Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಮತ್ತೆ ಇಳಿಕೆ; ಇಲ್ಲಿದೆ ಪೂರ್ಣ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಮತ್ತೆ ಇಳಿಕೆ; ಇಲ್ಲಿದೆ ಪೂರ್ಣ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Image Credit source: PTI
Updated By: Ganapathi Sharma

Updated on: Jan 20, 2023 | 12:00 AM

Gold Silver Price in Bangalore | ಬೆಂಗಳೂರು: ಬೆಳ್ಳಿಯ ದರ ಸತತ ಎರಡನೇ ದಿನ ಕುಸಿದಿದ್ದು ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಹಿಂದಿನ ದಿನದ ವಹಿವಾಟಿನಲ್ಲಿ ಎರಡೂ ಲೋಹಗಳ ದರ ಇಳಿಕೆಯಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಚಿನ್ನ, ಬೆಳ್ಳಿ ದರ ಏರಿಳಿಕೆಯಾಗುತ್ತಲೇ ಇದೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಚಿನ್ನದ ದರ ಹೆಚ್ಚಳ ದಾಖಲಿಸಿತ್ತು. ಗೋಲ್ಡ್ ಫ್ಯೂಚರ್ಸ್ ದರ ಕೂಡ ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹೆಚ್ಚಳಗೊಂಡಿತ್ತು. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ ಮತ್ತು 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. 1 ಕೆಜಿ ಬೆಳ್ಳಿ ಬೆಲೆ 300 ಇಳಿಕೆಯಾಗಿದ್ದು, 71,900 ರೂ. ಆಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿತ್ತು 52,000 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಯಥಾಸ್ಥಿತಿ ಕಾಯ್ದುಕೊಂಡಿತ್ತು 56,730 ರೂ. ಇದೆ. ಒಂದು ಕೆಜಿ ಬೆಳ್ಳಿ ದರ 300 ಇಳಿಕೆಯಾಗಿ 71,900 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 52,900 ರೂ.
  • ಮುಂಬೈ- 52,000 ರೂ.
  • ದೆಹಲಿ- 52,150 ರೂ.
  • ಕೊಲ್ಕತ್ತಾ- 52,000 ರೂ.
  • ಬೆಂಗಳೂರು- 52,050 ರೂ.
  • ಹೈದರಾಬಾದ್- 52,000 ರೂ.
  • ಕೇರಳ- 52,000 ರೂ.
  • ಪುಣೆ- 52,000 ರೂ.
  • ಮಂಗಳೂರು- 52,050 ರೂ.
  • ಮೈಸೂರು- 52,050 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 57,710 ರೂ.
  • ಮುಂಬೈ- 56,730 ರೂ.
  • ದೆಹಲಿ- 56,890 ರೂ.
  • ಕೊಲ್ಕತ್ತಾ- 56,730 ರೂ.
  • ಬೆಂಗಳೂರು- 56,780 ರೂ.
  • ಹೈದರಾಬಾದ್- 56,730 ರೂ.
  • ಕೇರಳ- 56,730 ರೂ.
  • ಪುಣೆ- 56,730 ರೂ.
  • ಮಂಗಳೂರು- 56,780 ರೂ.
  • ಮೈಸೂರು- 56,780 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 73,500 ರೂ.
  • ಮೈಸೂರು- 73,500 ರೂ.
  • ಮಂಗಳೂರು- 73,500 ರೂ.
  • ಮುಂಬೈ- 71,900 ರೂ.
  • ಚೆನ್ನೈ- 73,500 ರೂ.
  • ದೆಹಲಿ- 71,900 ರೂ.
  • ಹೈದರಾಬಾದ್- 73,500 ರೂ.
  • ಕೊಲ್ಕತ್ತಾ- 72,200 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ