿದ್ದ ಚಾಟ್‌ಬಾಟ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಾವಾಗಿಯೇ ಯೋಚಿಸಿ ಕೆಲಸ ಮಾಡುವ “ಏಜೆಂಟಿಕ್ ಎಐ” (Agentic AI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಾಗತಿಕ ಕಂಪನಿಗಳು ಭಾರಿ ಪೈಪೋಟಿ ನಡೆಸುತ್ತಿವೆ. ಈ ಕುರಿತು 27 ದೇಶಗಳ 2,500 ತಂತ್ರಜ್ಞಾನ ಅಧಿಕಾರಿಗಳನ್ನು (Tech Executives) ಸಮೀಕ್ಷೆ ನಡೆಸಿ KPMG ವರದಿ ಸಿದ್ಧಪಡಿಸಿದೆ. 2025ರಲ್ಲಿ ಕಂಪನಿಗಳ ತಂತ್ರಜ್ಞಾನ ತಂಡಗಳಲ್ಲಿ AI ಡಿಜಿಟಲ್ ಅಸಿಸ್ಟೆಂಟ್‌ಗಳ ಪಾಲು ಶೇ. 28 ರಷ್ಟಿತ್ತು. ಆದರೆ ಇದು 2027ರ ವೇಳೆಗೆ ಶೇ. 36 ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಟೆಕ್ ತಂಡದ ಮೂರನೇ ಒಂದು ಭಾಗದಷ್ಟು ಕೆಲಸವನ್ನು AI ಏಜೆಂಟ್‌ಗಳೇ ನಿಭಾಯಿಸಲಿವೆ.

ಶೇ. 88 ರಷ್ಟು ಕಾರ್ಪೊರೇಟ್ ಕಂಪನಿಗಳು ಈಗಾಗಲೇ ತಮ್ಮ ದೈನಂದಿನ ಕಾರ್ಯವ್ಯವಸ್ಥೆಯಲ್ಲಿ ಈ ಸ್ವಯಂಚಾಲಿತ AI ಏಜೆಂಟ್‌ಗಳನ್ನು ಅಳವಡಿಸಲು ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡುತ್ತಿವೆ.

ಮ್ಯಾನೇಜರ್‌ಗಳಿಗೆ ಹೊಸ ಸವಾಲು: ಎಐ ಏಜೆಂಟ್​ಗಳನ್ನು ನಿರ್ವಹಿಸುವ ಪರಿಣಿತಿ

ಶೇ. 92 ರಷ್ಟು ಟೆಕ್ ಅಧಿಕಾರಿಗಳ ಪ್ರಕಾರ, ಇನ್ನು ಮುಂದೆ ಕಂಪನಿಗಳಲ್ಲಿ ಮ್ಯಾನೇಜರ್ ಆಗುವವರಿಗೆ ಕೇವಲ ಮನುಷ್ಯರನ್ನು ನಿಭಾಯಿಸುವುದು ಮಾತ್ರವಲ್ಲ, ಈ “ಸ್ವಯಂಚಾಲಿತ AI ಏಜೆಂಟ್‌ಗಳನ್ನು ಮುನ್ನಡೆಸುವುದು, ಅವುಗಳ ಕೆಲಸವನ್ನು ಆಡಿಟ್ ಮಾಡುವುದು ಮತ್ತು ನಿರ್ದೇಶಿಸುವುದು” ಅತ್ಯಗತ್ಯ ಕೌಶಲ್ಯವಾಗಲಿದೆ.

ಸಣ್ಣ ಮತ್ತು ಚುರುಕಾದ ತಂಡಗಳು

AI ತಜ್ಞರ ಪ್ರಕಾರ, ಈ ತಂತ್ರಜ್ಞಾನದಿಂದಾಗಿ ಕಂಪನಿಗಳು ಭವಿಷ್ಯದಲ್ಲಿ ದೊಡ್ಡ ದೊಡ್ಡ ಟೀಮ್‌ಗಳ ಬದಲಾಗಿ, ಅತ್ಯಂತ ಸಣ್ಣ ಮತ್ತು ಚುರುಕಾದ (Flatter and Agile) ತಂಡಗಳನ್ನು ಹೊಂದಲಿವೆ. ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಮೂರನೇ ವ್ಯಕ್ತಿಯ ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಕಂಪನಿಗಳಿಗೆ ಹೊಸ ಸವಾಲನ್ನು ತಂದೊಡ್ಡಲಿದೆ ಎಂದೂ ವರದಿ ಎಚ್ಚರಿಸಿದೆ.‘

ಇದನ್ನೂ ಓದಿ: ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ?

AI ಏಜೆಂಟ್‌ಗಳು ಹೇಗೆ ಕೆಲಸ ಮಾಡುತ್ತವೆ?

ನಾವು ಸಾಮಾನ್ಯವಾಗಿ ಬಳಸುವ ಚಾಟ್‌ಜಿಪಿಟಿ (ChatGPT), ಜೆಮಿನೈ (Gemini) ನಂತಹ ಸಾಂಪ್ರದಾಯಿಕ AI ಕೇವಲ ನಾವು ಕೇಳಿದ ಪ್ರಶ್ನೆಗೆ ಉತ್ತರ ಬರೆಯುತ್ತದೆ (Text Generation). ಆದರೆ AI ಏಜೆಂಟ್ ಹಾಗಲ್ಲ; ಅದು ಮನುಷ್ಯರ ಪ್ರಾಂಪ್ಟ್ (ಆದೇಶ) ಇಲ್ಲದೆಯೇ ತಾನಾಗಿಯೇ ನಿರ್ಧಾರಗಳನ್ನು ತೆಗೆದುಕೊಂಡು, ಒಂದು ನಿರ್ದಿಷ್ಟ ಗುರಿಯನ್ನು ತಲುಪಲು ಕೆಲಸ ಮಾಡುತ್ತದೆ.

ಇದರ ಕಾರ್ಯವೈಖರಿಯನ್ನು 4 ಮುಖ್ಯ ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು:

  1. ಗುರಿ (Goal)
  2. ಗ್ರಹಿಕೆ (Perception)
  3. ಆಲೋಚನೆ (Reasoning)
  4. ಕ್ರಿಯೆ (Action)

ಗುರಿಯನ್ನು ಸ್ವೀಕರಿಸುವುದು (Goal Setting)

ಮನುಷ್ಯರು ಈ ಏಜೆಂಟ್‌ಗೆ ಒಂದು ಅಂತಿಮ ಗುರಿಯನ್ನು ನೀಡುತ್ತಾರೆ. ಉದಾಹರಣೆಗೆ: “ಬೆಂಗಳೂರಿನಿಂದ ಮುಂಬೈಗೆ ಜುಲೈ 5 ರಂದು ಹೋಗಲು ₹5,000 ಒಳಗಿನ ಅತ್ಯುತ್ತಮ ವಿಮಾನ ಟಿಕೆಟ್ ಬುಕ್ ಮಾಡಿ, ಹೋಟೆಲ್ ರಿಸರ್ವ್ ಮಾಡು” ಎಂದು ನಿರ್ದೇಶನ ನೀಡಬಹುದು.

ಪರಿಸರವನ್ನು ಗ್ರಹಿಸುವುದು (Perception/Data Gathering)

ಈ ಏಜೆಂಟ್‌ಗಳು ಇಂಟರ್ನೆಟ್, ಕಂಪನಿಯ ಡೇಟಾಬೇಸ್ ಅಥವಾ ಸಾಫ್ಟ್‌ವೇರ್‌ಗಳಿಗೆ ಕನೆಕ್ಟ್ ಆಗಿರುತ್ತವೆ. ಇವು ವಿವಿಧ ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ಗಳು, ಹೋಟೆಲ್ ದರಗಳು ಮತ್ತು ಲಭ್ಯತೆಯನ್ನು ನೈಜ ಸಮಯದಲ್ಲಿ (Real-time) ಪರಿಶೀಲಿಸುತ್ತವೆ.

ಆಲೋಚನೆ ಮತ್ತು ಯೋಜನೆ (Reasoning & Planning)

ಇದು ಕೇವಲ ಮಾಹಿತಿಯನ್ನು ಹುಡುಕುವುದಿಲ್ಲ, ಬದಲಿಗೆ ಯೋಜನೆ ರೂಪಿಸುತ್ತದೆ. “ವಿಮಾನ ಬೆಳಗ್ಗೆ 9ಕ್ಕೆ ಇದ್ದರೆ ಉತ್ತಮವೇ ಅಥವಾ ಸಂಜೆ 6ಕ್ಕಾ? ಹೋಟೆಲ್ ವಿಮಾನ ನಿಲ್ದಾಣಕ್ಕೆ ಹತ್ತಿರವಿದೆಯೇ?” ಎಂದು ತಾನಾಗಿಯೇ ಯೋಚಿಸಿ, ಬಜೆಟ್‌ಗೆ ಹೊಂದುವ ಅತ್ಯುತ್ತಮ ನಿರ್ಧಾರಕ್ಕೆ ಬರುತ್ತದೆ.

ಕಾರ್ಯಗತಗೊಳಿಸುವಿಕೆ (Action/Execution)

ಯಾವುದೇ ಮನುಷ್ಯನ ಸಹಾಯವಿಲ್ಲದೆ, ಎಐ ಏಜೆಂಟ್ ತಾನಾಗಿಯೇ ವೆಬ್‌ಸೈಟ್‌ ಫಾರ್ಮ್‌ಗಳನ್ನು ಭರ್ತಿ ಮಾಡಿ, ಟಿಕೆಟ್ ಬುಕ್ ಮಾಡಿ, ಇನ್ವಾಯ್ಸ್ ಅನ್ನು ನಿಮ್ಮ ಇಮೇಲ್‌ಗೆ ಕಳುಹಿಸುತ್ತದೆ.

ಇದನ್ನೂ ಓದಿ: ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ

ಉದಾಹರಣೆಗೆ, ಸಾಂಪ್ರದಾಯಿಕ AI ನಿಮಗೆ “ಅಡುಗೆ ಮಾಡುವುದು ಹೇಗೆ” ಎಂದು ರೆಸಿಪಿ ಹೇಳಿಕೊಟ್ಟರೆ, AI ಏಜೆಂಟ್ ನಿಮ್ಮ ಫ್ರಿಡ್ಜ್‌ನಲ್ಲಿ ಏನಿದೆ ಎಂದು ನೋಡಿ, ಇಲ್ಲದಿರುವುದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ಸ್ಮಾರ್ಟ್ ಓವನ್ ಆನ್ ಮಾಡಿ ಅಡುಗೆಯನ್ನೇ ಮುಗಿಸಿಡುತ್ತದೆ!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Mon, 29 June 26

Follow Us