Gold Silver Price on 2 November 2022 | ಬೆಂಗಳೂರು: ರೂಪಾಯಿ ಮೌಲ್ಯದಲ್ಲಿ ಚೇತರಿಕೆ, ಷೇರುಪೇಟೆಯ ಗಳಿಕೆಯ ಓಟ ಮುಂದುವರಿದಿರುವ ಮಧ್ಯೆ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಚಿನ್ನದ ದರ (Gold Price) ತುಸು ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ (Silver Price) 2000 ರೂ. ಜಿಗಿತವಾಗಿದೆ. ಹಿಂದಿನ ದಿನ ಚಿನ್ನ ಹಾಗೂ ಬೆಳ್ಳಿ ದರ ತುಸು ಏರಿಳಿತಗಳ ಮೂಲಕ ಸ್ಥಿರತೆ ಕಾಯ್ದುಕೊಂಡಿದ್ದವು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 50 ರೂ. ಇಳಿಕೆಯಾಗಿ 46,550 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 60 ರೂ. ಇಳಿಕೆಯಾಗಿ 50,780 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 2000 ರೂ. ಏರಿಕೆಯಾಗಿ 59,500 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಚಿನ್ನದ ದರ ತುಸು ಇಳಿಕೆ, ಯಥಾಸ್ಥಿತಿ ಕಾಯ್ದುಕೊಂಡ ಬೆಳ್ಳಿ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,300 ರೂ. ಮುಂಬೈ- 46,550 ರೂ, ದೆಹಲಿ- 46,700 ರೂ, ಕೊಲ್ಕತ್ತಾ- 46,550 ರೂ, ಬೆಂಗಳೂರು- 46,600 ರೂ, ಹೈದರಾಬಾದ್- 46,550 ರೂ, ಕೇರಳ- 46,550 ರೂ, ಪುಣೆ- 46,580 ರೂ, ಮಂಗಳೂರು- 46,600 ರೂ, ಮೈಸೂರು- 46,600 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,600 ರೂ, ಮುಂಬೈ- 50,780 ರೂ, ದೆಹಲಿ- 50,930 ರೂ, ಕೊಲ್ಕತ್ತಾ- 50,780 ರೂ, ಬೆಂಗಳೂರು- 50,830 ರೂ, ಹೈದರಾಬಾದ್- 50,780 ರೂ, ಕೇರಳ- 50,780 ರೂ, ಪುಣೆ- 50,810 ರೂ, ಮಂಗಳೂರು- 50,830 ರೂ, ಮೈಸೂರು- 50,830 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 59,500 ರೂ, ಮೈಸೂರು- 65,000 ರೂ., ಮಂಗಳೂರು- 65,000 ರೂ., ಮುಂಬೈ- 59,500 ರೂ, ಚೆನ್ನೈ- 65,000 ರೂ, ದೆಹಲಿ- 59,500 ರೂ, ಹೈದರಾಬಾದ್- 65,000 ರೂ, ಕೊಲ್ಕತ್ತಾ- 65,000 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ