ಮುಂದಿನ ಎರಡು ದಶಕದಲ್ಲಿ ಭಾರತದ ಆರ್ಥಿಕತೆ ಹತ್ತು ಪಟ್ಟು ಬೆಳೆಯುತ್ತಾ? ಎಸ್ ಅಂಡ್ ಪಿ ವರದಿ ಹೇಳೋದಿದು

S & P global ratings agency report: ಭಾರತ 2030ರೊಳಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಲ್ಲುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಅಂದಾಜು ಮಾಡಿದೆ. ಆದರೆ, 2047ರಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಹಾದಿಯಲ್ಲಿ ಭಾರತಕ್ಕೆ ಕೆಲ ಪ್ರಮುಖ ಸವಾಲುಗಳಿವೆ ಎನ್ನುವ ಕೆಲ ಸಂಗತಿಗಳನ್ನು ಈ ಸಂಸ್ಥೆ ಎತ್ತಿ ತೋರಿಸಿದೆ.

ಮುಂದಿನ ಎರಡು ದಶಕದಲ್ಲಿ ಭಾರತದ ಆರ್ಥಿಕತೆ ಹತ್ತು ಪಟ್ಟು ಬೆಳೆಯುತ್ತಾ? ಎಸ್ ಅಂಡ್ ಪಿ ವರದಿ ಹೇಳೋದಿದು
ಜಾಗತಿಕ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 21, 2024 | 1:47 PM

ನವದೆಹಲಿ, ಅಕ್ಟೋಬರ್ 21: ಭಾರತ ಸದ್ಯ 3.6 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ ಹೊಂದಿದೆ. 2047ರಷ್ಟರಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮಟ್ಟ ಮುಟ್ಟುವ ಗುರಿ ಇಟ್ಟಿದೆ. ಮುಂದಿನ 23 ವರ್ಷದಲ್ಲಿ ಜಿಡಿಪಿಯು ಹೆಚ್ಚೂಕಡಿಮೆ ಹತ್ತು ಪಟ್ಟು ಬೆಳೆಯಬೇಕಾಗುತ್ತದೆ. ಬಹಳ ಜನರು ಇದನ್ನು ಅಸಾಧ್ಯ ಗುರಿ ಎನ್ನುತ್ತಾರೆ. ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ (S & P Global Ratings) ಸಂಸ್ಥೆ ಪ್ರಕಾರ 2047ರೊಳಗೆ ಭಾರತದ ಆರ್ಥಿಕತೆ 30 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲು ಸಾಧ್ಯ. ಆದರೆ, ಆ ಹಾದಿಯಲ್ಲಿ ಕೆಲ ಪ್ರಮುಖ ತೊಡಕುಗಳಿವೆ ಎಂದೂ ಅದು ಎಚ್ಚರಿಸಿದೆ.

ಭಾರತ ಮುಂದಿನ ಮೂರು ವರ್ಷ ಕಾಲ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ. 2030ರೊಳಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಸಾಗುತ್ತಿದೆ. ಜೆಪಿ ಮಾರ್ಗನ್ ಸಂಸ್ಥೆಯ ಉದಯೋನ್ಮುಖ ಮಾರುಕಟ್ಟೆಯ ಸರ್ಕಾರಿ ಬಾಂಡ್ ಇಂಡೆಕ್ಸ್​ನಲ್ಲಿ ಭಾರತವನ್ನು ಒಳಗೊಂಡಿರುವುದರಿಂದ ಸರ್ಕಾರಕ್ಕೆ ಹೆಚ್ಚು ಆರ್ಥಿಕ ಸಂಪನ್ಮೂಲ ಸಿಗಲಿದೆ. ದೇಶೀಯ ಬಂಡವಾಳ ಮಾರುಕಟ್ಟೆಗೆ ಹೊಸ ಸಂಪನ್ಮೂಲ ಹರಿದುಬರುತ್ತದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆಯ ವರದಿಯೊಂದರಲ್ಲಿ (Look Forward Emerging Markets: A Decisive Decade) ಹೇಳಲಾಗಿದೆ.

ಇದನ್ನೂ ಓದಿ: ಮುಂಬರುವ ವರ್ಷಗಳಲ್ಲಿ ನಮಗೆ ಭಾರತವೇ ಗ್ರೋತ್ ಎಂಜಿನ್: ಎಸ್​ಐಜಿ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್

ಭಾರತದ ಈ ಬೆಳವಣಿಗೆಯ ಹೆಜ್ಜೆ ಇನ್ನೂ ಆರಂಭ ಮಾತ್ರವೇ. ಇದು ಹೀಗೇ ಸಾಗಬೇಕಾದರೆ ಮಾರುಕಟ್ಟೆ ಪ್ರವೇಶಾವಕಾಶ ಸುಧಾರಣೆ ಆಗಬೇಕು. ಸೆಟಲ್ಮೆಂಟ್ ವಿಧಾನಗಳು ಉತ್ತಮಗೊಳ್ಳಬೇಕು ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಹಾಗೆಯೇ, ಜನಸಂಖ್ಯೆ ಹೆಚ್ಚಳ ಆಗುತ್ತಿರುವುದು ತೊಡಕಾಗಬಹುದು. ಎಲ್ಲಾ ಜನರಿಗೂ ಉತ್ತಮ ಆರೋಗ್ಯಪಾಲನಾ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಕಲ್ಪಿಸುವ ದೊಡ್ಡ ಸವಾಲು ಸರ್ಕಾರಕ್ಕೆ ಇರುತ್ತದೆ. ಉತ್ಪನ್ನಶೀಲತೆಯನ್ನು ಕಾಯ್ದುಕೊಳ್ಳಬೇಕಾದಲ್ಲಿ ಇನ್​ಫ್ರಾಸ್ಟ್ರಕ್ಚರ್ ಮತ್ತು ಟೆಕ್ನಾಲಜಿಯಲ್ಲಿ ಸಾಕಷ್ಟು ಹೂಡಿಕೆ ಮಾಡುವ ಅವಶ್ಯಕತೆ ಇದೆ ಎನ್ನುವ ಅನಿಸಿಕೆ ಈ ವರದಿಯಲ್ಲಿ ಬಂದಿದೆ.

ಜಾಗತಿಕ ಆರ್ಥಿಕತೆಯ ಮೇಲೆ ಭಾರತದ ಪ್ರಭಾವ…

ಭಾರತವನ್ನೂ ಒಳಗೊಂಡಂತೆ ಅಭಿವೃದ್ಧಿಶೀಲ ಮಾರುಕಟ್ಟೆಗಳು (ಎಮರ್ಜಿಂಗ್ ಮಾರ್ಕೆಟ್ಸ್) 2035ರವರೆಗೆ ಸರಾಸರಿಯಾಗಿ ಶೇ. 4.06ರ ದರದಲ್ಲಿ ಜಿಡಿಪಿ ಬೆಳವಣಿಗೆ ಹೊಂದಬಹುದು. ಇದೇ ವೇಳೆ ಶ್ರೀಮಂತ ದೇಶಗಳ ಆರ್ಥಿಕತೆ ಸರಾಸರಿಯಾಗಿ ಶೇ. 1.59ರಷ್ಟು ಬೆಳೆಯಬಹುದು. 2035ರೊಳಗೆ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಉದಯೋನ್ಮುಖ ಆರ್ಥಿಕತೆಗಳ ಪಾಲು ಶೇ. 65ರಷ್ಟಾಗಬಹುದು ಎಂದು ಎಸ್ ಅಂಡ್ ಪಿ ರೇಟಿಂಗ್ಸ್​ನ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಶಕ್ತಿಯಾಗುವತ್ತ ಭಾರತ; ಸೆಮಿಕಂಡಕ್ಟರ್ ಮಿಷನ್​ನ ಮೊದಲ ಹೆಜ್ಜೆ ಯಶಸ್ವಿ, ಎರಡನೇ ಹೆಜ್ಜೆಗೆ ಹೊಸ ಹುಮ್ಮಸ್ಸು

2035ರಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುತ್ತದೆ. ಇತರ ಉದಯೋನ್ಮುಖ ಆರ್ಥಿಕತೆಗಳಾದ ಇಂಡೋನೇಷ್ಯಾ ಮತ್ತು ಬ್ರೆಜಿಲ್ ದೇಶಗಳು ಕ್ರಮವಾಗಿ 8 ಮತ್ತು 9ನೇ ಸ್ಥಾನಕ್ಕೆ ಏರಿರಲಿವೆ ಎಂದೂ ಈ ವರದಿ ಭವಿಷ್ಯ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ