Union Budget 2022: ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಬಜೆಟ್​ ಸಲಹೆಗಳನ್ನು ಆಹ್ವಾನಿಸಿದ ಕೇಂದ್ರ ಸರ್ಕಾರ

| Updated By: Srinivas Mata

Updated on: Nov 05, 2021 | 10:13 PM

2022-23ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಂದ್ರ ಹಣಕಾಸು ಸಚಿವಾಲಯದಿಂದ ಆಹ್ವಾನಿಸಲಾಗಿದೆ. ಸಲ್ಲಿಕೆಗೆ ನವೆಂಬರ್ 15 ಕೊನೆ ದಿನವಾಗಿದೆ.

Union Budget 2022: ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಬಜೆಟ್​ ಸಲಹೆಗಳನ್ನು ಆಹ್ವಾನಿಸಿದ ಕೇಂದ್ರ ಸರ್ಕಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us on

2022-23ನೇ ಸಾಲಿನ ಬಜೆಟ್‌ಗೆ ತೆರಿಗೆ ವಿಧಿಸುವ ಕುರಿತು ಕೈಗಾರಿಕೆಗಳು ಮತ್ತು ವ್ಯಾಪಾರ ಸಂಸ್ಥೆಗಳಿಂದ ಹಣಕಾಸು ಸಚಿವಾಲಯವು ಸಲಹೆಗಳನ್ನು ಆಹ್ವಾನಿಸಿದೆ. ಇದು ಕೊವಿಡ್-19 ಸಾಂಕ್ರಾಮಿಕದಿಂದ ಭಾರತದ ಆರ್ಥಿಕತೆಯ ಬೆಳವಣಿಗೆಗೆ ರೂಪುರೇಷೆ ಹೊಂದಿಸಲಿದೆ. ವ್ಯಾಪಾರ ಮತ್ತು ಉದ್ಯಮ ಸಂಘಗಳಿಗೆ ಸಂವಹನದಲ್ಲಿ, ಸುಂಕದ ರಚನೆ, ದರಗಳು ಮತ್ತು ನೇರ ಹಾಗೂ ಪರೋಕ್ಷ ತೆರಿಗೆಗಳ ಮೇಲಿನ ತೆರಿಗೆ ಮೂಲವನ್ನು ವಿಸ್ತರಿಸುವ ಬದಲಾವಣೆಗಳಿಗೆ ಸಚಿವಾಲಯವು ಸಲಹೆಗಳನ್ನು ಆಹ್ವಾನಿಸಿದೆ. ಸಲಹೆಗಳನ್ನು ನವೆಂಬರ್ 15, 2021ರೊಳಗೆ ಸಚಿವಾಲಯಕ್ಕೆ ಕಳುಹಿಸಬಹುದು ಎಂದು ಸಚಿವಾಲಯ ಹೇಳಿದೆ. “ನಿಮ್ಮ ಸಲಹೆಗಳು ಮತ್ತು ದೃಷ್ಟಿಕೋನಗಳು ಉತ್ಪಾದನೆ, ಬೆಲೆಗಳು, ಸೂಚಿಸಿದ ಬದಲಾವಣೆಗಳ ಆದಾಯದ ಪರಿಣಾಮ ಮತ್ತು ನಿಮ್ಮ ಪ್ರಸ್ತಾಪವನ್ನು ಬೆಂಬಲಿಸುವ ಯಾವುದೇ ಇತರ ಮಾಹಿತಿಯ ಕುರಿತು ಸಂಬಂಧಿಸಿದ ಅಂಕಿ-ಅಂಶಗಳನ್ನು ಪೂರಕವಾಗಿ ನೀಡಬಹುದು ಮತ್ತು ಸಮರ್ಥಿಸಬಹುದು,” ಎಂದು ಸಚಿವಾಲಯ ಹೇಳಿದೆ. ಒಂದು ವೇಳೆ ಸರಕುಗಳಿಗೆ ಯಾವುದಾದರೂ ಸುಂಕದ ರಚನೆಯನ್ನು ಸರಿಪಡಿಸುವ ವಿನಂತಿಯು ಇದ್ದರೆ, ಸರಕುಗಳ ತಯಾರಿಕೆಯ ಪ್ರತಿ ಹಂತದಲ್ಲಿ ಮೌಲ್ಯವರ್ಧನೆಯ ಮೂಲಕ ಅಗತ್ಯವಾಗಿ ಬೆಂಬಲಿಸಬೇಕು ಎಂದಿದೆ.

ಸ್ಪಷ್ಟವಾಗಿ ವಿವರಿಸದ ಅಥವಾ ಸಾಕಷ್ಟು ಸಮರ್ಥನೆ ಅಥವಾ ಅಂಕಿಅಂಶಗಳಿಂದ ಬೆಂಬಲಿಸದ ಸಲಹೆಗಳನ್ನು ಪರಿಶೀಲಿಸುವುದು ಸಾಧ್ಯವಿಲ್ಲ ಎಂದು ಸಚಿವಾಲಯ ಹೇಳಿದೆ. 2022-23ರ ಬಜೆಟ್ ಅನ್ನು ಮುಂದಿನ ವರ್ಷ ಫೆಬ್ರವರಿ 1ರಂದು ಸಂಸತ್​ನಲ್ಲಿ ಮಂಡಿಸುವ ನಿರೀಕ್ಷೆಯಿದೆ. ಇದು ನರೇಂಂದ್ರ ಮೋದಿ ನೇತೃತ್ವದ 2.0 ಸರ್ಕಾರ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಾಲ್ಕನೇ ಬಜೆಟ್ ಆಗಿರುತ್ತದೆ. ಮುಂದಿನ ವರ್ಷದ ಬಜೆಟ್ ಬೇಡಿಕೆ ಉತ್ಪಾದನೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕತೆಯನ್ನು ಸ್ಥಿರವಾದ ಶೇ 8 ಬೆಳವಣಿಗೆಯ ಹಾದಿಯಲ್ಲಿ ಇರಿಸುವ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ.

“ಮಧ್ಯಮಾವಧಿಯಲ್ಲಿ ನೇರ ತೆರಿಗೆಗಳನ್ನು ಉಲ್ಲೇಖಿಸುವ ಸರ್ಕಾರದ ನೀತಿಯು ತೆರಿಗೆ ಪ್ರೋತ್ಸಾಹ, ಕಡಿತ ಮತ್ತು ವಿನಾಯಿತಿಗಳನ್ನು ಹಂತಹಂತವಾಗಿ ತೆಗೆದುಹಾಕುವುದು ಮತ್ತು ಏಕಕಾಲದಲ್ಲಿ ತೆರಿಗೆ ದರಗಳನ್ನು ಕ್ರಮಬದ್ಧಗೊಳಿಸುವುದು,” ಎಂದು ಪತ್ರದಲ್ಲಿ ಹೇಳಲಾಗಿದೆ. ಸದ್ಯಕ್ಕೆ, ಆದಾಯ ತೆರಿಗೆ ಕಾಯ್ದೆಯಲ್ಲಿ 100ಕ್ಕೂ ಹೆಚ್ಚು ವಿನಾಯಿತಿಗಳು ಮತ್ತು ವಿಭಿನ್ನ ಸ್ವರೂಪದ ಕಡಿತಗಳನ್ನು ಒದಗಿಸಲಾಗಿದೆ.

ಸಚಿವಾಲಯವು ನಿಯಮಾವಳಿಗಳನ್ನು ಕಡಿಮೆ ಮಾಡಲು, ತೆರಿಗೆ ನಿಶ್ಚಿತತೆಯನ್ನು ಒದಗಿಸಲು ಮತ್ತು ದಾವೆಗಳನ್ನು ಕಡಿಮೆ ಮಾಡಲು ಸಲಹೆಗಳನ್ನು ಕೇಳಿದೆ. ಆದರೂ ಸರಕು ಮತ್ತು ಸೇವೆಗಳ (ಜಿಎಸ್‌ಟಿ) ವಿಷಯಗಳನ್ನು ಬಜೆಟ್‌ನ ಭಾಗವಾಗಿ ಪರಿಶೀಲಿಸಲಾಗುವುದಿಲ್ಲ. ಏಕೆಂದರೆ ಅವುಗಳನ್ನು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ ಎಂದು ಅದು ಸ್ಪಷ್ಟಪಡಿಸಿದೆ. ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಮಾಡಬಹುದು ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: Fiscal Deficit: ವಿತ್ತೀಯ ಕೊರತೆ ಸೆಪ್ಟೆಂಬರ್​ ತಿಂಗಳ ತನಕ ರೂ. 5.26 ಲಕ್ಷ ಕೋಟಿ ಅಥವಾ ಅಂದಾಜಿನ ಶೇ 35ರಷ್ಟು