Gold Price Today: ಚಿನ್ನ, ಬೆಳ್ಳಿ ದರ ತುಸು ಹೆಚ್ಚಳ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ವಿವರ

ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಇಂದಿನ ಮಾಹಿತಿ ಇಲ್ಲಿದೆ

Gold Price Today: ಚಿನ್ನ, ಬೆಳ್ಳಿ ದರ ತುಸು ಹೆಚ್ಚಳ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ವಿವರ
ಚಿನ್ನದ ಬೆಲೆ
Image Credit source: Live Mint
Updated By: Ganapathi Sharma

Updated on: Oct 27, 2022 | 6:36 PM

Gold Silver Price on 27 October 2022 | ಬೆಂಗಳೂರು: ದೀಪಾವಳಿ (Diwali) ಸಂಭ್ರಮ ಕೊನೆಗೊಳ್ಳುವುದಕ್ಕೂ ಮುನ್ನವೇ ಚಿನ್ನ (Gold Price) ಹಾಗೂ ಬೆಳ್ಳಿಯ ದರದಲ್ಲಿ (Silver Price) ತುಸು ಏರಿಕೆ ಕಂಡುಬಂದಿದೆ. ದೀಪಾವಳಿ ಹಾಗೂ ಧನ್​ತೇರಸ್ ಪ್ರಯುಕ್ತ ದೇಶದ ಆಭರಣ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಆಭರಣ ವಹಿವಾಟು ಭರದಿಂದ ಸಾಗಿತ್ತು. ಇದೇ ವೇಳೆ ಉಭಯ ಲೋಹಗಳ ದರದಲ್ಲಿ ಅಲ್ಪ ಮಟ್ಟಿನ ಏರಿಳತವೂ ಕಂಡುಬಂದಿತ್ತು. ಇದೀಗ 10 ಗ್ರಾಂ ಚಿನ್ನದ ದರ 150 ರೂ. ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿ ದರ 100 ರೂ. ಹೆಚ್ಚಳವಾಗಿದೆ.

ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ;

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಾಗಿ 47,000 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 170 ರೂ. ಹೆಚ್ಚಾಗಿ 51,280 ರೂ. ಆಗಿದೆ. ಬೆಳ್ಳಿ ದರ 100 ರೂ. ಹೆಚ್ಚಳಗೊಂಡು 58,100 ರೂಪಾಯಿ ಆಗಿದೆ.

ಇದನ್ನೂ ಓದಿ
Banking Frauds: ಆನ್​ಲೈನ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಹೀಗೆ ಮೋಸ ಹೋಗಬೇಡಿ
CCI Fine on Google: ಬಳಕೆದಾರರು, ಡೆವಲಪರ್​ಗಳಿಗೆ ಬದ್ಧರಾಗಿದ್ದೇವೆ; ಸಿಸಿಐ ದಂಡಕ್ಕೆ ಗೂಗಲ್ ಪ್ರತಿಕ್ರಿಯೆ
Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ
Pre-approved Personal Loan: ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್, ಅನಿವಾರ್ಯವಿದ್ದರಷ್ಟೇ ಪಡೆಯಿರಿ

ಇದನ್ನೂ ಓದಿ: Gold Price Today: ಚಿನ್ನದ ದರ ತುಸು ಇಳಿಕೆ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳ ದರ ವಿವರ ಇಲ್ಲಿದೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,400 ರೂ. ಮುಂಬೈ- 47,000 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,050 ರೂ, ಹೈದರಾಬಾದ್- 47,000 ರೂ, ಕೇರಳ- 47,000 ರೂ, ಪುಣೆ- 47,080 ರೂ, ಮಂಗಳೂರು- 47,050 ರೂ, ಮೈಸೂರು- 47,050 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 51,720 ರೂ, ಮುಂಬೈ- 51,280 ರೂ, ದೆಹಲಿ- 51,430 ರೂ, ಕೊಲ್ಕತ್ತಾ- 51,280 ರೂ, ಬೆಂಗಳೂರು- 51,330 ರೂ, ಹೈದರಾಬಾದ್- 51,280 ರೂ, ಕೇರಳ- 51,280 ರೂ, ಪುಣೆ- 51,310 ರೂ, ಮಂಗಳೂರು- 51,330 ರೂ, ಮೈಸೂರು- 51,330 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 58,100 ರೂ, ಮೈಸೂರು- 64,000 ರೂ., ಮಂಗಳೂರು- 64,000 ರೂ., ಮುಂಬೈ- 58,100 ರೂ, ಚೆನ್ನೈ- 64,000 ರೂ, ದೆಹಲಿ- 58,100 ರೂ, ಹೈದರಾಬಾದ್- 64,000 ರೂ, ಕೊಲ್ಕತ್ತಾ- 58,100 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 am, Thu, 27 October 22