Raghuram Rajan: ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಜನರ ವಿಶ್ವಾಸ ಕುಸಿದಿದೆ ಎಂದ ರಘುರಾಮ್ ರಾಜನ್

ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ನಾಗರಿಕರ ವಿಶ್ವಾಸ ಈಚಿನ ವರ್ಷಗಳಲ್ಲಿ ಕಡಿಮೆ ಆಗಿದೆ. ಅದಕ್ಕೆ ಕೊವಿಡ್ 19 ಕೂಡ ಕೊಡುಗೆ ನೀಡಿದೆ ಎಂದು ಆರ್​ಬಿಐ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

Raghuram Rajan: ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಜನರ ವಿಶ್ವಾಸ ಕುಸಿದಿದೆ ಎಂದ ರಘುರಾಮ್ ರಾಜನ್
ರಘುರಾಮ್ ರಾಜನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Oct 30, 2021 | 2:35 PM

ಇತ್ತೀಚಿನ ವರ್ಷಗಳಲ್ಲಿ ದೇಶದ ಆರ್ಥಿಕ ಭವಿಷ್ಯದ ಬಗ್ಗೆ ಭಾರತೀಯರ ನಂಬಿಕೆ ಕುಸಿದಿದೆ, ಇದರ ಜತೆಗೆ ಈಚೆಗಿನ ಕೊವಿಡ್​-19 ಜಾಗತಿಕ ಬಿಕ್ಕಟ್ಟು ಮಧ್ಯಮ ವರ್ಗದವರನ್ನು ಬಡತನಕ್ಕೆ ದೂಡಿದ್ದರಿಂದ ಆ ಭಾವನೆ ಇನ್ನಷ್ಟು ಹೆಚ್ಚಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. NALSAR ಯೂನಿವರ್ಸಿಟಿ ಆಫ್ ಲಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲಿ ಮಾತನಾಡಿ, ದೇಶೀಯ ಷೇರು ಮಾರುಕಟ್ಟೆ ಮೇಲೇರುತ್ತಿದೆ. ಆದರೆ ಹಲವು ಭಾರತೀಯರು ತೀವ್ರ ಸಮಸ್ಯೆಯಲ್ಲಿ ಇದ್ದಾರೆ ಎಂಬ ವಾಸ್ತವವನ್ನು ಪ್ರತಿಬಿಂಬಿಸುತ್ತಿಲ್ಲ ಎಂದಿದ್ದಾರೆ. “ಈಚಿನ ವರ್ಷಗಳಲ್ಲಿ ನಾವು ಸ್ವಲ್ಪ ಮಟ್ಟಿಗೆ ಕಡಿಮೆ ವಿಶ್ವಾಸ ಹೊಂದಿದ್ದೇವೆ. ಆರ್ಥಿಕ ಭವಿಷ್ಯದ ಬಗ್ಗೆ ನಮ್ಮ ನಂಬಿಕೆ ಕುಸಿಯುತ್ತಿದೆ. ಏರಿಕೆ ಆಗುತ್ತಿರುವ ಕೊವಿಡ್​ 19 ನಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಕಡಿಮೆ ಮಾಡಿದೆ. ಮಧ್ಯಮ ವರ್ಗದವರನ್ನು ಬಡತನಕ್ಕೆ ದೂಡಿದೆ,” ಎಂದು ಅವರು ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ದರವನ್ನು ಈ ಹಿಂದೆ ಅಂದಾಜು ಮಾಡಿದ್ದ ಶೇ 10.5ರಿಂದ ಶೇ 9.5ಕ್ಕೆ ಇಳಿಸಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) 2021ನೇ ಇಸವಿಗೆ ಶೇ 9.5 ಹಾಗೂ 2022ಕ್ಕೆ ಶೇ 8.5ರಷ್ಟು ಅಂದಾಜು ಮಾಡಿದೆ. ರಘುರಾಮ್ ರಾಜನ್ ಇನ್ನೂ ಮುಂದುವರಿದು, ಉದ್ಯೋಗ ಸೃಷ್ಟಿಗೆ ಬೇಡಿಕೆ ಹೆಚ್ಚಾಗಿದೆ. ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಕಡೆಗೆ ರಾಜ್ಯ ಸರ್ಕಾರಗಳು ಕೆಲಸ ಮೀಸಲಿಡುತ್ತಿವೆ ಎಂದಿದ್ದಾರೆ.

ನಮ್ಮ ಆರ್ಥಿಕತೆಯ ಪ್ರದರ್ಶನ ಕುಸಿಯುತ್ತಿದ್ದು, ನಮ್ಮ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆ, ಚರ್ಚೆ ನಡೆಸುವಂಥ ಸಾಮರ್ಥ್ಯ, ಗೌರವ ನೀಡವುದು ಮತ್ತು ವ್ಯತ್ಯಾಸಗಳನ್ನು ಸಹಿಸುವುದು ಇವೆಲ್ಲಕ್ಕೂ ಪೆಟ್ಟು ಬಿದ್ದಿದೆ. ಇದು ಕೇಂದ್ರದಿಂದ ಮಾತ್ರ ಅಲ್ಲ, ಹಲವು ರಾಜ್ಯಗಳಲ್ಲಿ ಹೀಗೇ ಇದೆ. ನಿಮಗೆ ಗೊತ್ತು ಸಮುದಾಯದ ಭಾವನೆ ಬಹಳ ಬೇಗ ಘಾಸಿ ಆಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತವು ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವುದರ ಅಗತ್ಯವನ್ನು ಕೂಡ ಒತ್ತಿ ಹೇಳಿದ್ದಾರೆ. ಸದ್ಯಕ್ಕೆ ರಘುರಾಮ್ ರಾಜನ್ ಅವರು ಶಿಕಾಗೋ ಬೂತ್ ಸ್ಕೂಲ್ ಆಫ್ ಬಿಜಿನೆಸ್​ನಲ್ಲಿ ಪ್ರೊಫೆಸರ್ ಆಗಿದ್ದಾರೆ. “ಬೆಳವಣಿಗೆ ಎಂಬುದು ಪ್ರತಿಯೊಬ್ಬರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲಿಲ್ಲ ಅಂತಾದಲ್ಲಿ ಅದು ಸುಸ್ಥಿರವಾಗಲು ಸಾಧ್ಯವಿಲ್ಲ,” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಯಾವುದೇ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Raghuram Rajan: ಖಾಸಗೀಕರಣದ ಬದಲು ಆಡಳಿತ ಸುಧಾರಿಸಿ, ಉತ್ತಮ ನಿಯಮ ರೂಪಿಸಿ ಎಂದ ರಘುರಾಮ್ ರಾಜನ್

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ