Reliance FMCG Independence: ಗುಜರಾತ್​​ನಲ್ಲಿ ‘ಇಂಡಿಪೆಂಡೆನ್ಸ್’ ಬ್ರ್ಯಾಂಡ್ ಬಿಡುಗಡೆ ಮಾಡಿದ ರಿಲಯನ್ಸ್

| Updated By: Ganapathi Sharma

Updated on: Dec 15, 2022 | 6:41 PM

ರಿಲಯನ್ಸ್ ಗ್ರೂಪ್ ಗುಜರಾತ್​​ನಲ್ಲಿ ಫಾಸ್ಟ್ ಮೂವಿಂಗ್ ಕನ್​ಸ್ಯೂಮರ್ ಗೂಡ್ಸ್ ಬ್ರ್ಯಾಂಡ್ ‘ಇಂಡಿಪೆಂಡೆನ್ಸ್’ ಅನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಬ್ರ್ಯಾಂಡ್ ಅಡಿಯಲ್ಲಿ ಕಂಪನಿಯು ಆಹಾರ ವಸ್ತುಗಳು ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಪೂರೈಸಲಿದೆ.

Reliance FMCG Independence: ಗುಜರಾತ್​​ನಲ್ಲಿ ‘ಇಂಡಿಪೆಂಡೆನ್ಸ್’ ಬ್ರ್ಯಾಂಡ್ ಬಿಡುಗಡೆ ಮಾಡಿದ ರಿಲಯನ್ಸ್
‘ಇಂಡಿಪೆಂಡೆನ್ಸ್’ ಬ್ರ್ಯಾಂಡ್
Follow us on

ಅಹಮದಾಬಾದ್: ರಿಲಯನ್ಸ್ ಗ್ರೂಪ್ (Reliance Group) ಗುಜರಾತ್​​ನಲ್ಲಿ (Gujarat) ಫಾಸ್ಟ್ ಮೂವಿಂಗ್ ಕನ್​ಸ್ಯೂಮರ್ ಗೂಡ್ಸ್ (FMCG) ಬ್ರ್ಯಾಂಡ್ ‘ಇಂಡಿಪೆಂಡೆನ್ಸ್’ ಅನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಬ್ರ್ಯಾಂಡ್ ಅಡಿಯಲ್ಲಿ ಕಂಪನಿಯು ಆಹಾರ ವಸ್ತುಗಳು ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಪೂರೈಸಲಿದೆ. ರಿಲಯನ್ಸ್ ವೆಂಚರ್ಸ್ ಲಿಮಿಟೆಡ್​​ನ ಅಂಗಸಂಸ್ಥೆ ರಿಲಯನ್ಸ್ ಕನ್​ಸ್ಯೂಮರ್ ಪ್ರಾಡಕ್ಟ್ಸ್ ಬ್ರ್ಯಾಂಡ್​ ಬಿಡುಗಡೆ ಮಾಡಿದೆ. ‘ನಮ್ಮದೇ ಆದ ಎಂಎಂಸಿಜಿ ಬ್ರ್ಯಾಂಡ್ ಬಿಡುಗಡೆ ಮಾಡಲು ಸಂತಸವಾಗುತ್ತಿದೆ. ಉನ್ನತ ಗುಣಮಟ್ಟ ಮತ್ತು ಕೈಗೆಟಕುವ ಬೆಲೆಯಲ್ಲಿ ಖಾದ್ಯ ತೈಲ, ಕಾಳುಗಳು, ಧಾನ್ಯಗಳು, ಪ್ಯಾಕೇಜ್ಡ್ ಆಹಾರ ವಸ್ತುಗಳು ಹಾಗೂ ಇತರ ದಿನಬಳಕೆಯ ವಸ್ತುಗಳನ್ನು ಪೂರೈಸಲಾಗುವುದು’ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್​​ನ ನಿರ್ದೇಶಕಿ ಇಶಾ ಅಂಬಾನಿ ಹೇಳಿದರು. ಗುಜರಾತ್​ನ ಅಹಮದಾಬಾದ್​ನಲ್ಲಿ ಬ್ರ್ಯಾಂಡ್ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ಗುಜರಾತ್​ ಅನ್ನು ‘ಗೋ ಟು ಮಾರ್ಕೆಟ್’ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವುದು ಕಂಪನಿಯ ಗುರಿಯಾಗಿದೆ. ಶ್ರೇಷ್ಠ ಎಫ್​ಎಂಸಿಜಿ ಉದ್ಯಮವನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲಿದ್ದೇವೆ. ಕ್ರಮೇಣ ಬ್ರ್ಯಾಂಡ್​ ಅನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ರಿಲಯನ್ಸ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Reliance Jio 5G: 5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆ ಆರಂಭಿಸಿದ ರಿಲಯನ್ಸ್ ಜಿಯೋ

ಭಾರತೀಯ ಗ್ರಾಹಕರ ಅಗತ್ಯತೆಗಳ ತಿಳುವಳಿಕೆಯೊಂದಿಗೆ ಇಂಡಿಪೆಂಡೆನ್ಸ್ ಬ್ರ್ಯಾಂಡ್​ ಬಿಡುಗಡೆ ಮಾಡಲಾಗಿದೆ. ಇದು ದೇಶದ ಮನೆಗಳಲ್ಲಿ ಒಂದು ಸ್ಥಾನವನ್ನು ಕಂಡುಕೊಳ್ಳುವುದು ಖಚಿತ. ಇದು ಕೇವಲ ಮೇಡ್ ಇನ್ ಇಂಡಿಯಾ ಅಷ್ಟೇ ಅಲ್ಲ, ಮೇಡ್ ಫಾರ್ ಇಂಡಿಯಾ ಎಂದು ಕಂಪನಿಯ ಪ್ರಕಟಣೆ ಉಲ್ಲೇಖಿಸಿದೆ.

ಮುಂಬರುವ ತಿಂಗಳುಗಳಲ್ಲಿ ಬ್ರ್ಯಾಂಡ್​ ಅನ್ನು ಗುಜರಾತ್​ನ ಹೊರವಲಯದ ಚಿಲ್ಲರೆ ಮಾರಾಟಗಾರರವರೆಗೆ ವಿಸ್ತರಿಸುವ ಉದ್ದೇಶವನ್ನೂ ಕಂಪನಿ ಹೊಂದಿದೆ. ಶೀಘ್ರದಲ್ಲೇ ಎಎಫ್​​ಎಂಸಿಜಿ ಬ್ರ್ಯಾಂಡ್ ಬಿಡುಗಡೆ ಮಾಡುವುದಾಗಿ ಆಗಸ್ಟ್​ನಲ್ಲಿ ರಿಲಯನ್ಸ್ ತಿಳಿಸಿತ್ತು.

ಸದ್ಯ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ 2 ಟ್ರಿಲಿಯನ್ ರೂ. ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದೆ. 22ನೇ ಹಣಕಾಸು ವರ್ಷದಲ್ಲಿ ಕಂಪನಿಯ ಮಾರಾಟ ಮತ್ತು ಸೇವೆಗಳ ಮೌಲ್ಯ 1,99,749 ಕೋಟಿ ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Thu, 15 December 22