US Golden Gate Bridge: ಅಮೆರಿಕದ ಗೋಲ್ಡನ್ ಗೇಟ್ ಬ್ರಿಡ್ಜ್ನಿಂದ ಹಾರಿ ಇಂಡೋ-ಅಮೆರಿಕನ್ ಬಾಲಕ ಆತ್ಮಹತ್ಯೆ
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಸ್ಯಾನ್ ಫ್ರಾನಸ್ಇಸ್ಕೋದಲ್ಲಿರುವ ಗೋಲ್ಡನ್ ಗೇಟ್ ಬ್ರಿಡ್ಜ್ನಿಂದ ಹಾರಿ ಇಂಡೋ-ಅಮೆರಿಕನ್ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಸ್ಯಾನ್ ಫ್ರಾನಸ್ಇಸ್ಕೋದಲ್ಲಿರುವ ಗೋಲ್ಡನ್ ಗೇಟ್ ಬ್ರಿಡ್ಜ್ನಿಂದ ಹಾರಿ ಇಂಡೋ-ಅಮೆರಿಕನ್ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇತುವೆಯಿಂದ ಯಾರೋ ಹಾರುತ್ತಿರುವುದನ್ನು ನೋಡಿದ ಬಳಿಕ ಕಾರ್ಯಾಚರಣೆ ಶುರುಮಾಡಲಾಗಿತ್ತು, ಎರಡು ಗಂಟೆಗಳ ಕಾಲ ಶೋಧ ನಡೆಸಲಾಗಿತ್ತು.
ಅಲ್ಲಿನ ಸೇತುವೆ ಬಳಿ ಬಾಲಕನ ಫೋನ್, ಬ್ಯಾಗ್, ಸೈಕಲ್ ಪತ್ತೆಯಾಗಿದೆ, ಆತ 12 ನೇ ತರಗತಿ ಓದುತ್ತಿದ್ದ ಎಂಬುದು ತಿಳಿದುಬಂದಿದೆ ಸಂಜೆ 5 ಗಂಟೆಯ ಸುಮಾರಿಗೆ ಅಲ್ಲಿಂದ ಆತ ಹಾರಿ ಪ್ರಾಣಬಿಟ್ಟಿದ್ದಾನೆ. ಕಳೆದ ವರ್ಷ ಈ ಸ್ಥಳದಲ್ಲಿ 25 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 1937ರಲ್ಲಿ ಈ ಸೇತುವೆಯನ್ನು ತೆರೆದಾಗಿನಿಂದ ಇದುವರೆಗೆ ಸುಮಾರು 2 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಕಾರವು 1.7 ಮೈಲಿ ಸೇತುವೆಯ ಎರಡೂ ಬದಿಗಳಲ್ಲಿ 20 ಅಡಿ ಅಗಲದ ಕಬ್ಬಿಣದ ಜಾಲರಿಯನ್ನು ರಚಿಸಲು ಮುಂದಾಗಿದ್ದು 2018ರಿಂದ ಕಾರ್ಯ ನಡೆಯುತ್ತಿದೆ. ಅದರ ನಿರ್ಮಾಣ ವೆಚ್ಚವು 137.26 ಮಿಲಿಯನ್ನಿಂದ ಇದೀಗ 386.64 ಮಿಲಿಯನ್ಗೆ ಜಿಗಿದಿದೆ.
ಭಾರತೀಯ ಅಮೆರಿಕನ್ ಒಬ್ಬರು ಗೋಲ್ಡನ್ ಬ್ರಿಡ್ಜ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲಲ್ಲ ಇದು ನಾಲ್ಕನೇ ಘಟನೆ ಎಂದು ಸಮುದಾಯದ ಮುಖಂಡ ಅಜಯ್ ಜೈನ್ ಭುಟೊರಿಯಾ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ