ಭಾರತದಲ್ಲಿ ಫಾಕ್ಸ್​ಕಾನ್​ನ ಪ್ರಧಾನ ಕಾರ್ಯಕ್ಷೇತ್ರ ಕರ್ನಾಟಕವಾಗುತ್ತಾ? ಹೆಚ್ಚುವರಿ ಹೂಡಿಕೆ ಮಾಡುತ್ತಿದೆ ಐಫೋನ್ ತಯಾರಕ

Foxconn Investment in Karnataka: ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗಲಿರುವ ತನ್ನ ಮ್ಯಾನುಫ್ಯಾಕ್ಚರಿಂಗ್ ಸೌಲಭ್ಯ ಘಟಕಕ್ಕೆ ಫಾಕ್ಸ್​ಕಾನ್ ಒಟ್ಟು 21 ಸಾವಿರ ಕೋಟಿ ರೂಗೂ ಹೆಚ್ಚು ಮೊತ್ತದ ಹೂಡಿಕೆ ಮಾಡಲಿದೆ. ಫಾಕ್ಸ್​ಕಾನ್​ನ ಹೆಚ್ಚುವರಿ ಹೂಡಿಕೆ ಸೇರಿದಂತೆ 34,000 ರೂ ಮೊತ್ತದ 14 ವಿವಿಧ ಯೋಜನೆಗಳಿಗೆ ಸಿದ್ದರಾಮಯ್ಯ ನೇತೃತ್ವದ ಸಮಿತಿ ಅನುಮೋದನೆ ಕೊಟ್ಟಿದೆ. ಈ ಯೋಜನೆಗಳಿಂದ 14,000 ಉದ್ಯೋಗ ಸೃಷ್ಟಿಯಾಗಬಹುದು. ದೊಡ್ಡಬಳ್ಳಾಪುರದ ಐಟಿಐಆರ್ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಫಾಕ್ಸ್​ಕಾನ್​ನ ಬೃಹತ್ ಘಟಕ ತಯಾರಾಗುತ್ತಿದೆ. ಭಾರತದಲ್ಲಿ ಅದರ ಅತಿದೊಡ್ಡ ಘಟಕ ಇದಾಗಬಹುದು.

ಭಾರತದಲ್ಲಿ ಫಾಕ್ಸ್​ಕಾನ್​ನ ಪ್ರಧಾನ ಕಾರ್ಯಕ್ಷೇತ್ರ ಕರ್ನಾಟಕವಾಗುತ್ತಾ? ಹೆಚ್ಚುವರಿ ಹೂಡಿಕೆ ಮಾಡುತ್ತಿದೆ ಐಫೋನ್ ತಯಾರಕ
ಫಾಕ್ಸ್​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 14, 2023 | 10:36 AM

ಬೆಳಗಾವಿ, ಡಿಸೆಂಬರ್ 14: ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ತಯಾರಕ ಸಂಸ್ಥೆ ಫಾಕ್ಸ್​ಕಾನ್ (Foxconn India) ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಿಸಲು ಮುಂದಾಗಿದೆ. ಬೆಂಗಳೂರು ಸಮೀಪ ತಯಾರಕ ನಿರ್ಮಿಸಲಾಗುವ ತಯಾರಕ ಘಟಕಕ್ಕೆ ಈ ಹಿಂದೆ 8,000 ಕೋಟಿ ರೂ ರೂ ಹೂಡಿಕೆಯ ಪ್ರಸ್ತಾವ ಮಾಡಿದ್ದ ಫಾಕ್ಸ್​ಕಾನ್ ಇದೀಗ 13,9111 ಕೋಟಿ ರೂ ಹೂಡಿಕೆಗೆ ಪ್ರಸ್ತಾವನೆ (investment proposal) ಸಲ್ಲಿಸಿದೆ. ಇದರೊಂದಿಗೆ 21,911 ಕೋಟಿ ರೂ ಹೂಡಿಕೆಗೆ ಫಾಕ್ಸ್​ಕಾನ್ ಮುಂದಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಫಾಕ್ಸ್​ಕಾನ್​ನ ಹೆಚ್ಚುವರಿ ಹೂಡಿಕೆ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ (High level clearance committee) ಮೊನ್ನೆ (ಡಿ. 12) ಫಾಕ್ಸ್​ಕಾನ್​ನದ್ದೂ ಸೇರಿದಂತೆ 34,115 ಕೋಟಿ ರೂ ಮೊತ್ತದ ವಿವಿಧ 14 ಯೋಜನೆಗಳಿಗೆ ಅನುಮೋದನೆ ಕೊಟ್ಟಿದೆ. ರಾಜ್ಯಾದ್ಯಂತ ಶುರುವಾಗಲಿರುವ ಈ ಯೋಜನೆಗಳಿಂದ ಒಟ್ಟು 14,000ದಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಫಾಕ್ಸ್​ಕಾನ್ ಎಂದು ಚಿರಪರಿಚಿತವಾಗಿರುವ ತೈವಾನ್ ಮೂಲದ ಹೋನ್ ಹಾಯ್ ಪ್ರಿಸಿಶನ್ ಸಂಸ್ಥೆ ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ಬಳಿಯ ಐಟಿ ಇನ್ವೆಸ್ಟ್​ಮೆಂಟ್ ರೀಜನ್ (ಐಟಿಐಆರ್) ಕೈಗಾರಿಕಾ ಪ್ರದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪಿಸುತ್ತಿದೆ. ಅದಕ್ಕಾಗಿ ಮೇ ತಿಂಗಳಲ್ಲಿ 300 ಕೋಟಿ ರೂ ವೆಚ್ಚದಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಇದೇ ಘಟಕಕ್ಕೆ ಫಾಕ್ಸ್​ಕಾನ್ ಹೆಚ್ಚುವರಿ ಹೂಡಿಕೆ ಮಾಡಲಿದೆ.

ಇದನ್ನೂ ಓದಿ: ITC: ವಿಶ್ವದ ಅತಿಹೆಚ್ಚು ಮೌಲ್ಯದ ತಂಬಾಕು ಕಂಪನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತದ ಐಟಿಸಿ

ಆ್ಯಪಲ್ ಸಂಸ್ಥೆಗೆ ಉತ್ಪನ್ನಗಳನ್ನು ಅಸೆಂಬ್ಲಿಂಗ್ ಮಾಡಿಕೊಡುವ ಪ್ರಮುಖ ಸರಬರಾಜುದಾರ ಕಂಪನಿಗಳಲ್ಲಿ ಫಾಕ್ಸ್​ಕಾನ್ ಒಂದು. ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿ ಎಂದೆನಿಸಿದೆ. ತಮಿಳುನಾಡಿನಲ್ಲಿ ಅದರ ಘಟಕ ಇದೆ. ದೊಡ್ಡಬಳ್ಳಾಪುರದಲ್ಲಿ ಅದು ತಮಿಳುನಾಡಿನದ್ದಕ್ಕಿಂತಲೂ ಬೃಹತ್ ಘಟಕ ಸ್ಥಾಪಿಸಬಹುದು ಎನ್ನಲಾಗಿದೆ. ಈ ಘಟಕದಲ್ಲಿ ಐಫೋನ್ ಸೇರಿದಂತೆ ಆ್ಯಪಲ್​ನ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇದರ ಜೊತೆಗೆ ಎಲೆಕ್ಟ್ರಿಕಲ್ ವಾಹನಗಳ ಬಿಡಿಭಾಗ ತಯಾರಿಸಲೂ ಈ ಘಟಕವನ್ನು ಬಳಸಬಹುದು ಎನ್ನಲಾಗುತ್ತಿದೆ.

ಕುತೂಹಲ ಎಂದರೆ, ಫಾಕ್ಸ್​ಕಾನ್ ಕರ್ನಾಟಕದಲ್ಲಿ ತನ್ನ ಕಾರ್ಯಸಾಮರ್ಥ್ಯ ವಿಸ್ತರಿಸಲು ಮುಂದಾಗಿದ್ದರೆ, ಟಾಟಾ ಗ್ರೂಪ್ ತಮಿಳುನಾಡಿನಲ್ಲಿ ತನ್ನ ಅತಿದೊಡ್ಡ ಘಟಕ ಸ್ಥಾಪಿಸಲು ಹೊರಟಿದೆ. ಕೋಲಾರದ ವಿಸ್ಟ್ರಾನ್ ಘಟಕಕ್ಕಿಂತಲೂ ದೊಡ್ಡದನ್ನು ಟಾಟಾ ತಮಿಳುನಾಡಿನಲ್ಲಿ ನಿರ್ಮಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ