ಈ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಚಿನ್ನದ ಮಾರಾಟ ಪ್ಲಾಟ್ಫಾರ್ಮ್ಗಳು ಆಕರ್ಷಕ ಕೊಡುಗೆಗಳನ್ನು ಹೊರತಂದಿವೆ. ತನಿಷ್ಕ್, ಎಂಎಂಟಿಸಿ ಪಿಎಎಂಪಿ ಮತ್ತು ಕಲ್ಯಾಣ್ ಜ್ಯುವೆಲರ್ಸ್‌ನಂತಹ ಪ್ರಮುಖರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿನ್ನವನ್ನು ಖರೀದಿಸಲು ಬಯಸುವವರಿಗೆ ಪರಿಚಯಿಸಲಾದ ಆಕರ್ಷಕ ಕೊಡುಗೆಗಳೊಂದಿಗೆ ಬಂದಿದ್ದಾರೆ. MMTC PAMP ‘ಜಿತ್ನಾ ಸೋನಾ, ಉತ್ನಾ ಚಾಂದಿ’ ಆಫರ್‌ನೊಂದಿಗೆ ಹೊರಬಂದಿದ್ದು, ಗ್ರಾಹಕರು MMTC-PAMP ನಿಂದ ಖರೀದಿಸಿದ ಚಿನ್ನದಷ್ಟೇ ತೂಕದ ಬೆಳ್ಳಿಯ ನಾಣ್ಯವನ್ನು ಪಡೆಯಬಹುದು. ಈ ಆಫರ್ 5 ಗ್ರಾಂ ಮತ್ತು ಅದಕ್ಕಿಂತ ಹೆಚ್ಚಿನ ತೂಕದ ಚಿನ್ನದ ನಾಣ್ಯಗಳು ಮತ್ತು ಬಾರ್‌ಗಳ ಖರೀದಿಗೆ ಅನ್ವಯಿಸುತ್ತದೆ.
ಇದು ತನ್ನದೇ ಆದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಸಹ ಪ್ರಾರಂಭಿಸಿದೆ. “ಹಬ್ಬದ ಋತುವಿನ ಮೊದಲು ಈ ಬಿಡುಗಡೆಯ ಹಿಂದಿನ ಪ್ರಮುಖ ಉದ್ದೇಶವೆಂದರೆ ಗ್ರಾಹಕರ ಹೆಚ್ಚುತ್ತಿರುವ ನಂಬಿಕೆ ಮತ್ತು ವರ್ಚುವಲ್ ಶಾಪಿಂಗ್‌ನತ್ತ ಹೆಚ್ಚಿದ ಒಲವು,” ಎಂದು MMTC-PAMP ಗ್ರಾಹಕ ವ್ಯವಹಾರದ ಅಧ್ಯಕ್ಷೆ ಅನಿಕಾ ಅಗರ್ವಾಲ್ ಹೇಳಿದ್ದಾರೆ.
ಕೇವಲ 100 ರೂಪಾಯಿಯಲ್ಲಿ ಚಿನ್ನ ಖರೀದಿಸಿ
ತನಿಷ್ಕ್ ಡಿಜಿಟಲ್ ಚಿನ್ನದ ಕೆಟಗರಿಗೂ ಕಾಲಿಟ್ಟಿದೆ. ಗ್ರಾಹಕರು ತಮ್ಮ ಚಿನ್ನದ ಉಳಿತಾಯದ ಪ್ರಯಾಣವನ್ನು ರೂ. 100ಕ್ಕಿಂತ ಕಡಿಮೆ ಖರೀದಿಯೊಂದಿಗೆ ಪ್ರಾರಂಭಿಸಬಹುದು. ತನಿಷ್ಕ್ ಡಿಜಿಟಲ್ ಗೋಲ್ಡ್ ಅನ್ನು ವಾಸ್ತವಿಕವಾಗಿ ಖರೀದಿಸಲಾಗುತ್ತದೆ ಮತ್ತು ಆ ಸಮಯದಲ್ಲಿ ಆಭರಣಗಳ ರೂಪದಲ್ಲಿ ಭೌತಿಕ ಚಿನ್ನವಾಗಿ ಪರಿವರ್ತಿಸುವ ಅನುಕೂಲದೊಂದಿಗೆ ಬರುತ್ತದೆ. “ಈ ಹಬ್ಬದ ಋತುವಿನಲ್ಲಿ ನಾವು ಗ್ರಾಹಕರ ಮನಸ್ಥಿತಿಯಲ್ಲಿ ಧನಾತ್ಮಕ ಧೋರಣೆಯನ್ನು ನೋಡುತ್ತಿದ್ದೇವೆ. ಒಟ್ಟಾರೆ ಹಬ್ಬದ ಮೂಡ್ ಮತ್ತು ಮದುವೆಯ ಖರೀದಿಗಳು ಚಿನ್ನ ಮತ್ತು ವಜ್ರದ ಎರಡೂ ವಿಭಾಗಗಳಲ್ಲಿ ಬೇಡಿಕೆ ಸೃಷ್ಟಿಸಲು ಸಹಾಯ ಆಗುತ್ತದೆ. ಇದು ದೀಪಾವಳಿಯವರೆಗೂ ಮುಂದುವರಿಯಬಹುದು ಎಂದು ನಾವು ಭಾವಿಸುತ್ತೇವೆ ಮತ್ತು ಮದುವೆಯ ಋತುವಿನ ನಂತರ ಆಶಾದಾಯಕವಾಗಿ ಮುಂದುವರಿಯಬಹುದು,” ಎಂದು ತನಿಷ್ಕ್ ಸಿಇಒ ಅಜೋಯ್ ಚಾವ್ಲಾ ಹೇಳಿದ್ದಾರೆ.
ಕಡಿಮೆ ಬೆಲೆಯ ಭರವಸೆ
ಗ್ರಾಹಕರು ಡಿಜಿಟಲ್ ಚಿನ್ನವನ್ನು ಖರೀದಿಸಿದಾಗ ಅವರು ಖಾತರಿಯ ಕಡಿಮೆ ಬೆಲೆಯನ್ನು ಪಾವತಿಸಬೇಕಾಗುತ್ತದೆ ಮತ್ತು ಆ ಖರೀದಿಯು ಕೇವಲ 100 ರೂಪಾಯಿಗಳಿಂದ ಪ್ರಾರಂಭವಾಗಬಹುದು. ಸಮಾನವಾದ ಭೌತಿಕ ಚಿನ್ನವನ್ನು ಗ್ರಾಹಕರ ಹೆಸರಿನಲ್ಲಿ 5 ವರ್ಷಗಳವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಗ್ರಹಿಸಲಾಗುತ್ತದೆ. ಮತ್ತು ಗ್ರಾಹಕರು ನಂತರ ಅದನ್ನು ಪಡೆದುಕೊಳ್ಳಬಹುದು. “ಇದು ಹಳದಿ ಲೋಹವನ್ನು ಖರೀದಿಸಲು ಅನುಕೂಲಕರ ಮತ್ತು ಸುಲಭವಾದ ಮಾರ್ಗಗಳನ್ನು ನೋಡುತ್ತಿರುವ ಕಿರಿಯ, ಮೊದಲ ಬಾರಿಯ ಗ್ರಾಹಕರಿಂದ ಚಿನ್ನದ ಆಸಕ್ತಿಯನ್ನು ನವೀಕರಿಸುತ್ತದೆ,” ಎಂದು ಕಲ್ಯಾಣ್ ಜ್ಯುವೆಲರ್ಸ್‌ನ ಇಡಿ ರಮೇಶ್ ಕಲ್ಯಾಣರಾಮನ್ ಹೇಳಿದ್ದಾರೆ.
ಇದನ್ನೂ ಓದಿ: Deepawali 2021: ದೀಪಗಳ ಹಬ್ಬ ದೀಪಾವಳಿ ಬಂತು, ಇಲ್ಲಿದೆ ದೀಪಾವಳಿ ಮುಹೂರ್ತ