ಜೀವನದ ಕೆಲ ರಹಸ್ಯ ಯಾರೊಂದಿಗೂ ಹಂಚಿಕೊಳ್ಳಬೇಡಿ; ಇಲ್ಲಾಂದ್ರೆ ಕೆಟ್ಟ ದಿನಗಳು ಎದುರಿಗೇ ಬಂದಿರುತ್ತವೆ!

ಜೀವನದ ಕೆಲ ರಹಸ್ಯ ಯಾರೊಂದಿಗೂ ಹಂಚಿಕೊಳ್ಳಬೇಡಿ; ಇಲ್ಲಾಂದ್ರೆ ಕೆಟ್ಟ ದಿನಗಳು ಎದುರಿಗೇ ಬಂದಿರುತ್ತವೆ!
ಜೀವನವೆಂಬ ಬಹುಮೂಲ್ಯ ನಾಣ್ಯ ಸಮಯ ನೋಡಿಕೊಂಡು ತನ್ನ ಮುಖವನ್ನು ಪರಿಚಯಿಸುತ್ತದೆ, ಅದಕ್ಕೆ ಸಿದ್ಧವಾಗಿರಿ

ಅನೇಕ ಬಾರಿ ಜನ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಶ್ವಸನೀಯವಾಗಿ ಅವರ ಮನದಲ್ಲಿರುವ ರಹಸ್ಯಗಳನ್ನು ಹೇಳಿಬಿಡುತ್ತಾರೆ. ಆದರೆ ಅದರ ಅರ್ಥ ಅವರ ರಹಸ್ಯಗಳನ್ನು ನೀವು ಬೇರೊಬ್ಬರ ಬಳಿ ಹೇಳಿಕೊಳ್ಳಿ ಎಂದಲ್ಲ. ಹಾಗೆ ಮಾಡುವುದರಿಂದ ನೀವು ಆ ವ್ಯಕ್ತಿಯ ವಿಶ್ವಾಸವನ್ನು ಕಳೆದುಕೊಳ್ಳುತ್ತೀರಿ. ಅವರ ಜೊತೆಗೆ ನಿಮ್ಮ ಸಂಬಂಧ ಕೆಡುತ್ತದೆ. ಇದರಿಂದ ನಿಮ್ಮ ಇಮೇಜ್ ಮೇಲೂ ಪರಿಣಾಮ ಬೀರುತ್ತದೆ.

TV9kannada Web Team

| Edited By: shruti hegde

Oct 28, 2021 | 9:28 AM

ಆಚಾರ್ಯ ಚಾಣಕ್ಯರ ಪ್ರಕಾರ ಕೆಲವು ವಿಷಯಗಳು ಇರುತ್ತವೆ. ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇಲ್ಲಾಂದ್ರೆ ಜೀವನದಲ್ಲಿ ಕಷ್ಟದ ದಿನಗಳು ಎದುರಾಗುತ್ತವೆ. ಜೀವನದಲ್ಲಿ ಇಂತಹ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ; ಇಲ್ಲಾಂದ್ರೆ ಕೆಟ್ಟ ದಿನಗಳು ಎದುರಿಗೇ ಬಂದುಬಿಡುತ್ತವೆ. ಹಾಗಾದರೆ ಅಂತಹ ರಹಸ್ಯಗಳು ಯಾವುವು ತಿಳಿಯೋಣ ಬನ್ನೀ.

ಆಚಾರ್ಯ ಚಾಣಕ್ಯ ಕೇವಲ ಮೌರ್ಯ ವಂಶ ಸಂಸ್ಥಾಪಕ ಮತ್ತು ಸಂರಕ್ಷಕ ಅಷ್ಟೇ ಆಗಿರಲಿಲ್ಲ. ಆತ ಪ್ರಕಾಂಡ ಪಂಡಿತನೂ ಆಗಿದ್ದ. ಯೋಗ್ಯ ಶಿಕ್ಷಕ, ಮಾರ್ಗದರ್ಶಿ, ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಿ, ಮತ್ತು ರಾಜನೇತಾ ಸಹ ಆಗಿದ್ದ. ತಕ್ಷ ಶಿಲೆ ವಿಶ್ವವಿದ್ಯಾಲಯದಲ್ಲಿ ಚಾಣಕ್ಯ ಶಿಕ್ಷಣ ಪಡೆದು, ಬಳಿಕ ಅಲ್ಲಿ ಸುದೀರ್ಘ ಕಾಲ ಶಿಕ್ಷಕರಾಗಿ ಅಲ್ಲಿನ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದರು. ಅದೇ ಸಮಯದಲ್ಲಿ ಆಚಾರ್ಯ ಚಾಣಕ್ಯ ಅನೇಕ ಗ್ರಂಥ, ಕೃತಿಗಳನ್ನು ರಚಿಸಿದರು. ಅದರಲ್ಲಿ ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರ ಇಂದಿಗೂ ಲೋಕಪ್ರಿಯವಾಗಿದೆ.

ಅರ್ಥಶಾಸ್ತ್ರದ ಮೂಲಕ ಚಾಣಕ್ಯ ಹಣದ ಹೂಡಿಕೆ ಮತ್ತು ಧನ ಸಂಬಂಧೀ ವಿಷಯಗಳನ್ನು ಕಲಿಯಬಹುದು. ಇನ್ನು, ನೀತಿಶಾಸ್ತ್ರದಲ್ಲಿ ಜೀವನದಲ್ಲಿ ಕ್ಷಣ ಕ್ಷಣವೂ ಎದುರಾಗುವ ಪರಿಸ್ಥಿತಿಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿಯಹೇಳಲಾಗಿದೆ. ಜೀವನದ ನಿಗೂಢತೆಗಳನ್ನು ಸುಲಲಿತವಾಗಿ ಬಿಡಿಸಿಬಿಡಿಸಿ ಹೇಳಲಾಗಿದೆ. ಇದೇ ಚಾಣಕ್ಯ ನೀತಿ. ಚಾಣಕ್ಯ ನೀತಿಯಲ್ಲಿ ಹೇಳಿರುವ ಸಂಗತಿಗಳನ್ನು ಸಮಗ್ರವಾಗಿ ಅರಿತು, ಜೀವನದಲ್ಲಿ ಅಳವಡಿಸಿಕೊಂಡರೆ ಏನೇ ಸಮಸ್ಯೆ ಬಂದರೂ ಆತ್ಮವಿಶ್ವಾಸದಿಂದ ಎದುರಿಸಿ, ಜಯಿಸಬಹುದು. ಈ ಲೇಖನದಲ್ಲಿ ಜೀವನದಲ್ಲಿ ಕೆಲವು ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂಬುದನ್ನು ತಿಳಿಸಲಾಗಿದೆ.

ನಿಮ್ಮ ನ್ಯೂನತೆಗಳನ್ನು ಹೇಳಿಕೊಳ್ಳಬೇಡಿ: ಮನುಷ್ಯ ಅಂದಮೇಲೆ ಕೆಲವರಿಗೆ ಕೆಲವು ನ್ಯೂನತೆಗಳು ಇದ್ದೇಇರುತ್ತವೆ. ಆದರೆ ಬುದ್ಧಿವಂತರಾದವರು ತಮ್ಮ ನ್ಯೂನತೆಗಳನ್ನು ಎಂದಿಗೂ, ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಅದೇ ನೀವು ನಿಮ್ಮ ನ್ಯೂನತೆಗಳನ್ನು ಹೇಳಿಕೋಡುಬಿಟ್ಟರೆ ಅದು ವಿಥಿನ್​ ನೋ ಟೈಂ ಎಂಬಂತೆ ವೇಗವಾಗಿ ನಿಮ್ಮ ಎದುರಾಳಿಗಳ ಕಿವಿಗೆ ಬೀಳುತ್ತದೆ. ಆಗ ನಿಮ್ಮ ಅಸಹಾಯಕತೆಯ ಲಾಭ ಪಡೆದುಕೊಳ್ಳಲು ನಿಮ್ಮ ವಿರೋಧಿ ಎಚ್ಚೆತ್ತುಕೊಂಡುಬಿಡುತ್ತಾರೆ.

ಬೇರೊಬ್ಬರ ರಹಸ್ಯ: ಅನೇಕ ಬಾರಿ ಜನ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಶ್ವಸನೀಯವಾಗಿ ಅವರ ಮನದಲ್ಲಿರುವ ರಹಸ್ಯಗಳನ್ನು ಹೇಳಿಬಿಡುತ್ತಾರೆ. ಆದರೆ ಅದರ ಅರ್ಥ ಅವರ ರಹಸ್ಯಗಳನ್ನು ನೀವು ಬೇರೊಬ್ಬರ ಬಳಿ ಹೇಳಿಕೊಳ್ಳಿ ಎಂದಲ್ಲ. ಹಾಗೆ ಮಾಡುವುದರಿಂದ ನೀವು ಆ ವ್ಯಕ್ತಿಯ ವಿಶ್ವಾಸವನ್ನು ಕಳೆದುಕೊಳ್ಳುತ್ತೀರಿ. ಅವರ ಜೊತೆಗೆ ನಿಮ್ಮ ಸಂಬಂಧ ಕೆಡುತ್ತದೆ. ಇದರಿಂದ ನಿಮ್ಮ ಇಮೇಜ್​/ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತದೆ.

ಸಂಪತ್ತಿನ ರಹಸ್ಯ: ನಿಮ್ಮ ಬಳಿ ಸಂಪತ್ತು ಎಷ್ಟೇ ಇದ್ದರೂ ಅದರ ಬಗ್ಗೆ ಮಾಹಿತಿ ನೀಡಬಾರದು. ಅದರ ಬಗ್ಗೆ ಯಾವುದೇ ಮಾಹಿತಿ ನೀಡಬೇಡಿ. ಅನೇಕ ಬಾರಿ ಜನರ ನಿಯತ್ತು ಕೆಟ್ಟದಾಗಿರುವ ಸಾಧ್ಯತೆಯಿರುತ್ತದೆ. ಇದರಿಂದ ಅವರು ನಿಮಗೆ ನಷ್ಟವನ್ನುಂಟು ಮಾಡಬಹುದು.

ರಣನೀತಿ: ಶತ್ರುವನ್ನು ಮೀರಬೇಕು ಎಂದರೆ ರಣನೀತಿಯಲ್ಲಿ ಬರುವ ಎಲ್ಲ ಪಟ್ಟುಗಳನ್ನು ಅರಿದುಕುಡಿಯಬೇಕು. ಆದರೆ ಅದನ್ನು ಗುಪ್ತವಾಗಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಪಟ್ಟುಗಳನ್ನೆಲ್ಲ ಎದುರಾಳಿ ಅರಿತುಕೊಳ್ಳಬಹುದು. ಇದರಿಂದ ನಿಮ್ಮ ಬಲಾಬಲಗಳನ್ನು ಅಂದಾಜು ಮಾಡಿ, ಶತ್ರುವು ನಿಮ್ಮ ಮೇಲೆ ಸವಾರಿ ಮಾಡಬಹುದು. ಹಾಗಾಗಿ ನಿಮ್ಮ ನ್ಯೂನತೆಗಳು, ಬಲಗಳು ನಿಮ್ಮ ಶಕ್ತಿಯಾಗಿ ನಿಮ್ಮ ಬಳಿಯೇ ಇರಲಿ.

(chanakya niti never share these secrets with anyone in life otherwise it may cause your bad days)

Follow us on

Related Stories

Most Read Stories

Click on your DTH Provider to Add TV9 Kannada