ಭಾರತದೊಂದಿಗೆ ಒಪ್ಪಂದ, ‘ಯೂರೋಪ್ ಕಾಲ ಮೇಲೆ ಚಪ್ಪಡಿ’: ಅಮೆರಿಕ ಸಿಡಿಮಿಡಿ
Europe financing war against itself by inking deal with India, says US: ಯೂರೋಪ್ ತನ್ನ ವಿರುದ್ಧದ ಯುದ್ಧಕ್ಕೆ ತಾನೇ ಫೈನಾನ್ಸಿಂಗ್ ಮಾಡುತ್ತಿದೆ ಎಂದು ಅಮೆರಿಕದ ಟ್ರೆಷರಿ ಸೆಕ್ರೆಟರಿ ಸ್ಕಾಟ್ ಬೆಸ್ಸೆಂಟ್ ಹೇಳಿದ್ದಾರೆ. ಭಾರತದೊದಿಗೆ ಯೂರೋಪಿಯನ್ ಯೂನಿಯನ್ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಷ್ಯನ್ ತೈಲವನ್ನು ಭಾರತ ಖರೀದಿಸುತ್ತಿರುವುದರಿಂದ ರಷ್ಯಾಗೆ ಯುದ್ಧ ಮುಂದುವರಿಸಲು ಸಾಧ್ಯವಾಗುತ್ತಿದೆ ಎಂಬುದು ಅಮೆರಿಕದ ತಗಾದೆ.

ನವದೆಹಲಿ, ಜನವರಿ 27: ಭಾರತದೊಂದಿಗೆ ವ್ಯಾಪಾರ ಒಪ್ಪಂದ (India EU trade pact) ಮಾಡಿಕೊಳ್ಳುವ ಮೂಲಕ ಯೂರೋಪ್ ತನ್ನ ಸಂಕಷ್ಟ ತಾನೇ ಸಂಕಷ್ಟ ತಂದುಕೊಳ್ಳುತ್ತಿದೆ ಎಂದು ಅಮೆರಿಕ ಬಣ್ಣಿಸಿದೆ. ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವೆ ಏರ್ಪಟ್ಟಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕ ಈ ಖಾರದ ಪ್ರತಿಕ್ರಿಯೆ ನೀಡಿದೆ. ರಷ್ಯನ್ ತೈಲವನ್ನು ಭಾರತ ಖರೀದಿಸುತ್ತಿರುವ ಸಂಗತಿಯನ್ನು ಇಟ್ಟುಕೊಂಡು ಯೂರೋಪ್ ಅನ್ನು ಅಮೆರಿಕ ಪರೋಕ್ಷವಾಗಿ ತಿವಿಯುವ ಕೆಲಸ ಮಾಡಿದೆ. ಯೂರೋಪ್ ತನ್ನ ವಿರುದ್ಧದ ಯುದ್ಧಕ್ಕೆ ತಾನೇ ಪ್ರಾಯೋಜಿಸುತ್ತಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿಯಾದ ಸ್ಕಾಟ್ ಬೆಸ್ಸೆಂಟ್ (US Treasury Secretary Scott Bessent) ಹೇಳಿದ್ದಾರೆ.
ಉಕ್ರೇನ್ಗೋಸ್ಕರ ಯೂರೋಪ್ಗಿಂತ ಅಮೆರಿಕದಿಂದ ಹೆಚ್ಚು ತ್ಯಾಗ ಎಂದ ಬೆಸ್ಸೆಂಟ್
ಯೂರೋಪ್ನ ಭಾಗವಾಗಿರುವ ಉಕ್ರೇನ್ ಅನ್ನು ರಷ್ಯಾದಿಂದ ರಕ್ಷಿಸಲು ಯೂರೋಪ್ಗಿಂತ ಹೆಚ್ಚು ಅಮೆರಿಕ ತ್ಯಾಗ ಮಾಡಿದೆ ಎಂದು ಸ್ಕಾಟ್ ಬೆಸ್ಸೆಂಟ್ ಹೇಳುವ ಮೂಲಕ ಯೂರೋಪಿಯನ್ ಯೂನಿಯನ್ನ ನಡೆಯನ್ನು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ಭಾರತ-ಯೂರೋಪಿಯನ್ ಯೂನಿಯನ್ ಒಪ್ಪಂದದಿಂದ ಯಾರಿಗೆ ಲಾಭ?
‘ಹಾಕಲು ಅಮೆರಿಕ ಪ್ರಯತ್ನಿಸುತ್ತಿದೆ. ಆದರೆ, ಜಾಗತಿಕ ತೈಲ ವ್ಯಾಪಾರ ವ್ಯವಸ್ಥೆಯಲ್ಲಿನ ದೌರ್ಬಲ್ಯದಿಂದ ಯೂರೋಪ್ ಆರ್ಥಿಕ ಲಾಭ ಪಡೆಯುವುದನ್ನು ಮುಂದುವರಿಸಿದೆ’ ಎಂದು ಅಮೆರಿಕದ ಟ್ರೆಷರಿ ಸೆಕ್ರೆಟರಿ ಹೇಳಿದ್ದಾರೆ.
‘ರಷ್ಯನ್ ತೈಲ ಖರೀದಿಸುತ್ತಿರುವುದಕ್ಕೆ ಭಾರತದ ಮೇಲೆ ನಾವು ಶೇ. 25 ಟ್ಯಾರಿಫ್ ಹಾಕಿದ್ದೇವೆ. ಆದರೆ, ಯೂರೋಪಿಯನ್ನರು ಭಾರತದೊಂದಿಗೆ ಟ್ರೇಡ್ ಮಾಡಿಕೊಂಡಿದ್ದಾರೆ. ಒಂದಂತೂ ತಿಳಿದಿರಿ… ರಷ್ಯನ್ ತೈಲವು ಭಾರತಕ್ಕೆ ಹೋಗುತ್ತದೆ. ಅಲ್ಲಿಂದ ಸಂಸ್ಕರಿತ ಉತ್ಪನ್ನಗಳಾಗಿ ಹೊರಬರುತ್ತವೆ. ಆ ಉತ್ಪನ್ನಗಳನ್ನು ಯೂರೋಪಿಯನ್ನರು ಖರೀದಿಸುತ್ತಾರೆ. ಅವರ ವಿರುದ್ಧದ ಯುದ್ಧಕ್ಕೆ ಅವರೇ ಫೈನಾನ್ಸಿಂಗ್ ಮಾಡುತ್ತಿದ್ದಾರೆ’ ಎಂದು ಬೆಸೆಂಟ್ ಹೇಳಿದ್ದಾರೆ.
ಇದನ್ನೂ ಓದಿ: CUSMA ನಿಯಮಗಳಿಗೆ ಬದ್ಧ; ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ಕೆನಡಾ ಹೇಳಿಕೆ
ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳನ್ನು ಹಾಕಿವೆ. ರಷ್ಯಾಗೆ ಈಗ ಅದರ ತೈಲ ಮಾರಾಟವೇ ಪ್ರಮುಖ ಆದಾಯ ಮೂಲವಾಗಿದೆ. ಭಾರತವು ರಷ್ಯನ್ ತೈಲ ಖರೀದಿಸುವ ಮೂಲಕ ಆ ದೇಶಕ್ಕೆ ಬಲ ಕೊಡುತ್ತಿದೆ ಎಂಬುದು ಅಮೆರಿಕದ ತಗಾದೆ. ಅಂತೆಯೇ, ಅದು ಭಾರತದ ಮೇಲೆ ಶೇ. 25ರ ಟ್ಯಾರಿಫ್ ಹಾಕಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Tue, 27 January 26
