Gold and Silver rate: ಏರಿಕೆ ಹಾದಿಯಲ್ಲಿ ಚಿನ್ನ, ಬೆಳ್ಳಿ; ಭಾರತದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ಹೀಗಿದೆ
ಜಾಗತಿಕ ಟ್ರೆಂಡ್ ಅನ್ನು ಅನುಸರಿಸಿ ಭಾರತದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಅಕ್ಟೋಬರ್ 21ನೇ ತಾರೀಕಿನ ಗುರುವಾರ ಏರಿಕೆ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಹೀಗಿದೆ.
ಜಾಗತಿಕವಾದ ಸಕಾರಾತ್ಮಕ ಟ್ರೆಂಡ್ ಅನ್ನು ಅನುಸರಿಸಿ, ಭಾರತದಲ್ಲಿ ಗುರುವಾರ ಬೆಳಗ್ಗೆ ಚಿನ್ನದ ಬೆಲೆಯು ಮೇಲ್ಮಟ್ಟದಲ್ಲಿ ವಹಿವಾಟು ನಡೆಸಿತು. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನದ ಡಿಸೆಂಬರ್ ಫ್ಯೂಚರ್ಸ್ 55 ರೂಪಾಯಿ ಏರಿಕೆ ಕಂಡು, ಪ್ರತಿ 10 ಗ್ರಾಮ್ಗೆ 47,554 ರೂಪಾಯಿಯಂತೆ ವಹಿವಾಟು ನಡೆಸಿತು. ಇನ್ನು ಬೆಳ್ಳಿಯ ಡಿಸೆಂಬರ್ ಫ್ಯೂಚರ್ಸ್ ರೂ. 118 ಅಥವಾ ಶೇ 0.18ರಷ್ಟು ಮೇಲೇರಿ ಕೇಜಿಗೆ 65,725 ರೂಪಾಯಿಯಂತೆ ವಹಿವಾಟು ನಡೆಸಿತು. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯು ಮೇಲೇರಿತು. ಡಾಲರ್ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಆದ ಹಿನ್ನೆಲೆಯಲ್ಲಿ ಚಿನ್ನವು ತನ್ನ ಗಳಿಕೆಯನ್ನು ಮೂರನೇ ಸೆಷನ್ಗೆ ವಿಸ್ತರಣೆ ಮಾಡಿಕೊಂಡಿತು. ಸ್ಪಾಟ್ ಗೋಲ್ಡ್ ಶೇ 0.2ರಷ್ಟು ಏರಿಕೆಯಾಗಿ ಪ್ರತಿ ಔನ್ಸ್ಗೆ (28.3495 ಗ್ರಾಮ್) 1784.96 ಅಮೆರಿಕನ್ ಡಾಲರ್ ಆಯಿತು. ಯುಎಸ್ ಚಿನ್ನದ ಫ್ಯೂಚರ್ಸ್ನಲ್ಲಿ ಅಲ್ಪ ಬದಲಾವಣೆ ಆಗಿ, 1784.60 ಡಾಲರ್ ತಲುಪಿತು.
ಜಾಗತಿಕ ಮಟ್ಟದ ಷೇರುಗಳು ಬುಧವಾರ ರಾತ್ರಿ ಎತ್ತರಕ್ಕೆ ಏರಿದ್ದರಿಂದಾಗಿ ಚಿನ್ನದ ದರಗಳು ಇಳಿಕೆ ಹಾದಿಯಲ್ಲಿ ಇದ್ದವು. ಬೆಳ್ಳಿಗೆ ಹೋಲಿಸಿದರೆ ಬೆಲೆ ಕಡಿಮೆ ಆಗುವುದಕ್ಕೆ ಕಾರಣ ಏನು ಅಂತ ನೋಡುವುದಾದರೆ ಬಿಟ್ಕಾಯಿನ್ನಲ್ಲಿನ ಗಳಿಕೆ ಕಾಣಿಸುತ್ತದೆ. ಅದು 64000 ಯುಎಸ್ಡಿಯನ್ನು ಮೀರಿ, ದಾಖಲೆಯ ಎತ್ತರವನ್ನು ತಲುಪಿತು. ಯುರೋ ವಲಯದ ಸಿಪಿಐ ಶೇ 0.5ರಷ್ಟು ವರದಿ ಆಗಿದೆ. ಹಣದುಬ್ಬರದ ಒತ್ತಡ ಇರುವುದರಿಂದ ಅದರ ಅನುಕೂಲ ಚಿನ್ನಕ್ಕೆ ಆಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಚಿನ್ನಕ್ಕೆ 1750 ಯುಎಸ್ಡಿಯಲ್ಲಿ ಸಪೋರ್ಟ್ ಸಿಗಬಹುದು. ಅದನ್ನು ಅಲ್ಪಾವಧಿಯಲ್ಲಿ ತಳಮಟ್ಟ ಎಂದು ಪರಿಗಣಿಸಲಾಗುತ್ತದೆ. ಇಂದಿನ ಶಿಫಾರಸಿನ ಮೇರೆಗೆ ಚಿನ್ನವು ದೀರ್ಘಾವಧಿಯಲ್ಲಿ ಸ್ಟಾಪ್ ಲಾಸ್ 47,200 ರೂಪಾಯಿ ಹಾಗೂ ಟಾರ್ಗೆಟ್ 47,550 ರೂಪಾಯಿ ಎಂದು ನಿಗದಿ ಮಾಡಿಕೊಳ್ಳಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ): ಬೆಂಗಳೂರು: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್) ಮೈಸೂರು: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್) ಮಂಗಳೂರು: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್) ಚೆನ್ನೈ: 44,840 ರೂ. (22 ಕ್ಯಾರೆಟ್), 48,920 ರೂ. (24 ಕ್ಯಾರೆಟ್) ಮುಂಬೈ: 46,470 ರೂ. (22 ಕ್ಯಾರೆಟ್), 47,470 ರೂ. (24 ಕ್ಯಾರೆಟ್) ದೆಹಲಿ: 46,700 ರೂ. (22 ಕ್ಯಾರೆಟ್), 50,950 ರೂ. (24 ಕ್ಯಾರೆಟ್) ಕೋಲ್ಕತ್ತಾ: 46,900 ರೂ. (22 ಕ್ಯಾರೆಟ್), 49,600 ರೂ. (24 ಕ್ಯಾರೆಟ್) ಹೈದರಾಬಾದ್: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್) ಕೇರಳ: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್) ಪುಣೆ: 45,640 ರೂ. (22 ಕ್ಯಾರೆಟ್), 48,880 ರೂ. (24 ಕ್ಯಾರೆಟ್) ಜೈಪುರ್: 46,420 ರೂ. (22 ಕ್ಯಾರೆಟ್), 48,630 ರೂ. (24 ಕ್ಯಾರೆಟ್) ಮದುರೈ: 44,840 ರೂ. (22 ಕ್ಯಾರೆಟ್), 48,920 ರೂ. (24 ಕ್ಯಾರೆಟ್) ವಿಜಯವಾಡ: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್) ವಿಶಾಖಪಟ್ಟಣ: 44,550 ರೂ. (22 ಕ್ಯಾರೆಟ್), 48,600 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ): ಬೆಂಗಳೂರು: 65,550 ರೂ. ಮೈಸೂರು: 65,500 ರೂ. ಮಂಗಳೂರು: 65,500 ರೂ. ಚೆನ್ನೈ: 70,200 ಮುಂಬೈ: 65,500 ದೆಹಲಿ: 65,500 ಕೋಲ್ಕತ್ತಾ: 65,500 ಹೈದರಾಬಾದ್: 70,200 ಕೇರಳ: 70,200 ಪುಣೆ: 65,500 ಜೈಪುರ್: 65,500 ಮದುರೈ: 70,200 ವಿಜಯವಾಡ: 70,200 ವಿಶಾಖಪಟ್ಟಣ: 70,200
ಇದನ್ನೂ ಓದಿ: ಪ್ರತಿ ಶೇ 1ರಷ್ಟು ಹಣದುಬ್ಬರ ಹೆಚ್ಚಳದಿಂದ ಚಿನ್ನದ ಬೇಡಿಕೆ ಶೇ 2.6ರಷ್ಟು ಹೆಚ್ಚಳ: ವಿಶ್ವ ಚಿನ್ನ ಮಂಡಳಿ ವರದಿ