Gold Price Today: ಚಿನ್ನದ ದರ ಇಂದೂ ಇಳಿಕೆ, ಬೆಳ್ಳಿ ಬೆಲೆ ಭಾರೀ ಕುಸಿತ; ಇಲ್ಲಿದೆ ವಿವರ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರೀ ಏರಿಕೆ ದಾಖಲಿಸಿದ್ದ ಚಿನ್ನ ಹಾಗೂ ಬೆಳ್ಳಿ ದರ ಇದೀಗ ಸತತ ಎರಡನೇ ದಿನ ಇಳಿಕೆಯಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಬೆಲೆ ಇಳಿಕೆಯಾಗುವ ಮೂಲಕ ಉಭಯ ಲೋಹಗಳು ಆಭರಣಪ್ರಿಯರಿಗೆ, ಚಿನ್ನದ ಮೇಲಿನ ಹೂಡಿಕೆದಾರರಿಗೆ ತುಸು ರಿಲೀಫ್ ನೀಡಿದ್ದವು. ಇಂದು ಮತ್ತೆ ದರ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 700 ರೂ. ಇಳಿಕೆಯಾದರೆ, 24 ಕ್ಯಾರೆಟ್ ಚಿನ್ನದ ಬೆಲೆ 770 ರೂ. ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 2600 ರೂ. ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 700 ರೂ. ಇಳಿಕೆಯಾಗಿ 52,400 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 770 ರೂ. ಕುಸಿದು 57,160 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 2600 ರೂ. ಇಳಿಕೆಯಾಗಿ 71,200 ರೂ. ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 53,550 ರೂ.
- ಮುಂಬೈ- 52,400 ರೂ.
- ದೆಹಲಿ- 52,550 ರೂ.
- ಕೊಲ್ಕತ್ತಾ- 52,400 ರೂ.
- ಬೆಂಗಳೂರು- 52,450 ರೂ.
- ಹೈದರಾಬಾದ್- 52,400 ರೂ.
- ಕೇರಳ- 52,400 ರೂ.
- ಪುಣೆ- 52,400 ರೂ.
- ಮಂಗಳೂರು- 52,450 ರೂ.
- ಮೈಸೂರು- 52,450 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 58,200 ರೂ.
- ಮುಂಬೈ- 57,160 ರೂ.
- ದೆಹಲಿ- 57,310 ರೂ.
- ಕೊಲ್ಕತ್ತಾ- 57,160 ರೂ.
- ಬೆಂಗಳೂರು- 57,210 ರೂ.
- ಹೈದರಾಬಾದ್- 57,160 ರೂ.
- ಕೇರಳ- 57,160 ರೂ.
- ಪುಣೆ- 57,160 ರೂ.
- ಮಂಗಳೂರು- 57,210 ರೂ.
- ಮೈಸೂರು- 57,210 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 74,200 ರೂ.
- ಮೈಸೂರು- 74,200 ರೂ.
- ಮಂಗಳೂರು- 74,200 ರೂ.
- ಮುಂಬೈ- 71,200 ರೂ.
- ಚೆನ್ನೈ- 74,200 ರೂ.
- ದೆಹಲಿ- 71,200 ರೂ.
- ಹೈದರಾಬಾದ್- 74,200 ರೂ.
- ಕೊಲ್ಕತ್ತಾ- 71,200 ರೂ.