ಅಪ್ಪಿತಪ್ಪಿಯೂ ಈ 6 ವಸ್ತುಗಳನ್ನು ದಾನ ಮಾಡಬೇಡಿ, ಇಲ್ಲದಿದ್ದರೆ ಜೀವನದಲ್ಲಿ ಸಂಕಷ್ಟ ಎದುರಾಗುತ್ತೆ
ದಾನವನ್ನು ಮಾಡುವವರು ಯಾವಾಗಲೂ ಭಕ್ತಿ ಮತ್ತು ವಿನಯದಿಂದ ಮಾಡಬೇಕು. ಅಲ್ಲದೆ, ದಾನವನ್ನು ಸಾಧ್ಯವಾದಷ್ಟು ರಹಸ್ಯವಾಗಿಡಬೇಕು. ರಹಸ್ಯವಾಗಿ ಮಾಡುವ ದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗಿದೆ.
ಎಲ್ಲಾ ಧರ್ಮಗಳಲ್ಲಿ ದಾನವನ್ನು ಶ್ರೇಷ್ಠ ರೂಪದಲ್ಲಿ ಕಾಣಲಾಗುತ್ತೆ. ದಾನಕ್ಕೆ ವಿಶೇಷ ಮಹತ್ವವಿದೆ. ಸನಾತನ ಧರ್ಮದಲ್ಲಿ ನಾಲ್ಕು ಯುಗಗಳಾದ ಸತ್ಯಯುಗದಲ್ಲಿ ತಪಸ್ಸು, ತ್ರೇತಾದಲ್ಲಿ ಜ್ಞಾನ, ದ್ವಾಪರದಲ್ಲಿ ಯಾಗ ಮತ್ತು ಕಲಿಯುಗದಲ್ಲಿ ದಾನ ಮಾತ್ರ ವ್ಯಕ್ತಿಯ ಕಲ್ಯಾಣವನ್ನು ಮಾಡಬಲ್ಲದು. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ದಾನ ಮಾಡುತ್ತಲೇ ಇರಬೇಕು. ಆದರೆ ದಾನಕ್ಕೂ ಕೆಲವು ನಿಯಮಗಳಿವೆ.
ದಾನವನ್ನು ಮಾಡುವವರು ಯಾವಾಗಲೂ ಭಕ್ತಿ ಮತ್ತು ವಿನಯದಿಂದ ಮಾಡಬೇಕು. ಅಲ್ಲದೆ, ದಾನವನ್ನು ಸಾಧ್ಯವಾದಷ್ಟು ರಹಸ್ಯವಾಗಿಡಬೇಕು. ರಹಸ್ಯವಾಗಿ ಮಾಡುವ ದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗಿದೆ. ದಾನದ ನಂತರ ಯಾವುದೇ ರೀತಿಯ ನಿರೀಕ್ಷೆ ಮಾಡಬಾರದು. ಇಷ್ಟೇ ಅಲ್ಲ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪಾಪ ಬರುತ್ತೆ ಎಂದು ಹೇಳಲಾಗುತ್ತೆ. ಹಾಗಾಗಿ ಏನು ದಾನ ಮಾಡಬೇಕು. ಏನು ಮಾಡಬಾರದು. ದಾನ ಮಾಡುವ ಸಂದರ್ಭಗಳು ಮುಖ್ಯ ಪಾತ್ರ ವಹಿಸುತ್ತವೆ.
ಈ 6 ವಸ್ತುಗಳನ್ನು ದಾನ ಮಾಡಬೇಡಿ 1. ಜ್ಯೋತಿಶಾಚಾರ್ಯರ ಪ್ರಕಾರ ನಾವು ಸ್ಟೀಲ್ ಪಾತ್ರೆಗಳನ್ನು ದಾನ ಮಾಡಬಾರದು. ವಿಶೇಷವಾಗಿ ನಿಮ್ಮ ಮನೆಯಲ್ಲಿ ಇರಿಸಲಾಗಿರುವ ಪಾತ್ರೆಗಳನ್ನು ದಾನ ಮಾಡಬೇಡಿ. ಇದು ಕುಟುಂಬದ ಸಂತೋಷ ಮತ್ತು ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
2. ಆಹಾರ ಮತ್ತು ನೀರನ್ನು ಮಹಾದಾನ ವರ್ಗದಲ್ಲಿ ಇಡಲಾಗಿದೆ. ಆದ್ದರಿಂದ ನಿರ್ಗತಿಕರಿಗೆ ಮತ್ತು ಬಡವರಿಗೆ ಆಹಾರ ನೀಡಿ ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡಿ. ಆದರೆ ಯಾವಾಗಲೂ ತಾಜಾ ಆಹಾರವನ್ನು ನೀಡಬೇಕು. ಹಳಸಿದ ಆಹಾರವನ್ನು ಯಾರಿಗೂ ದಾನವಾಗಿ ನೀಡಬೇಡಿ. ಇದು ಅಶುಭವೆಂದು ಪರಿಗಣಿಸಲಾಗಿದೆ. ಆದರೆ ಅಗತ್ಯವಿರುವವರಿಗೆ ಆಹಾರವನ್ನು ದಾನ ಮಾಡುವ ಮೂಲಕ ಮತ್ತು ತಾಜಾ ಆಹಾರವನ್ನು ನೀಡುವುದರಿಂದ, ನಿಮಗೆ ಅದೃಷ್ಟ ಪ್ರಾಪ್ತಿಯಾಗುತ್ತೆ.
3. ಕಾಪಿ ಪುಸ್ತಕಗಳು, ಪಠ್ಯಗಳು ಇತ್ಯಾದಿಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಪುಸ್ತಕಗಳು ಹರಿದಿರಬಾರದು. ನೀವು ವಿದ್ಯಾರ್ಥಿಗೆ ಹೊಸ ಪುಸ್ತಕಗಳನ್ನು ದಾನ ಮಾಡಿ ಅಥವಾ ಹರಿಯದ ಉತ್ತಮ ರೀತಿಯಲ್ಲಿರುವ ಪುಸ್ತಕಗಳನ್ನು ದಾನ ಮಾಡಿ, ಇದರಿಂದ ಅವರಿಗೆ ಉಪಯುಕ್ತವಾಗಬಹುದು. ಅದೇ ಈ ದಾನದ ಮಹತ್ವ. ನೆನಪಿಡಿ, ದಾನ ಮಾಡುವಾಗ ವ್ಯಕ್ತಿಯ ಉದ್ದೇಶ ಯಾವಾಗಲೂ ಸ್ಪಷ್ಟವಾಗಿರಬೇಕು.
4. ಜನರು ಸಾಮಾನ್ಯವಾಗಿ ಶನಿವಾರದಂದು ಎಣ್ಣೆಯನ್ನು ದಾನ ಮಾಡುತ್ತಾರೆ. ಆದರೆ ಈ ಎಣ್ಣೆ ಶುದ್ಧವಾಗಿರಬೇಕು. ಅಂದರೆ, ಅದು ಈಗಾಗಲೇ ಬಳಸಿದ ತೈಲವಾಗಿರಬಾರದು. ನೀವು ಬಳಸಿದ ಎಣ್ಣೆಯನ್ನು ಯಾರಿಗಾದರೂ ದಾನಕ್ಕಾಗಿ ನೀಡಿದ್ದರೆ, ಅದು ಯಾವುದೇ ಪ್ರಾಮುಖ್ಯತೆಯನ್ನು ಹೊಂದಿರುವುದಿಲ್ಲ, ಜೊತೆಗೆ ಅದು ವಿರುದ್ಧ ಫಲಿತಾಂಶಗಳನ್ನು ನೀಡುತ್ತದೆ.
5. ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದನ್ನು ನಿಲ್ಲಿಸಿ. ಪ್ಲಾಸ್ಟಿಕ್ ವಸ್ತು ನೀಡುವುದು ನಿಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ಚಾಕು, ಕತ್ತರಿ, ಮುಂತಾದ ಹರಿತವಾದ ವಸ್ತುಗಳನ್ನು ದಾನ ಮಾಡುವುದರಿಂದ ಕುಟುಂಬದ ಸುಖ-ಶಾಂತಿ ಕೆಡಬಹುದು. ಆದ್ದರಿಂದ, ಯಾವುದೇ ತೀಕ್ಷ್ಣವಾದ ವಸ್ತುವನ್ನು ದಾನ ಮಾಡಬೇಡಿ. ಯಾರಿಗಾದರೂ ಅಗತ್ಯವಿದ್ದರೆ, ಅವರು ಅದನ್ನು ಖರೀದಿಸಬಹುದು. ಆದರೆ ದಾನದ ರೀತಿ ನೀಡಬೇಡಿ.
6. ಪೊರಕೆಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಿಂದ ಬಡತನವನ್ನು ತೊಡೆದುಹಾಕುತ್ತದೆ, ಆದ್ದರಿಂದ ಪೊರಕೆಯನ್ನು ಯಾರಿಗೂ ದಾನ ಮಾಡಬಾರದು. ಜ್ಯೋತಿಷಿಯ ಪ್ರಕಾರ, ಪೊರಕೆಯನ್ನು ದಾನ ಮಾಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ಕುಟುಂಬಕ್ಕೆ ತೊಂದರೆಗಳು ಉಂಟಾಗುತ್ತವೆ.
ಇದನ್ನೂ ಓದಿ: Maha Shivaratri 2021: ಶಿವ ಪಾರ್ವತಿಯ ವಿವಾಹ ಮಹೋತ್ಸವದ ಪವಿತ್ರ ದಿನವೇ ಶಿವರಾತ್ರಿ