Sensex Record: ಅಮೆರಿಕ ಬಡ್ಡಿದರ ಇಳಿಕೆಗೆ ಸುಳಿವು; ಗರಿಗೆದರಿದ ಭಾರತದ ಷೇರುಮಾರುಕಟ್ಟೆ

US Fed Rates Effect: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮುಂದಿನ ವರ್ಷ ಮೂರು ಬಾರಿ ದರ ಕಡಿಮೆ ಆಗಬಹುದು. ಇದರ ಬೆನ್ನಲ್ಲೇ ಭಾರತದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿವೆ.

Sensex Record: ಅಮೆರಿಕ ಬಡ್ಡಿದರ ಇಳಿಕೆಗೆ ಸುಳಿವು; ಗರಿಗೆದರಿದ ಭಾರತದ ಷೇರುಮಾರುಕಟ್ಟೆ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 14, 2023 | 11:47 AM

ನವದೆಹಲಿ, ಡಿಸೆಂಬರ್ 14: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರ (US Fed Rates) ಯಥಾಸ್ಥಿತಿ ಮುಂದುವರಿಸುವ ನಿರ್ಧಾರ ಮಾಡಿರುವುದು, ಹಾಗೂ ಮುಂದಿನ ವರ್ಷ ಮೂರು ಬಾರಿ ಬಡ್ಡಿದರ ಇಳಿಕೆ ಮಾಡುವ ಸುಳಿವು ನೀಡಿರುವುದು ವಿಶ್ವಾದ್ಯಂತ ಸಾಕಷ್ಟು ಮಾರುಕಟ್ಟೆಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ಪರಿಣಾಮವಾಗಿ ಭಾರತದ ಷೇರುಮಾರುಕಟ್ಟೆ ಗರಿಗೆದರಿ ನಿಂತಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ವಿವಿಧ ಸೂಚ್ಯಂಕಗಳು (sensex and nifty) ಹೆಚ್ಚಳ ಕಂಡಿವೆ. ಇಂದು ಗುರುವಾರ (ಡಿ. 14) ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿವೆ.

ಬಿಎಸ್​ಇ ಸೆನ್ಸೆಕ್ಸ್ ಗುರುವಾರ ಬೆಳಗಿನ ವಹಿವಾಟಿನಲ್ಲಿ 796 ಅಂಕಗಳಷ್ಟು ಹೆಚ್ಚಳ ಕಂಡು, 70,381.24 ಮಟ್ಟ ಮುಟ್ಟಿದೆ. ಇದು ಸೆನ್ಸೆಕ್ಸ್​ನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.

ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ 50 ಷೇರುಗಳ ನಿಫ್ಟಿ ಸೂಚ್ಯಂಕ ಕೂಡ ಗುರುವಾರ 222.1 ಅಂಕಗಳಷ್ಟು ಮೇಲೇರಿದೆ. ಒಟ್ಟು 21,148.45 ಅಂಕಗಳ ಮಟ್ಟ ತಲುಪಿತ್ತು. ಇದೂ ಕೂಡ ನಿಫ್ಟಿ ಸೂಚ್ಯಂಕದ ಈವರೆಗಿನ ಗರಿಷ್ಠ ಎತ್ತರ ಎನಿಸಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಯಥಾಸ್ಥಿತಿ; ಮುಂದಿನ ವರ್ಷ ದರ ಇಳಿಸುವ ಸುಳಿವು ನೀಡಿದ ಫೆಡರಲ್ ರಿಸರ್ವ್

ಭಾರತದ ಷೇರು ಮಾರುಕಟ್ಟೆಗಳು ಮಾತ್ರವಲ್ಲ, ಏಷ್ಯಾದ ಇತರ ಪೇಟೆಗಳೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ. ದಕ್ಷಿಣ ಕೊರಿಯಾದ ಸೋಲ್, ಚೀನಾದ ಶಾಂಘೈ ಹಾಗೂ ಹಾಂಕಾಂಗ್ ಷೇರು ಮಾರುಕಟ್ಟೆಗಳಲ್ಲಿ ಟ್ರೇಡಿಂಗ್ ಹೆಚ್ಚಿದೆ. ಆದರೆ, ಜಪಾನ್​ ಟೋಕಿಯೋ ಪೇಟೆಯಲ್ಲಿ ಮಾತ್ರ ಇಳಿಕೆ ಆಗಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್​ನ ಛೇರ್ಮನ್ ಜಿರೊಮ್ ಪೋವೆಲ್ ಇಂದು ಗುರುವಾರ ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ನಿರ್ಧಾರ ಪ್ರಕಟಿಸಿದರು. ಸದ್ಯ ಅಮೆರಿಕದಲ್ಲಿ ಶೇ. 5.25ರಿಂದ ಶೇ. 5.50ರಷ್ಟು ಬಡ್ಡಿದರ ಇದೆ. ಸತತ ಮೂರು ಬಾರಿಯಿಂದಲೂ ಇದೇ ಬಡ್ಡಿದರ ಇದೆ. ಕಳೆದ ವರ್ಷ ಶೇ. 7ಕ್ಕಿಂತಲೂ ಹೆಚ್ಚಿದ್ದ ಹಣದುಬ್ಬರವನ್ನು ಇಳಿಸಲು ಸೆಂಟ್ರಲ್ ಬ್ಯಾಂಕ್ ಸತತವಾಗಿ ಬಡ್ಡಿದರ ಹೆಚ್ಚಿಸಿತ್ತು. ಹಣದುಬ್ಬರ ತಹಬದಿಗೆ ಬರುತ್ತಿರುವುದರಿಂದ ಬಡ್ಡಿ ಏರಿಕೆ ಕ್ರಮ ನಿಲ್ಲಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಫಾಕ್ಸ್​ಕಾನ್​ನ ಪ್ರಧಾನ ಕಾರ್ಯಕ್ಷೇತ್ರ ಕರ್ನಾಟಕವಾಗುತ್ತಾ? ಹೆಚ್ಚುವರಿ ಹೂಡಿಕೆ ಮಾಡುತ್ತಿದೆ ಐಫೋನ್ ತಯಾರಕ

ಅಷ್ಟೇ ಅಲ್ಲ, 2024ರಲ್ಲಿ ಮೂರು ಬಾರಿ ಬಡ್ಡಿದರ ಇಳಿಕೆ ಮಾಡುವ ಸುಳಿವನ್ನು ಪೋವೆಲ್ ನೀಡಿದ್ದಾರೆ. ಹಣದುಬ್ಬರ ಇಳಿಯುತ್ತಿರುವುದು, ಹಾಗು ಆರ್ಥಿಕತೆಯ ಬೆಳವಣಿಗೆ ಮಂದಗೊಂಡಿರುವುದು ಬಡ್ಡಿದರ ಇಳಿಕೆ ಸಾಧ್ಯತೆಯನ್ನು ಹೆಚ್ಚಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ