ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್​ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ

|

Updated on: Dec 12, 2023 | 11:18 AM

EPFO Investments In ETFs: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್​ಗಳಲ್ಲಿನ ಹಣದಲ್ಲಿ ಎರಡೂವರೆ ಲಕ್ಷಕೋಟಿ ರೂಗೂ ಹೆಚ್ಚು ಮೊತ್ತವನ್ನು ಇಟಿಎಫ್​ಗಳಲ್ಲಿ ಹೂಡಿಕೆ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಮೇಶ್ವರ್ ತೇಲಿ ಇಪಿಎಫ್ ಹೂಡಿಕೆ ಬಗ್ಗೆ ಡಿಸೆಂಬರ್ 11ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇಪಿಎಫ್​ಒ ಸಂಸ್ಥೆ ತನ್ನಲ್ಲಿರುವ ಹಣವನ್ನು ಡೆಟ್ ಮಾರುಕಟ್ಟೆ ಮತ್ತು ಇಟಿಎಫ್​ಗಳಲ್ಲಿ ಕ್ರಮವಾಗಿ ಶೇ. 85 ಮತ್ತು ಶೇ. 15ರಷ್ಟು ಹೂಡಿಕೆ ಮಾಡುತ್ತದೆ.

ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್​ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ
ಇಪಿಎಫ್​ಒ
Follow us on

ನವದೆಹಲಿ, ಡಿಸೆಂಬರ್ 12: ಇಪಿಎಫ್ ಖಾತೆಗಳಲ್ಲಿ ಜಮೆ ಆಗುವ ಹಣವನ್ನು ಇಪಿಎಫ್​ಒ ಎಲ್ಲಿ ಹೂಡಿಕೆ ಮಾಡುತ್ತದೆ? ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ರಾಮೇಶ್ವರ್ ತೇಲಿ (Rameshwar Teli) ಕಳೆದ ವರ್ಷ ನೀಡಿರುವ ಮಾಹಿತಿ ಪ್ರಕಾರ ಇಪಿಎಫ್​ನ ಶೇ. 85ರಷ್ಟು ಹಣವು ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಆಗುತ್ತದೆ. ಶೇ. 15ರಷ್ಟು ಹಣವು ಇಟಿಎಫ್​ಗಳಲ್ಲಿ ಹೂಡಿಕೆ ಆಗುತ್ತದೆ. ನಿನ್ನೆ (ಡಿ. 11) ರಾಮೇಶ್ವರ್ ತೇಲಿ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಕಳೆದ ಏಳಕ್ಕೂ ಹೆಚ್ಚು ವರ್ಷಗಳಿಂದ ಇಟಿಎಫ್​ಗಳಲ್ಲಿ (ETF- Exchange Traded Fund) ಹೂಡಿಕೆ ಆಗಿರುವ ಪಿಎಫ್ ಹಣ ಎರಡೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಈ ಹಣಕಾಸು ವರ್ಷದಲ್ಲಿ ಅಕ್ಟೋಬರ್​ವರೆಗೂ ಇಟಿಎಫ್​ಗಳಲ್ಲಿ ಇಪಿಎಫ್​ಒದಿಂದ ಆಗಿರುವ ಹೂಡಿಕೆಯ ಮೊತ್ತ 27,105 ಕೋಟಿ ರೂ. ಇನ್ನು, 2021-22ರಲ್ಲಿ 43,568 ಕೋಟಿ ರೂ ಮೊತ್ತದ ಇಪಿಎಫ್ ಹಣ ಹೂಡಿಕೆ ಅಗಿತ್ತು. ಮರುವರ್ಷ, ಅಂದರೆ 2022-23ರಲ್ಲಿ ಹೂಡಿಕೆಯು 53,081 ರುಪಾಯಿಗೆ ಹೆಚ್ಚಿತ್ತು.

ಇದನ್ನೂ ಓದಿ: Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು

ವಿವಿಧ ವರ್ಷಗಳಲ್ಲಿ ಇಟಿಎಫ್​ನಲ್ಲಿ ಆದ ಇಪಿಎಫ್ ಹೂಡಿಕೆಗಳು

  • 2023-24 (ಮೊದಲ ಏಳು ತಿಂಗಳು): 27,105 ಕೋಟಿ ರೂ
  • 2022-23ರಲ್ಲಿ: 53,081 ಕೋಟಿ ರೂ
  • 2021-22ರಲ್ಲಿ: 43,568 ಕೋಟಿ ರೂ
  • 2020-21ರಲ್ಲಿ: 32,071 ಕೋಟಿ ರೂ
  • 2019-20ರಲ್ಲಿ: 31,501 ಕೋಟಿ ರೂ
  • 2018-19ರಲ್ಲಿ: 27,974 ಕೋಟಿ ರೂ
  • 2017-18ರಲ್ಲಿ: 24,790 ಕೋಟಿ ರೂ
  • 2016-17ರಲ್ಲಿ: 14,983 ಕೋಟಿ ರೂ

ಏನಿದು ಇಟಿಎಫ್ ಮತ್ತು ಡೆಟ್ ಮಾರ್ಕೆಟ್?

ಇಟಿಎಫ್ ಎಂದರೆ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್. ಮ್ಯುಚುವಲ್ ಫಂಡ್​ನಂತೆ ಇದು ಷೇರುಮಾರುಕಟ್ಟೆಯ ವಿವಿಧ ಇಂಡೆಕ್ಸ್​ಗಳನ್ನು ಅನುಸರಿಸುತ್ತದೆ. ಷೇರುಗಳನ್ನು ಮಾತ್ರವಲ್ಲ ಬೇರೆ ಬೇರೆ ರೀತಿಯ ಹೂಡಿಕೆಗಳನ್ನು ಒಳಗೊಂಡಿರುತ್ತದೆ. ಷೇರುಮಾರುಕಟ್ಟೆಯಲ್ಲಿ ಮ್ಯುಚುವಲ್ ಫಂಡ್​ಗಳನ್ನು ವಹಿವಾಟು ಮಾಡಲು ಆಗುವುದಿಲ್ಲ. ಆದರೆ, ಇಟಿಎಫ್​ಗಳನ್ನು ಟ್ರೇಡಿಂಗ್ ಮಾಡಬಹುದು.

ಇದನ್ನೂ ಓದಿ: ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?

ಇನ್ನು, ಡೆಟ್ ಫಂಡ್​ಗಳು ಸರ್ಕಾರಿ ಸಾಲಪತ್ರ ಸೇರಿ ವಿವಿಧ ಸಾಲಪತ್ರಗಳ ಮೇಲೆ ಹೂಡಿಕೆ ಮಾಡುತ್ತವೆ. ಕಾರ್ಪೊರೇಟ್ ಕಂಪನಿಗಳ ಬಾಂಡ್​ಗಳ ಮೇಲೂ ಹೂಡಿಕೆ ಆಗಬಹುದು.

ಇಪಿಎಫ್​ಒ ಮತ್ತು ಹೂಡಿಕೆ

ಇಪಿಎಫ್​ಒ 2015ರಿಂದ ಈಚೆ ಇಟಿಎಫ್​ಗಳಲ್ಲಿ ಹೂಡಿಕೆ ನಡೆಸುತ್ತಾ ಬಂದಿದೆ. ಮೊದಲಿಗೆ ಅದರ ಶೇ. 5ರಷ್ಟು ಹಣವನ್ನು ಇಟಿಎಫ್​ಗಳಲ್ಲಿ ಹಾಕಲು ಮಿತಿ ಇತ್ತು. ಇದೀಗ ಆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Tue, 12 December 23