ಗೌತಮ್ ಅದಾನಿ ನಂತರ ಯಾರು? ಬ್ಲೂಮ್ಬರ್ಗ್ ಸಂದರ್ಶನದ ಎಕ್ಸ್ಕ್ಲೂಸಿವ್ ವಿಡಿಯೋ
Gautam Adani succession plan: ಭಾರತದ ಅತಿದೊಡ್ಡ ಬಿಸಿನೆಸ್ ಫ್ಯಾಮಿಲಿಗಳಲ್ಲಿ ಅದಾನಿ ಒಂದು. ಗೌತಮ್ ಅದಾನಿ ಭಾರತದ ಎರಡನೇ ಅತಿದೊಡ್ಡ ಶ್ರೀಮಂತ. ಮುಕೇಶ್ ಅಂಬಾನಿ ನಂತರ ಅವರ ಮೂರು ಮಕ್ಕಳು ಮುಂದಿನ ಬಿಸಿನೆಸ್ ಮುನ್ನಡೆಸುತ್ತಾರೆ. ಗೌತಮ್ ಅದಾನಿ ನಂತರ ಅದಾನಿ ಗ್ರೂಪ್ನ ಬಿಸಿನೆಸ್ ಯಾರು ನೋಡಿಕೊಳ್ಳುತ್ತಾರೆ? ಈ ಬಗ್ಗೆ ಎಕ್ಸ್ಕ್ಲೂಸಿವ್ ಸಂದರ್ಶನದ ವಿಡಿಯೋ ಇಲ್ಲಿದೆ.
ನವದೆಹಲಿ, ಆಗಸ್ಟ್ 14: ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ ಗೌತಮ್ ಅದಾನಿ ಅವರು 70 ವರ್ಷಕ್ಕೆ ನಿವೃತ್ತರಾಗ್ತಾರೆ, ತಮ್ಮ ಕುಟುಂಬದ ಇತರ ಸದಸ್ಯರಿಗೆ ಬಿಸಿನೆಸ್ ವಹಿಸಿ ಹೋಗ್ತಾರೆ ಎನ್ನುವಂತಹ ಸುದ್ದಿ ಕಳೆದ ವಾರ ಕೇಳಿಬಂದಿತ್ತು. ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ನಿವೃತ್ತಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿತ್ತು. ಅದರ ಬೆನ್ನಲ್ಲೆ ತಾನು 70 ವರ್ಷಕ್ಕೆ ನಿವೃತ್ತನಾಗುತ್ತೇನೆ ಎಂದು ಆ ಸಂದರ್ಶನದಲ್ಲಿ ಹೇಳಿಲ್ಲ ಎಂದು ಗೌತಮ್ ಅದಾನಿ ಸ್ಪಷ್ಟಪಡಿಸಿದ್ದಾರೆ. ಇದೀಗ ಬ್ಲೂಮ್ಬರ್ಗ್ ನ್ಯೂಸ್ಗೆ ನೀಡಲಾದ ಸಂದರ್ಶನದ 24 ನಿಮಿಷದ ವಿಡಿಯೋವೊಂದನ್ನು ಅದಾನಿ ಗ್ರೂಪ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ, ಅದಾನಿ ತಾನು 70ರ ವಯಸ್ಸಿಗೆ ರಿಟೈರ್ ಆಗುತ್ತೇನೆ ಎಂದು ಹೇಳಿಲ್ಲ. ಆದರೆ, ಅದಾನಿ ಕುಟುಂಬದ ವಿವಿಧ ಸದಸ್ಯರು ಅದಾನಿ ಗ್ರೂಪ್ನ ವಿವಿಧ ಬಿಸಿನೆಸ್ಗಳಲ್ಲಿ ಚುಕ್ಕಾಣಿ ಹಿಡಿದಿದ್ದಾರೆ. ಇವರ ಪೈಕಿ ನಾಲ್ವರು ಪ್ರಮುಖರಿದ್ದಾರೆ. ಇಬ್ಬರು ಗೌತಮ್ ಅದಾನಿಯ ಮಕ್ಕಳಾದರೆ, ಮತ್ತಿಬ್ಬರು ಅಣ್ಣಂದಿರ ಮಕ್ಕಳಾಗಿದ್ದಾರೆ.
ಬ್ಲೂಮ್ಬರ್ಗ್ ನ್ಯೂಸ್ ಸಂದರ್ಶನದ ಈ ವಿಡಿಯೋದಲ್ಲಿ ಅದಾನಿ ಕುಟುಂಬದ ಮುಂದಿನ ವಾರಸುದಾರರೆನ್ನಲಾದ ಪ್ರಣವ್ ಅದಾನಿ, ಸಾಗರ್ ಅದಾನಿ, ಕರಣ್ ಅದಾನಿ ಮತ್ತು ಜೀತ್ ಅದಾನಿ ಅವರು ಬಿಸಿನೆಸ್ ಬಗ್ಗೆ ಮಾತನಾಡಿದ್ದಾರೆ. ಹಿಂಡನ್ಬರ್ಗ್ ವರದಿಯಿಂದ ಆದ ಪರಿಣಾಮ, ಮತ್ತು ಆ ಸವಾಲನ್ನು ಹೇಗೆ ಎದುರಿಸಲಾಗುತ್ತಿದೆ ಎಂಬುದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಅದಾನಿ ಗ್ರೂಪ್ನಿಂದ ಅಪ್ಲೋಡ್ ಮಾಡಲಾದ ಸಂದರ್ಶನದ ವಿಡಿಯೋ ಇಲ್ಲಿದೆ…
ಹತ್ತು ವರ್ಷದ ಹಿಂದೆಯೇ ಅದಾನಿ ಗ್ರೂಪ್ನ ಬಿಸಿನೆಸ್ ಅನ್ನು ಮುಂದಿನ ಪೀಳಿಗೆಗೆ ಹಂಚಲು ಅದಾನಿ ಯೋಜಿಸಿದ್ದರೆನ್ನಲಾಗಿದೆ. ಅದಾನಿ ಫ್ಯಾಮಿಲಿಯ ಎರಡನೇ ಪೀಳಿಗೆಯಲ್ಲಿ ಹಿರಿಯನಾದ ಪ್ರಣವ್ ಅದಾನಿ ಅವರು ಅದಾನಿ ಎಂಟರ್ಪ್ರೈಸಸ್ನ ಡೈರೆಕ್ಟರ್ ಆಗಿದ್ದಾರೆ. ಗೌತಮ್ ಅದಾನಿಯ ಮತ್ತೊಬ್ಬ ಅಣ್ಣನ ಮಗನಾದ ಸಾಗರ್ ಅದಾನಿ ಅವರು ಅದಾನಿ ಗ್ರೀನ್ ಎನರ್ಜಿಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಅಧಿಕಾರ ಗೌತಮ್ ಅದಾನಿ ಮಕ್ಕಳಿಗೋ, ಸೋದರನ ಮಕ್ಕಳಿಗೋ? ಆರು ವರ್ಷದಲ್ಲಿ ಆಗಲಿದೆ ಅಧಿಕಾರ ಹಸ್ತಾಂತರ
ಅದಾನಿ ಗ್ರೂಪ್ನ ಬಹಳ ಮುಖ್ಯ ಬಿಸಿನೆಸ್ಗಳಾದ ಬಂದರು ಮತ್ತು ವಿಮಾನ ನಿಲ್ದಾಣಗಳ ಬಿಸಿನೆಸ್ ಅನ್ನು ಗೌತಮ್ ಅದಾನಿ ಅವರ ಇಬ್ಬರು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಅದಾನಿ ಪೋರ್ಟ್ಸ್ಗೆ ಕರಣ್ ಅದಾನಿ ಎಂಡಿಯಾಗಿದ್ದಾರೆ. ಅದಾನಿ ಏರ್ಪೋರ್ಟ್ಸ್ಗೆ ಜೀತ್ ಅದಾನಿ ನಿರ್ದೇಶಕರಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ