United Nations: ಪೌರಾಣಿಕ ದೇವನದಿ ಗಂಗಾ ರಕ್ಷಣೆಗೆ ಇನ್ನು ವಿಶ್ವಸಂಸ್ಥೆ ನೆರವು ಲಭ್ಯ, ಮೋದಿ ಕನಸಿನ ನಮಾಮಿ ಗಂಗೆಗೆ ಯಶಸ್ಸು, ಶ್ರೇಯಸ್ಸು
Namami Gange: ಗಂಗಾ ಪುನಃಶ್ಚೇತನ ಯೋಜನೆಯಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ಅರಣ್ಯೀಕರಣ ಹೆಚ್ಚುತ್ತದೆ. ಇದರಿಂದ ಗಂಗಾನದಿ ಸುತ್ತಮುತ್ತ ಇರುವ 5 ಕೋಟಿ ಜನರಿಗೆ ಭಾರಿ ಲಾಭವಾಗಲಿದೆ. ನೈಸರ್ಗಿಕ ಸಂಪನ್ಮೂಲಗಳ ಅವನತಿ ತಡೆಯಲು ಇಂತಹ ಯೋಜನೆ ರೂಪಿಸಲಾಗಿದೆ -ವಿಶ್ವಸಂಸ್ಥೆ
ಮಾಂಟ್ರಿಯಲ್: ಭಾರತದ ಪವಿತ್ರ ನದಿಯಾದ ಪೌರಾಣಿಕ ಗಂಗಾ ನದಿಗೆ (sacred River Ganga) ಪುನರುಜ್ಜೀವನ ನೀಡಲು ಕೈಗೊಂಡ ಯೋಜನೆಗೆ ನೈಸರ್ಗಿಕ ಸಂಪತ್ತನ್ನು ಪುನಃಶ್ಚೇತನಗೊಳಿಸಲು (World Restoration Flagships) ನಡೆದಿರುವ ಯತ್ನಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರವು ಗಂಗಾ ನದಿ ಪುನರುಜ್ಜೀವನಕ್ಕೆ ಆರಂಭಿಸಿದ್ದ ‘ನಮಾಮಿ ಗಂಗೆ’ ಯೋಜನೆ (Namami Gange) ಬಗ್ಗೆ ವಿಶ್ವಸಂಸ್ಥೆ (United Nations-UN) ಪ್ರಶಂಸೆ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಜೀವವೈವಿಧ್ಯ ಸಮ್ಮೇಳನದಲ್ಲಿ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ಭಾರತದ ಹಿಮಾಲಯದಿಂದ ಪಶ್ಚಿಮ ಬಂಗಾಳದವರೆಗೆ ಚಾಚಿಕೊಂಡಿರುವ 2,525 ಕಿ.ಮೀ. ಉದ್ದದ ಗಂಗಾ ನದಿ ಹವಾಮಾನ ಬದಲಾವಣೆ, ಜನಸಂಖ್ಯೆ ಹೆಚ್ಚಳ, ಕೈಗಾರೀಕರಣ ಮುಂತಾದವುಗಳಿಂದ ಬಾಧಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಏನು ಪ್ರಯೋಜನ?
ವಿಶ್ವಸಂಸ್ಥೆಯ ಜೀವವೈವಿಧ್ಯ ಸಮ್ಮೇಳನದಲ್ಲಿ ವರದಿ ಬಿಡುಗಡೆಯಾಗಿದ್ದು, ವರ್ಲ್ಡ್ ರಿಸ್ಟೊರೇಶನ್ ಫ್ಲಾಗ್ಶಿಪ್ ಯೋಜನೆಯೆಂದು ಪರಿಗಣಿಸಲ್ಪಟ್ಟಿದೆ. ಇದರಿಂದ ವಿಶ್ವಸಂಸ್ಥೆಯ ಮೂಲಕ ಧನಸಹಾಯ ಪಡೆಯಲು ಸಾಧ್ಯವಾಗಲಿದೆ. ನಮಾಮಿ ಗಂಗೆ ಈಗ UN ಬೆಂಬಲ, ಧನಸಹಾಯ ಅಥವಾ ತಾಂತ್ರಿಕ ಪರಿಣತಿಯನ್ನು ಪಡೆಯಲು ಅರ್ಹತೆ ಪಡೆಯುತ್ತದೆ.
ಆದರೆ ಗಂಗಾನದಿ ಪುನಃಶ್ಚೇತನಕ್ಕೆ ನಡೆದಿರುವ ಯೋಜನೆಯಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ಅರಣ್ಯೀಕರಣ ಹೆಚ್ಚುತ್ತದೆ. ಇದರಿಂದ ಗಂಗಾನದಿ ಸುತ್ತಮುತ್ತ ಇರುವ 5 ಕೋಟಿ ಜನರಿಗೆ ಭಾರಿ ಲಾಭವಾಗಲಿದೆ. ನೈಸರ್ಗಿಕ ಸಂಪನ್ಮೂಲಗಳ ಅವನತಿ ತಡೆಯಲು ಇಂತಹ ಯೋಜನೆ ರೂಪಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಉಪಕ್ರಮಗಳನ್ನು ವರ್ಲ್ಡ್ ರಿಸ್ಟೊರೇಶನ್ ಫ್ಲಾಗ್ಶಿಪ್ ಎಂದು ಘೋಷಿಸಲಾಗಿದೆ. ಇದರಿಂದ ವಿಶ್ವಸಂಸ್ಥೆಯ ಉತ್ತೇಜನ, ಧನಸಹಾಯ ಅಥವಾ ಸಲಹೆಗಳು ಯೋಜನೆಗೆ ಲಭಿಸಲಿವೆ. ಗಂಗಾ ಪುನರುಜ್ಜೀವನ ಸೇರಿ ವಿಶ್ವದ ವಿವಿಧ ಭಾಗಗಳ 10 ಯೋಜನೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಯೋಜನೆಗಳಿಂದ 1.5 ಕೋಟಿ ಜನರಿಗೆ ಉದ್ಯೋಗ ಸಿಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಮಾಮಿ ಗಂಗೆಗೆ ಯಶಸ್ಸು/ ಶ್ರೇಯಸ್ಸು:
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಗಂಗಾನದಿ ಪುನಃಶ್ಚೇತನಕ್ಕೆ ನಮಾಮಿ ಗಂಗೆ ಯೋಜನೆಯನ್ನು ಜಾರಿಗೊಳಿಸಿತ್ತು. ನದಿಯ ಮಾಲಿನ್ಯ ತಡೆಯಲು ಜಲ ಶುದ್ದೀಕರಣ ಘಟಕ ಸ್ಥಾಪನೆ, ತ್ಯಾಜ್ಯ ಸಂಸ್ಕರಣೆ, ನದಿ ದಂಡೆಯ ಕಾರ್ಖಾನೆಗಳನ್ನು ಬೇರೆಡೆ ಸ್ಥಳಾಂತರಿಸುವುದು, ಅರಣ್ಯೀಕರಣ, ನದಿ ಪಕ್ಕ ಸುಸ್ಥಿರ ಕೃಷಿಗೆ ಪ್ರೇರಣೆ- ಇವು ಯೋಜನೆಯಲ್ಲಿನ ಕ್ರಮಗಳಾಗಿವೆ.
ಈ ಯೋಜನೆಯಿಂದ 1,500 ಕಿ. ಮೀ. ನದಿ ಪುನರುಜ್ಜೀವನಗೊಂಡಿದೆ. ನದಿ ಪಕ್ಕ 30 ಸಾವಿರ ಹೆಕ್ಟೇರ್ ಅರಣ್ಯೀಕರಣ ಮಾಡಲಾಗಿದೆ. 2030ರ ವೇಳೆಗೆ 1.34 ಲಕ್ಷ ಹೆಕ್ಟೇಟ್ ಅರಣ್ಯೀಕರಣ ನಡೆಸುವ ಗುರಿ ಹೊಂದಲಾಗಿದೆ. ಇದರಲ್ಲಿ 230 ಸಂಘಟನೆಗಳು ಸರ್ಕಾರದ ಜತೆ ಕೈಜೋಡಿಸಿವೆ. 4.25 ಶತಕೋಟಿ ಡಾಲರ್ ಹಣವನ್ನು ವಿನಿಯೋಗಿಸಲಾಗಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
ನಮಾಮಿ ಗಂಗೆಯನ್ನು ಜಗತ್ತಿನಾದ್ಯಂತ 70 ದೇಶಗಳಿಂದ ಪರಿಗಣಿಸಲ್ಪಟ್ಟಿದ್ದ 150 ಕ್ಕೂ ಹೆಚ್ಚು ಇಂತಹ ಉಪಕ್ರಮಗಳ ಮಧ್ಯೆ ನಮಾಮಿ ಗಂಗೆಯನ್ನು ಆಯ್ಕೆ ಮಾಡಲಾಗಿದೆ. ಯುಎನ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಮತ್ತು ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (FAO) ನಿಂದ ಸಂಘಟಿತವಾದ ಜಾಗತಿಕ ಚಳುವಳಿಯಾದ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯ ವಿಶ್ವಸಂಸ್ಥೆಯ ದಶಕದ ಬ್ಯಾನರ್ ಅಡಿಯಲ್ಲಿ ಉಪಕ್ರಮಗಳನ್ನು ಆಯ್ಕೆ ಮಾಡಲಾಗಿದೆ (Montreal, Canada).
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ