EU: ರಷ್ಯಾ ಯುದ್ಧಕ್ಕೆ ಸಹಾಯ; ಭಾರತದ್ದೂ ಸೇರಿ 20ಕ್ಕೂ ಹೆಚ್ಚು ಕಂಪನಿಗಳಿಗೆ ವ್ಯಾಪಾರ ನಿರ್ಬಂಧಕ್ಕೆ ಯೂರೋಪ್ ಯೋಜನೆ

24 Companies Face Sanctions from European Union: ಉಕ್ರೇನ್ ಮೇಲಿನ ಯುದ್ಧ ಮುಂದುವರಿಸಲು ರಷ್ಯಾಗೆ ಸಾಧ್ಯವಾಗಿಸುವಂತೆ ನೆರವಾಗುತ್ತಿರುವ ಕಂಪನಿಗಳನ್ನು ಐರೋಪ್ಯ ಒಕ್ಕೂಟ ಪಟ್ಟಿ ಮಾಡಿದೆ. 24 ಕಂಪನಿಗಳ ಈ ಪಟ್ಟಿಯಲ್ಲಿ ಭಾರತದ ಒಂದು ಮತ್ತು ಚೀನಾದ ಮೂರು ಕಂಪನಿಗಳಿವೆ. ಐರೋಪ್ಯ ಒಕ್ಕೂಟ ಈ 24 ಕಂಪನಿಗಳಿಗೆ ಯೂರೋಪ್​ನಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವ ಪ್ರಸ್ತಾಪ ಮಾಡಿದೆ.

EU: ರಷ್ಯಾ ಯುದ್ಧಕ್ಕೆ ಸಹಾಯ; ಭಾರತದ್ದೂ ಸೇರಿ 20ಕ್ಕೂ ಹೆಚ್ಚು ಕಂಪನಿಗಳಿಗೆ ವ್ಯಾಪಾರ ನಿರ್ಬಂಧಕ್ಕೆ ಯೂರೋಪ್ ಯೋಜನೆ
ಐರೋಪ್ಯ ಒಕ್ಕೂಟ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 13, 2024 | 4:08 PM

ನವದೆಹಲಿ, ಫೆಬ್ರುವರಿ 13: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಸಹಾಯ ಮಾಡಲಾಗುತ್ತಿರುವ ಆರೋಪದ ಮೇಲೆ ಐರೋಪ್ಯ ಒಕ್ಕೂಟವು ವಿವಿಧ ದೇಶಗಳ 24 ಕಂಪನಿಗಳ ಮೇಲೆ ವ್ಯಾಪಾರ ನಿರ್ಬಂಧ (trade restrictions) ಹಾಕಲು ಯೋಜಿಸಿದೆ. ಇದರಲ್ಲಿ ಚೀನಾದ ಮೂರು ಮತ್ತು ಭಾರತದ ಒಂದು ಕಂಪನಿ ಒಳಗೊಂಡಿವೆ ಎಂದು ಬ್ಲೂಮ್​ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ. ಉಕ್ರೇನ್ ಯುದ್ಧ ಆರಂಭವಾದ ಬಳಿಕ ಇಲ್ಲಿಯವರೆಗೆ ಯೂರೋಪ್​ನಲ್ಲಿ ಚೀನಾದ ಯಾವ ಕಂಪನಿಯ ಮೇಲೆ ಟ್ರೇಡ್ ರೆಸ್ಟ್ರಿಕ್ಷನ್ಸ್ ಹಾಕಿಲ್ಲ. ಈಗ ವರದಿಯಲ್ಲಿರುವುದು ನಿಜವಾದರೆ ಚೀನೀ ಕಂಪನಿಯೊಂದಕ್ಕೆ ಐರೋಪ್ಯ ಒಕ್ಕೂಟದಲ್ಲಿ (European Union) ಮೊದಲ ಬಾರಿಗೆ ನಿರ್ಬಂಧ ಬಿದ್ದಂತಾಗುತ್ತದೆ. ಇನ್ನು, ಭಾರತದ ಯಾವ ಕಂಪನಿಯ ಮೇಲೆ ನಿರ್ಬಂಧದ ತೂಗುಗತ್ತಿ ಇದೆ ಎಂಬ ಮಾಹಿತಿ ಈ ವರದಿಯಲ್ಲಿ ಇಲ್ಲ.

ಚೀನಾ, ಭಾರತ ಮಾತ್ರವಲ್ಲದೇ, ಶ್ರೀಲಂಕಾ, ಕಜಕಸ್ತಾನ, ಥಾಯ್ಲೆಂಡ್, ಹಾಂಕಾಂಗ್, ಸರ್ಬಿಯಾ, ಟರ್ಕಿ ದೇಶಗಳ ಕಂಪನಿಗಳೂ ಐರೋಪ್ಯ ಒಕ್ಕೂಟದ ನಿರ್ಬಂಧ ಪಟ್ಟಿಯಲ್ಲಿ ಇವೆ. ನಿರ್ಬಂಧ ಕ್ರಮ ಜಾರಿಯಾದಲ್ಲಿ, ಈ ಪಟ್ಟಿಯಲ್ಲಿರುವ ಕಂಪನಿಗಳ ಜೊತೆ ಐರೋಪ್ಯ ಒಕ್ಕೂಟದ ಯಾವ ಕಂಪನಿಯೂ ವ್ಯಾಪಾರ ನಡೆಸುವಂತಿಲ್ಲ.

ಚೀನಾದ ಕೆಲ ಕಂಪನಿಗಳ ಮೇಲೆ ಈ ಮುಂಚೆ ನಿರ್ಬಂಧ ಹೇರುವ ಪ್ರಯತ್ನ ನಡೆದಿತ್ತು. ಆದರೆ, ಒಕ್ಕೂಟದ ಕೆಲ ದೇಶಗಳು ಇದಕ್ಕೆ ಆಕ್ಷೇಪಿಸಿದ್ದವು. ಅಲ್ಲದೇ ಚೀನಾ ಕೂಡ ತಾನು ನಿಷೇಧಿತ ವಸ್ತುಗಳನ್ನು ರಷ್ಯಾಗೆ ಮಾರುವುದಿಲ್ಲ ಎಂದು ಭರವಸೆ ಕೊಟ್ಟಿದ್ದರಿಂದ ಕ್ರಮ ಜರುಗಿಸಿರಲಿಲ್ಲ. ಈಗ ಯೂರೋಪಿಯನ್ ಯೂನಿಯನ್ ಮತ್ತೊಮ್ಮೆ ಪಟ್ಟಿ ಮಾಡಿದೆ.

ಇದನ್ನೂ ಓದಿ: ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆ ಸಾಧ್ಯತೆ

ಯಾಕೆ ಈ ನಿರ್ಬಂಧ?

ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾಗೆ ಯುದ್ಧದಲ್ಲಿ ನೆರವಾಗುವಂತಹ ವಸ್ತುಗಳನ್ನು ಸರಬರಾಜು ಮಾಡುವ ದೇಶಗಳು ಮತ್ತು ಕಂಪನಿಗಳನ್ನು ಅಮೆರಿಕ ಮತ್ತು ಯೂರೋಪ್ ನಿಷೇಧಿಸಿವೆ. ಯುದ್ಧಕ್ಕೆ ಬೇಕಾಗುವಂತಹ ವಸ್ತುಗಳನ್ನು ರಷ್ಯಾಗೆ ಪೂರೈಸಬಾರದು ಎಂದು ಪಟ್ಟಿ ಮಾಡಲಾಗಿದೆ. ಇಂಥ ನಿಷೇಧಿತ ವಸ್ತುಗಳನ್ನು ರಷ್ಯಾಗೆ ಮಾರುವ ಕಂಪನಿಗಳೊಂದಿಗೆ ಐರೋಪ್ಯ ಒಕ್ಕೂಟದ ದೇಶಗಳಲ್ಲಿ ವ್ಯವಹರಿಸಲು ಸಾಧ್ಯವಾಗುವುದಿಲ್ಲ.

ಹಿಂದೆ ಹಲವು ರಷ್ಯನ್ ಕಂಪನಿಗಳು ಐರೋಪ್ಯ ಕಂಪನಿಗಳಿಂದ ಟೆಕ್ನಾಲಜಿ ಮತ್ತು ಎಲೆಕ್ಟ್ರಾನಿಕ್ಸ್​ಗಳನ್ನು ಆಮದು ಮಾಡಿಕೊಂಡು ಅದನ್ನು ರಷ್ಯಾ ಸರ್ಕಾರಕ್ಕೆ ವರ್ಗಾಯಿಸುತ್ತಿದ್ದುದನ್ನು ಪತ್ತೆ ಮಾಡಲಾಗಿತ್ತು. ಐರೋಪ್ಯ ಒಕ್ಕೂಟ ಇಂಥ 620ಕ್ಕೂ ಹೆಚ್ಚು ಕಂಪನಿಗಳ ಪಟ್ಟಿ ಮಾಡಿತ್ತು.

ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು…

ಅಷ್ಟು ಸುಲಭಕ್ಕೆ ನಿರ್ಬಂಧ ಸಾಧ್ಯವಿಲ್ಲ…

ಐರೋಪ್ಯ ಒಕ್ಕೂಟವು ವಿವಿಧ ಕಂಪನಿಗಳನ್ನು ನಿರ್ಬಂಧಿಸಲು ಮಾಡಿರುವ ಪ್ರಸ್ತಾವಕ್ಕೆ ಎಲ್ಲಾ ಸದಸ್ಯ ದೇಶಗಳೂ ಒಪ್ಪಿಗೆ ನೀಡಬೇಕು. ಕೆಲ ದೇಶಗಳ ತಕರಾರು ತೆಗೆದರೆ ಪ್ರಸ್ತಾವದಲ್ಲಿ ಬದಲಾವಣೆ ತರುವ ಅವಕಾಶ ಇರುತ್ತದೆ. ಹೀಗಾಗಿ, ಈ ನಿರ್ಬಂಧ ಕ್ರಮ ಜಾರಿಗೆ ಬರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ