
ನವದೆಹಲಿ, ಮೇ 12: ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ತಯಾರಿಸಲಾದ ಹೈಡ್ರೋಜನ್ ಶಕ್ತ ಡ್ರೋನ್ಗಳು (Hydrogen Powered Drones) ಸೇನೆಯಲ್ಲಿ ನಿಯೋಜನೆಗೆ ಸಿದ್ಧವಾಗಿವೆ. ಇಸ್ರೇಲ್ನ ಹೆವೆನ್ಡ್ರೋನ್ಸ್ (HevenDrones) ಎನ್ನುವ ಸಂಸ್ಥೆಯ ಸಹಯೋಗದಲ್ಲಿ ಭಾರತದ ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ (Paras Defence and Space Technologies) ಸಂಸ್ಥೆ ಈ ಡ್ರೋನ್ಗಳನ್ನು ತಯಾರಿಸಿದೆ. ಈ ಜಲಜನಕ ಶಕ್ತ ಡ್ರೋನ್ಗಳಿಂದ ಭಾರತದ ರಕ್ಷಣಾ ಕ್ಷೇತ್ರ ಮತ್ತಷ್ಟು ಬಲಗೊಳ್ಳಗೊಳ್ಳಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ (India Pakistan conflict) ಡ್ರೋನ್ಗಳು ಎಷ್ಟು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಸಾಬೀತಾರಿದೆ. ಈ ಹಿನ್ನೆಲೆಯಲ್ಲಿ ಹೈಡ್ರೋಜನ್ ಡ್ರೋನ್ಗಳ ಆಗಮನವು ಭಾರತದ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಇಸ್ರೇಲ್ನ ಹೆವೆನ್ಡ್ರೋನ್ಸ್ ಕಂಪನಿಯು ಅಮೆರಿಕ ಮೂಲದ ಹೆವೆನ್ ಎನ್ನುವ ಕಂಪನಿಯ ಅಂಗಸಂಸ್ಥೆಯಾಗಿದೆ. ಅಮೆರಿಕದ ಈ ಕಂಪನಿಯು ಹೈಡ್ರೋಜನ್ ಶಕ್ತ ಡ್ರೋನ್ಗಳ ತಯಾರಿಕೆಗೆ ಹೆಸರಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಭಾರತದಲ್ಲಿ ಈ ಡ್ರೋನ್ಗಳನ್ನು ಪರಸ್ ಸಂಸ್ಥೆ ತಯಾರಿಸುತ್ತಿದೆ. ಇಸ್ರೇಲ್ನ ಯುದ್ಧ ಸಿದ್ಧ ಮಾದರಿ, ಅಮೆರಿಕದ ತಂತ್ರಜ್ಞಾನ ಹಾಗೂ ಭಾರತದ ಉತ್ಪಾದನಾ ಸಾಮರ್ಥ್ಯ ಇದು ಭಾರತದಲ್ಲಿ ಹೈಡ್ರೋಜನ್ ಶಕ್ತ ಡ್ರೋನ್ಗಳಿಗೆ ಜೀವ ತುಂಬಿದೆ ಎನ್ನುತ್ತದೆ ಪರಸ್ ಡಿಫೆನ್ಸ್ ಅಂಡ್ ಸ್ಪೆಸ್ ಟೆಕ್ನಾಲಜೀಸ್ ಸಂಸ್ಥೆ.
ಇದನ್ನೂ ಓದಿ: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?
ಸಾಮಾನ್ಯವಾಗಿ ಡ್ರೋನ್ಗಳು ಬ್ಯಾಟರಿ ಚಾಲಿತವಾಗಿರುತ್ತವೆ. ಹೈಡ್ರೋಜನ್ ಡ್ರೋನ್ಗಳು ಹೈಡ್ರೋಜನ್ ಫುಯಲ್ ಸೆಲ್ಗಳನ್ನು ಹೊಂದಿರುತ್ತವೆ. ಇವು ದೀರ್ಘಾವಧಿ ಕಾಲ ಹಾರಾಡಬಲ್ಲುವು. ದೂರ ಶ್ರೇಣಿಯ ಆಕ್ರಮಣ ಹಾಗೂ ಸ್ಟೀಲ್ತ್ ಅಪರೇಷನ್ಸ್ಗೆ ಈ ಡ್ರೋನ್ಗಳು ಹೇಳಿ ಮಾಡಿರುತ್ತವೆ.
ಪಾರಸ್ ಡಿಫೆನ್ಸ್ ಮತ್ತು ಹೆವೆನ್ಡ್ರೋನ್ಸ್ ಸಂಸ್ಥೆಗಳ ಈ ಜಂಟಿ ವ್ಯವಹಾರದಲ್ಲಿ ಮಿಲಿಟರಿ ಡ್ರೋನ್ಗಳಷ್ಟೇ ಅಲ್ಲದೆ, ನಾಗರಿಕ ಬಳಕೆಗೆ ಬೇಕಾದ ಡ್ರೋನ್ಗಳನ್ನೂ ತಯಾರಿಸುತ್ತಿದೆ. ಸರಕು ಸಾಗಣೆಗೆ ಇವುಗಳನ್ನು ಬಳಸಬಹುದಾಗಿದೆ. ಭಾರತದ ಮಾರುಕಟ್ಟೆಗೆ ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಗೂ ಈ ಡ್ರೋನ್ಗಳ ಸರಬರಾಜಾಗಬಹುದು. ಭಾರತದಲ್ಲಿ ಎವಿರೋನಿಕ್ಸ್ ಡ್ರೋನ್ ಎನ್ನುವ ಕಂಪನಿ ಕೂಡ ಹೈಡ್ರೋಜನ್ಶಕ್ತ ಡ್ರೋನ್ಗಳನ್ನು ತಯಾರಿಸುತ್ತಿದೆ.
ಇದನ್ನೂ ಓದಿ: ತುರ್ತು ಸಂದರ್ಭದಲ್ಲಿ ದೇಶದ ಎಲ್ಲಾ ತೈಲ ಮತ್ತು ನೈಸರ್ಗಿಕ ಅನಿಲದ ಮೊದಲ ಅಧಿಕಾರ ಸರ್ಕಾರದ್ದು: ಹೊಸ ನಿಯಮ ನಿರೀಕ್ಷೆ
ಜಾಗತಿಕವಾಗಿ, ಚೀನಾ ಅತಿಹೆಚ್ಚು ಹೈಡ್ರೋಜನ್ ಡ್ರೋನ್ಗಳನ್ನು ತಯಾರಿಸುತ್ತದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಸೌತ್ ಕೊರಿಯ, ಜಪಾನ್ ಮೊದಲಾದ ಕೆಲ ದೇಶಗಳು ಈ ತಂತ್ರಜ್ಞಾನ ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ