Gold Investment: ನಿಮ್ಮ ಚಿನ್ನಕ್ಕೆ ಶೇ. 16ರಷ್ಟು ರಿಟರ್ನ್ಸ್ ಕೊಡುತ್ತೆ ಈ ಆಪ್

ಗುಲ್ಲಕ್ ಆಪ್ ನಲ್ಲಿ ನಾವು ಖರೀದಿಸುವ ಚಿನ್ನದ ಮೇಲೆ ವಾರ್ಷಿಕವಾಗಿ ಶೇ. 11ರಷ್ಟು ರಿಟರ್ನ್ಸ್ ನೀಡಲಾಗುತ್ತಿದೆ. ಈಗ ಗುಲ್ಲಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೋಲ್ಡ್ ಪ್ಲಸ್ ಸ್ಕೀಮ್ ಪ್ರಕಟಿಸಿದೆ. ಇದರಲ್ಲಿ ಗ್ರಾಹಕರ ಚಿನ್ನಕ್ಕೆ ವಾರ್ಷಿಕವಾಗಿ ಶೇ. 16ರಷ್ಟು ರಿಟರ್ನ್ಸ್ ಸಿಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Gold Investment: ನಿಮ್ಮ ಚಿನ್ನಕ್ಕೆ ಶೇ. 16ರಷ್ಟು ರಿಟರ್ನ್ಸ್ ಕೊಡುತ್ತೆ ಈ ಆಪ್
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 05, 2023 | 2:53 PM

ಉಳಿಸುವ ಹಣ ಗಳಿಸುವ ಹಣಕ್ಕೆ ಸಮ ಎಂದು ತಿಳಿದವರು ಹೇಳುತ್ತಾರೆ. ಇಂದಿನ ಅನಿಶ್ಚಿತ ಕಾಲಘಟ್ಟದಲ್ಲಿ ಉಳಿತಾಯ ಪ್ರವೃತ್ತಿ ಆಪದ್ಬಾಂಧವದಂತೆ ಕೆಲಸ ಮಾಡುತ್ತದೆ. ಉಳಿತಾಯಕ್ಕೆ ಹಲವು ಮಾರ್ಗಗಳಲ್ಲಿ ಚಿನ್ನವೂ ಒಂದು. ಒಡವೆಗಾಗಿ ಚಿನ್ನ(Gold) ಖರೀದಿಸುವ ಒಂದು ವರ್ಗವಾದರೆ, ಉಳಿತಾಯದ ದೃಷ್ಟಿಯಿಂದ ಚಿನ್ನ ಖರೀದಿಸುವ ಇನ್ನೊಂದು ವರ್ಗವಿದೆ. ಈ ಎರಡನೇ ವರ್ಗದ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಅದರಲ್ಲೂ ಡಿಜಿಟಲ್ ಗೋಲ್ಡ್ (Digital Gold) ಖರೀದಿ ಹೆಚ್ಚುತ್ತಿರುವುದು ತಿಳಿದುಬಂದಿದೆ. ಚಿನ್ನದ ಮೇಲಿನ ಬೇಡಿಕೆ ಯಾವತ್ತೂ ಕಡಿಮೆಯಾಗದು ಎಂಬುದು ಹೌದು. ಹೀಗಾಗಿ ಇದು ಸುರಕ್ಷಿತ ಹೂಡಿಕೆ ಮಾರ್ಗ ಎನಿಸಿದೆ.

ಡಿಜಿಟಲ್ ಗೋಲ್ಡ್ ಖರೀದಿ ಈಗ ಬಹಳ ಸರಳ. ಪೇಟಿಎಂ ಇತ್ಯಾದಿ ಅನೇಕ ಆನ್ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಡಿಜಿಟಲ್ ನಮ್ಮಿಚ್ಛೆಯ ಮೊತ್ತದಷ್ಟು ಚಿನ್ನವನ್ನು ಖರೀದಿಸುವ ಅವಕಾಶ ಇದೆ. ಕೆಲ ಆಪ್​​ಗಳು ಡಿಜಿಟಲ್ ಗೋಲ್ಡ್ ಮೇಲೆ ಬಡ್ಡಿಯನ್ನೂ ನೀಡುತ್ತವೆ. ಅಂಥ ಕೆಲ ಅಪ್ಲಿಕೇಶನ್ ಗಳಲ್ಲಿ ಗುಲ್ಲಕ್ ಕೂಡ ಒಂದು.

ಗುಲ್ಲಕ್ ಆಪ್​​ನಲ್ಲಿ ನಾವು ಖರೀದಿಸುವ ಚಿನ್ನದ ಮೇಲೆ ವಾರ್ಷಿಕವಾಗಿ ಶೇ. 11ರಷ್ಟು ರಿಟರ್ನ್ಸ್ ನೀಡಲಾಗುತ್ತಿದೆ. ಈಗ ಗುಲ್ಲಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೋಲ್ಡ್ ಪ್ಲಸ್ ಸ್ಕೀಮ್ ಪ್ರಕಟಿಸಿದೆ. ಇದರಲ್ಲಿ ಗ್ರಾಹಕರ ಚಿನ್ನಕ್ಕೆ ವಾರ್ಷಿಕವಾಗಿ ಶೇ. 16ರಷ್ಟು ರಿಟರ್ನ್ಸ್ ಸಿಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಗುಲ್ಲಕ್​​ನಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ಹೆಚ್ಚುವರಿಯಾಗಿ ಶೇ. 4-5ರಷ್ಟು ಚಿನ್ನ ಪ್ರಾಪ್ತವಾಗುತ್ತದೆ. ಹಾಗೆಯೇ, ಚಿನ್ನದ ಮೌಲ್ಯದ ಹಣಕ್ಕೆ ವಾರ್ಷಿಕವಾಗಿ ಶೇ. 5ರಷ್ಟು ಬಡ್ಡಿಯೂ ಸಿಗುತ್ತದೆ. ಇದು ಚಿನ್ನವನ್ನು ಲೀಸ್​ಗೆ ಕೊಡುವ ವಿಧಾನವಾಗಿದೆ.

ಹೇಗೆ ಕೆಲಸ ಮಾಡುತ್ತೆ?

ಗುಲ್ಲಕ್ ದೇಶಾದ್ಯಂತ ವಿವಿಧ ಆಭರಣಕಾರರನ್ನು ಈ ಕಾರ್ಯಕ್ಕಾಗಿ ಜೋಡಿಸಿಕೊಂಡಿದೆ. ಇದು ಆಭರಣಕಾರರು ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಆಭರಣಕಾರರು ವಿಶ್ವಾಸಾರ್ಹವೆಂದು ಪರಿಶೀಲಿಸಲಾಗಿದೆ ಎಂದು ಗುಲ್ಲಕ್ ಹೇಳಿಕೊಳ್ಳುತ್ತದೆ.

ಇದನ್ನು ಓದಿ:US Golden Gate Bridge: ಅಮೆರಿಕದ ಗೋಲ್ಡನ್ ಗೇಟ್ ಬ್ರಿಡ್ಜ್​ನಿಂದ ಹಾರಿ ಇಂಡೋ-ಅಮೆರಿಕನ್ ಬಾಲಕ ಆತ್ಮಹತ್ಯೆ

ಗುಲ್ಲಕ್ ಆಪ್​​ನಲ್ಲಿ ಡಿಜಿಟಲ್ ಗೋಲ್ಡ್ ಖರೀದಿಸುವ ಜನರು ಈ ಚಿನ್ನವನ್ನು ತಮ್ಮಿಚ್ಛೆಯ ಆಭರಣಕಾರರಿಗೆ ಲೀಸ್​ಗೆ ಕೊಡಬಹುದು. ಈ ಒಪ್ಪಂದಕ್ಕೆ ಪ್ರತಿಯಾಗಿ ಆಭರಣಕಾರರು ಬ್ಯಾಂಕ್ ಗ್ಯಾರಂಟಿ ನೀಡುತ್ತಾರೆ. ಹೀಗಾಗಿ, ಈ ಹೂಡಿಕೆ ಸುರಕ್ಷಿತ ಎಂಬುದು ಗುಲ್ಲಕ್ ಆಶ್ವಾಸನೆ.

ವಿಶೇಷವೆಂದರೆ, ಜನರು ಎಷ್ಟು ಬೇಕಾದರೂ ಚಿನ್ನವನ್ನು ಲೀಸ್​​ಗೆ ಕೊಡಬಹುದು. ಕನಿಷ್ಠ ಚಿನ್ನ ಅರ್ಧ ಗ್ರಾಮ್ ಇನ್ನಲಾಗಿದೆ. ಇವೆಲ್ಲವೂ ಆಭರಣ ಚಿನ್ನಗಳಲ್ಲ, ಬದಲಾಗಿ ಶುದ್ಧ ಅಪರಂಜಿ ಚಿನ್ನ. ಅಂದರೆ 24 ಕೆರಟ್ ಗೋಲ್ಡ್ ಆಗಿರುತ್ತವೆ.

ಈ ರೀತಿ ಚಿನ್ನವನ್ನು ಆಭರಣಕಾರರು ಲೀಸ್​ಗೆ ಪಡೆಯುವ ಪದ್ಧತಿ ಇದೇ ಮೊದಲಲ್ಲ. ಮೊದಲಿಂದಲೂ ಇದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಕನಿಷ್ಠ ಒಂದು ಕಿಲೋ ಚಿನ್ನವನ್ನು ಪಡೆಯಲಾಗುತ್ತದೆ. ಈ ರೀತಿ ಅರ್ಧ ಗ್ರಾಮ್ ಚಿನ್ನವನ್ನು ಲೀಸ್​ಗೆ ಕೊಡುವ ಅವಕಾಶ ನೀಡುತ್ತಿರುವುದು ಇದೇ ಮೊದಲು ಎನ್ನುತ್ತದೆ ಗುಲ್ಲಕ್.

ಗಮನಿಸಬೇಕಾದ ಅಂಶ ಎಂದರೆ ನೀವು ಲೀಸ್​ಗೆ ಕೊಟ್ಟ ಚಿನ್ನವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು. ನಿಮ್ಮ ಚಿನ್ನಕ್ಕೆ ಪ್ರತಿಯಾಗಿ ಆ ಮೌಲ್ಯದ ಹಣವನ್ನು ಪಡೆಯಬಹುದು. ಅಥವಾ ಚಿನ್ನವನ್ನು ನಿಮ್ಮ ಮನೆಗೆ ತರಿಸಿಕೊಳ್ಳಬಹುದು.

ಗುಲ್ಲಕ್ ಅನ್ನು ಗೂಗಲ್ ಪ್ಲೇ ಸ್ಟೋರ್​​ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Thu, 5 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ