Deepawali 2021: ದೀಪಗಳ ಹಬ್ಬ ದೀಪಾವಳಿ ಬಂತು, ಇಲ್ಲಿದೆ ದೀಪಾವಳಿ ಮುಹೂರ್ತ

Deepawali 2021: ದೀಪಗಳ ಹಬ್ಬ ದೀಪಾವಳಿ ಬಂತು, ಇಲ್ಲಿದೆ ದೀಪಾವಳಿ ಮುಹೂರ್ತ
ದೀಪಾವಳಿ

ದೀಪಗಳ ಹಬ್ಬ ಎಂದು ಕರೆಯುವ ದೀಪಾವಳಿಯಂದು ಸಮೃದ್ಧಿ ದೇವತೆ ಮಾತೆ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಕೆಲವು ಕಡೆ ರಾಮನು ರಾವಣನನ್ನು ಕೊಂದು ಆಯೋಧ್ಯೆಗೆ ವಾಪಸಾಗಿ ಮರಳಿ ಆಡಳಿತವನ್ನು ಪುನರಾರಂಭಿಸಿದ ದಿನವಾಗಿ ಆಚರಿಸುತ್ತಾರೆ.

TV9kannada Web Team

| Edited By: Ayesha Banu

Oct 29, 2021 | 8:51 AM

ಕತ್ತಲನ್ನು ಓಡಿಸಿ ಬಾಳನ್ನು ಬೆಳಗುವ ದೀಪಾವಳಿಗೆ ಕ್ಷಣಗಣನೆ ಶುರುವಾಗಿದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾದ ನವೆಂಬರ್ 4ರಂದು ಗುರುವಾರ ದೀಪಾವಳಿಯನ್ನು ಆಚರಿಸಲಾಗುತ್ತೆ. ಮೂರರಿಂದ- ಐದು ದಿನಗಳ ಕಾಲ ಈ ಹಬ್ಬವನ್ನು ಸಂತೋಷ, ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ದೀಪಗಳ ಹಬ್ಬ ಎಂದು ಕರೆಯುವ ದೀಪಾವಳಿಯ ದಿನಗಳಲ್ಲಿ ಸಮೃದ್ಧಿ ದೇವತೆ ಮಾತೆ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಕೆಲವು ಕಡೆ ರಾಮನು ರಾವಣನನ್ನು ಕೊಂದು ಆಯೋಧ್ಯೆಗೆ ವಾಪಸಾಗಿ ಮರಳಿ ಆಡಳಿತವನ್ನು ಪುನರಾರಂಭಿಸಿದ ದಿನವಾಗಿ ಆಚರಿಸುತ್ತಾರೆ.

ದೀಪಾವಳಿ ಮುಹೂರ್ತ: ಪುಸ್ತಕ ಖರೀದಿ ಮುಹೂರ್ತ 1) ದಿನಾಂಕ 28/10/2021 ಗುರುವಾರ, ಬೆಳಿಗ್ಗೆ 09.41ರಿಂದ ಪೂರ್ಣದಿನ ಗುರುಪುಷ್ಯ ಅಮೃತಸಿದ್ಧಿ ಯೋಗವಿದೆ, ಮರುದಿನ ಶುಕ್ರವಾರ ನಸುಕಿನ 05.51ರಿಂದ 06.39ರ ವರೆಗೆ ಬ್ರಾಹ್ಮಿ, ಬೆಳಿಗ್ಗೆ 07.30ರಿಂದ 09.00 ಲಾಭ, 09.00ರಿಂದ 10.30 ಅಮೃತ ಮುಹೂರ್ತವಿದೆ. ಈ ಮುಹೂರ್ತದಲ್ಲಿ ಹೊಸ ಖಾತೆ ಪುಸ್ತಕಗಳ ಖರೀದಿ, ಹೊಸ ಅಕೌಂಟಿಂಗ್ ಸಾಫ್ಟವೇರ್ ಅಥವಾ ಲೆಕ್ಕಪತ್ರ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ಖರೀದಿ ಮಾಡಬೇಕು. ಹಾಗೆ ಮಾಡಿದರೆ ಉತ್ತಮ ಫಲ ಸಿಗುತ್ತೆ.

2)ದಿನಾಂಕ 02/11/2021, ಮಂಗಳವಾರ, ಗೋವತ್ಸ ದ್ವಾದಶಿ. ಗೋಪೂಜಾ, ಗೋದಾನ. ಧನ ತ್ರಯೋದಶಿ. ಧನ್ವಂತರಿ ಜಯಂತಿ, ಯಮದೀಪದಾನ.

ನೀರುತುಂಬುವ ಹಬ್ಬ, ನರಕ ಚತುರ್ದಶಿ 3)ದಿನಾಂಕ 04/11/2021, ಗುರುವಾರ, ನರಕ ಚತುರ್ದಶಿ. ಅಭ್ಯಂಗ, ಆರತಿ.

ಶ್ರೀಮಹಾಲಕ್ಷ್ಮಿ ಕುಬೇರ ಪೂಜಾ ಮುಹೂರ್ತ ದಿನಾಂಕ 04/11/2021. ಗುರುವಾರ, ಸಂಜೆ ವ್ಯವಹಾರಿಕ ಸ್ಥಳಗಳಲ್ಲಿ ಶ್ರೀ ಮಹಾಲಕ್ಷ್ಮೀ ಕುಬೇರ ಪೂಜೆ ಸಾಯಂಕಾಲ 04.30ರಿಂದ 06.00ರ ವರೆಗೆ ಶುಭ, 07.30ರಿಂದ 09.00 ಉತ್ತಮ, ಮಧ್ಯರಾತ್ರಿ 12.11 ರಿಂದ 01.41 ಲಾಭ. ಮಧ್ಯರಾತ್ರಿ 01.00 ರಿಂದ 03.05ರವರೆಗೆ ಸಿಂಹಲಗ್ನ ಮುಹೂರ್ತವಿದೆ.

ಬಲಿಪಾಡ್ಯ ಪೂಜಾ: ದಿನಾಂಕ 05/11/2021, ಶುಕ್ರವಾರ, ನಸುಕಿನ 03.30ರಿಂದ 05.00 ಶುಭ, 05.00 ರಿಂದ 06.30 ಅಮೃತ, ಬೆಳಿಗ್ಗೆ 07.30ರಿಂದ 09.00 ಲಾಭ, 09.00ರಿಂದ 10.30 ಅಮೃತ, ಮಧ್ಯಾಹ್ನ 12.00ರಿಂದ 01.30 ಶುಭ, ಸಂಜೆ 05.20ರಿಂದ 06.12ರವರೆಗೆ ಗೋಧೂಳಿ.

ಗೋಧೂಳಿ ಮುಹೂರ್ತದಲ್ಲಿ ಹಾಲಿ ರಾಜ್ಯ ಸರಕಾರದ ನಿರ್ಣಯದಂತೆ ಮನೆಮನೆಗಳಲ್ಲಿ, ಮಂದಿರಗಳಲ್ಲಿ, ಸಂಘಸಂಸ್ಥೆ, ವ್ಯವಹಾರಿಕ ಸ್ಥಳಗಳಲ್ಲಿ ಗೋಪೂಜೆ, ರಾತ್ರಿ 09.01 ರಿಂದ 10.31ರ ವರೆಗೆ ಲಾಭ ಮುಹೂರ್ತವಿದೆ.

ದಿನಾಂಕ 06/11/2021 ಶನಿವಾರ, ಭಾವಬಿದಿಗೆ. ದಿನಾಂಕ 07/11/2021 ರವಿವಾರ, ಭಗಿನಿ ತೃತಿಯಾ, ದಿನಾಂಕ 09/11/2021 ಸೋಮವಾರ, ಪಾಂಡವಪಂಚಮಿ, ಕಡೆಪಂಚಮಿ. ಪಾಡ್ಯದಿಂದ ಪಂಚಮಿವರೆಗಿನ ಈ ಐದು ದಿನಗಳಲ್ಲಿ, ಉದ್ಯಮ, ಅಂಗಡಿಗಳ ಮುಂತಾದ ಹೊಸ ವ್ಯವಹಾರ ಮಾಡಿದರೆ ಶುಭವಾಗುತ್ತೆ.

ಇದನ್ನೂ ಓದಿ: ಬೀದರ್: ದೀಪಾವಳಿ ಹಬ್ಬಕ್ಕೆ ಚೆಂಡು ಹೂವಿಗೆ ಹೆಚ್ಚಿದ ಬೇಡಿಕೆ; ರೈತರ ಮೊಗದಲ್ಲಿ ಮಂದಹಾಸ

Follow us on

Related Stories

Most Read Stories

Click on your DTH Provider to Add TV9 Kannada