ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಈ ದಾಖಲೆಗಳು ನಿಮ್ಮ ಬಳಿ ಇರಲಿ

ಹೊಸ ಮನೆ ಕಟ್ಟಿದ್ರೆ ವಿದ್ಯುತ್ ಸಂಪರ್ಕ ಬೇಕು. ನೀವು ಕರ್ನಾಟಕದ ನಿವಾಸಿಯಾಗಿದ್ದರೆ ನಿಮ್ಮ ಹೊಸ ಮನೆಗೆ ಬೆಸ್ಕಾಂ ಅಥವಾ ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ವಿದ್ಯುತ್ ಸಂಪರ್ಕ ಪಡೆಯಲು ವಿಳಾಸದ ದಾಖಲೆ ಮತ್ತು ಆಸ್ತಿ ದಾಖಲೆ ಇರಲೇಬೇಕು. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಈ ದಾಖಲೆಗಳು ನಿಮ್ಮ ಬಳಿ ಇರಲಿ
ಸಾಂದರ್ಭಿಕ ಚಿತ್ರ
Image Credit source: Soumyabrata Roy/NurPhoto via Getty Images

Updated on: Aug 09, 2026 | 6:48 PM

ಮುಖ್ಯಾಂಶಗಳು

  • ಹೊಸ ಮನೆಗೆ ವಿದ್ಯುತ್ ಸಂಪರ್ಕ ಅತ್ಯಗತ್ಯ
  • ಅರ್ಜಿ ಸಲ್ಲಿಸಿ ಮನೆಗೆ ವಿದ್ಯುತ್ ಸಂಪರ್ಕ ಪಡೆಯಬಹುದು.
  • ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಈ ದಾಖಲೆಗಳು ನಿಮ್ಮ ಬಳಿಯಿರಲೇಬೇಕು.

ಮನೆ ಹೊಂದುವ ಕನಸು ಪ್ರತಿಯೊಬ್ಬರ ಕನಸು. ಹೊಸ ಮನೆ ಕಟ್ಟಿದರೆ ಸಾಲದು. ಅದಕ್ಕೆ ಸಂಬಂಧ ಪಟ್ಟ ಎಲ್ಲಾ ಸೌಕರ್ಯಗಳನ್ನು ಮಾಡಿಕೊಳ್ಳುವುದು ಮುಖ್ಯ. ಹೌದು, ನೀವು ಕಟ್ಟಿದ ಹೊಸ ಮನೆಗೆ ವಿದ್ಯುತ್ ಸಂಪರ್ಕ (electricity connection) ಅಗತ್ಯ. ಮನೆಗೆ ವಿದ್ಯುತ್ ಸಂಪರ್ಕಕ್ಕೆ ಕೆಲವರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ನೀವು ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ರೆ ಸಾಕು. ಅದೇಗೆ ಅಂತೀರಾ. ಈ ಕುರಿತಾದ ಮಾಹಿತಿ ಇಲ್ಲಿದೆ.

ವಿದ್ಯುತ್ ಸಂಪರ್ಕ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು:

  • ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ
  • ಮನೆ ಅಥವಾ ನಿವೇಶನದ ಖಾತಾ ಪ್ರಮಾಣಪತ್ರ
  • ತೆರಿಗೆ ರಸೀದಿ ಅಥವಾ ಬಾಡಿಗೆ ಒಪ್ಪಂದ.
  • ಪಾಸ್‌ಪೋರ್ಟ್ ಅಳತೆಯ ಫೋಟೋ

ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವುದು ಹೇಗೆ?

ಹಂತ 1: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಬೆಸ್ಕಾಂ ಪೋರ್ಟಲ್ ಗೆ ಭೇಟಿ ನೀಡಿ.

ಹಂತ 2: ಅಪ್ಲೈ ಫಾರ್ ನ್ಯೂ ಕನೆಕ್ಷನ್ ಆಯ್ಕೆಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ.

ಹಂತ 3: ಮಾಲೀಕರ ಹೆಸರು, ವಿಳಾಸ ಮತ್ತು ಲೋಡ್ ವಿವರಗಳನ್ನು ಭರ್ತಿ
ತಪ್ಪಿಲ್ಲದೇ ಭರ್ತಿ ಮಾಡಿ .

ಹಂತ 4: ಮೇಲೆ ತಿಳಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಲಗತ್ತಿಸಿ.

ಹಂತ 5: ವಿದ್ಯುತ್ ಸಂಪರ್ಕಕ್ಕೆ ಅಂದಾಜು ವೆಚ್ಚವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಬಳಿಯಿದ್ರೆ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಸುಲಭ 

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವುದು ಹೇಗೆ?

ಉತ್ತರ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಬೆಸ್ಕಾಂ ಪೋರ್ಟಲ್ ಗೆ ಭೇಟಿ ನೀಡಿ.

ಪ್ರಶ್ನೆ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಆಧಾರ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ, ನಿವೇಶನದ ಖಾತಾ ಪ್ರಮಾಣಪತ್ರ ತೆರಿಗೆ ರಸೀದಿ ಅಥವಾ ಬಾಡಿಗೆ ಒಪ್ಪಂದ, ಪಾಸ್‌ಪೋರ್ಟ್ ಅಳತೆಯ ಫೋಟೋ ನಿಮ್ಮ ಬಳಿ ಇರಬೇಕು.

ಪ್ರಶ್ನೆ: ಹೊಸ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಎಷ್ಟು ಮೊತ್ತ ಖರ್ಚಾಗುತ್ತದೆ?

ಉತ್ತರ: ಶುಲ್ಕ, ಸೆಕ್ಯೂರಿಟಿ ಡೆಪಾಸಿಟ್ ಮತ್ತು ಸ್ಮಾರ್ಟ್ ಮೀಟರ್ ವೆಚ್ಚ ಸೇರಿ ಅಂದಾಜು ಸರಿಸುಮಾರು 3,000ರೂ ದಿಂದ 10,000 ರೂ ಗೂ ಹೆಚ್ಚು ಆಗಬಹುದು. ಇದು ಲೋಡ್ (kW) ಮತ್ತು ಮೀಟರ್ ಪ್ರಕಾರವನ್ನು ಅವಲಂಬಿಸಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:46 pm, Sun, 9 August 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us