Exotel Layoff: ಬೆಂಗಳೂರು ಮೂಲದ ಎಕ್ಸೋಟೆಲ್​ನಲ್ಲಿ ಶೇ 15 ಉದ್ಯೋಗಿಗಳ ವಜಾ

ಎಕ್ಸೋಟೆಲ್ ಕಂಪನಿಯು ಸುಮಾರು 142 ಮಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಕಾರ್ಯಕ್ಷಮತೆ ಸುಧಾರಣೆ ಯೋಜನೆ (PIP) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Exotel Layoff: ಬೆಂಗಳೂರು ಮೂಲದ ಎಕ್ಸೋಟೆಲ್​ನಲ್ಲಿ ಶೇ 15 ಉದ್ಯೋಗಿಗಳ ವಜಾ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jan 20, 2023 | 5:28 PM

ಬೆಂಗಳೂರು: ಭಾರತ ಮತ್ತು ಆಗ್ನೇಯ ಏಷ್ಯಾ ದೇಶಗಳ ಉದ್ದಿಮಗಳಿಗೆ ಸಂವಹನ ವ್ಯವಸ್ಥೆ ಸೇವೆಗಳನ್ನು ಒದಗಿಸಿಕೊಡುವ ಬೆಂಗಳೂರು ಮೂಲದ ಎಕ್ಸೋಟೆಲ್ (Exotel) ಕಂಪನಿ ಶೇ 15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ (Layoff). ಇತ್ತೀಚಿನ ಉದ್ಯೋಗ ಕಡಿತದಲ್ಲಿ ಕಂಪನಿಯು ಸುಮಾರು 142 ಮಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಕಾರ್ಯಕ್ಷಮತೆ ಸುಧಾರಣೆ ಯೋಜನೆ (PIP) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ. ವಜಾಗೊಳಿಸಿದ್ದಕ್ಕೆ ಪರಿಹಾರವನ್ನೂ ಕಂಪನಿ ನೀಡಿಲ್ಲ ಎಂದು ವಜಾಗೊಂಡಿರುವ ಉದ್ಯೋಗಿಗಳು ಆರೋಪಿಸಿದ್ದಾರೆ. ಉದ್ಯೋಗ ಕಡಿತ ಮಾಡುವುದಕ್ಕೂ 15 ದಿನಗಳ ಮೊದಲಷ್ಟೇ ಕಂಪನಿಯ ಕಾರ್ಯಕ್ಷಮತೆ ಸುಧಾರಣೆ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ. ಕಾರ್ಯಕ್ಷಮತೆ ಸುಧಾರಣೆ ಯೋಜನೆಯಲ್ಲಿ ಮಾರ್ಪಾಡು ಮಾಡಿರುವುದನ್ನು ಆಂತರಿಕ ಸಂದೇಶದಲ್ಲಿ ಸಿಇಒ ಶಿವಕುಮಾರ್ ಗಣೇಶನ್ ಸಮರ್ಥಿಸಿಕೊಂಡಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ನಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತೆ ಇಲ್ಲ. ಪಿಐಪಿ ಮಾರ್ಪಾಡಿನೊಂದಿಗೆ ನಷ್ಟ ಕಡಿಮೆ ಮಾಡಿಕೊಳ್ಳದೆ ಬೇರೆ ಆಯ್ಕೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಯಾವ ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕೋ ಅವರಿಗೆ ಮೊದಲಿಗೆ ಪಿಐಪಿ ಅಡಿಯಲ್ಲಿ ಎಚ್ಚರಿಕೆ ನೀಡಲಾಗುತ್ತದೆ. ಪಿಐಪಿಯ ಆರಂಭ ಎಂದರೆ ಅದನ್ನು ನೋಟಿಸ್ ಪಿರಿಯಡ್​​ನಂತೆಯೇ ಪರಿಗಣಿಸಲಾಗುವುದು. ಪಿಐಪಿ ಆರಂಭಿಸುವುದಕ್ಕೂ ಮುನ್ನ ಎರಡು ಬಾರಿ ಎಚ್ಚರಿಕೆಯ ಸಂದೇಶ ನೀಡಲಾಗುತ್ತದೆ. ಪಿಐಪಿಯೊಂದಿಗೆ ಉದ್ಯೋಗಿಯ ನೋಟಿಸ್ ಪಿರಿಯಡ್ ಆರಂಭವಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿ ತಿಳಿಸಿದೆ. ಜತೆಗೆ, ಈ ವಿಚಾರವಾಗಿ ಎಕ್ಸೋಟೆಲ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ ಎಂದೂ ತಿಳಿಸಿದೆ.

ಇದನ್ನು ಓದಿ: Dunzo Layoffs: ಬೆಂಗಳೂರು ಮೂಲದ ಡುಂಜೋದಲ್ಲಿ ಶೇ 3ರಷ್ಟು ಉದ್ಯೋಗಿಗಳ ವಜಾ

2022ರ ಜನವರಿಯಲ್ಲಿ ಎಕ್ಸೋಟೆಲ್ 40 ದಶಲಕ್ಷ ಡಾಲರ್ ನಿಧಿ ಸಂಗ್ರಹಿಸಿತ್ತು. ಈವರೆಗೆ 100 ದಶಲಕ್ಷ ಡಾಲರ್​ ವರೆಗೆ ಸಾಲ ಮತ್ತು ಈಕ್ವಿಟಿ ಫಂಡಿಂಗ್ ಸಂಗ್ರಹಿಸಿದೆ.

ಬೆಂಗಳೂರು ಮೂಲದ ಕೆಲವು ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗುತ್ತಿರುವುದು ಇತ್ತೀಚೆಗೆ ವರದಿಯಾಗುತ್ತಿದೆ. ವಿತರಣಾ ಉದ್ಯಮ ಸಂಸ್ಥೆ, ಬೆಂಗಳೂರು ಮೂಲದ ಡುಂಜೋ ಕೂಡ ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಉದ್ಯೋಗಿಗಳ ವಜಾ ನಿರ್ಧಾರ ಕೈಗೊಳ್ಳುವ ಬದಲು ಕಾರ್ಯನಿರ್ವಹಣೆ ವೆಚ್ಚ ಕಡಿತ ಮಾಡುವ ಬಗ್ಗೆ ಭಾರತದ ಕಂಪನಿಗಳ ಹೆಚ್ಚಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ ಎಂದು ಜಾಗತಿಕ ಸಲಹಾ ಸಂಸ್ಥೆ ಪಿಡಬ್ಲ್ಯುಸಿ ವಾರ್ಷಿಕ ಸಮೀಕ್ಷಾ ವರದಿ ಇತ್ತೀಚೆಗೆ ತಿಳಿಸಿತ್ತು. ಇದರ ಬೆನ್ನಲ್ಲೇ ಭಾರತದ ಹಲವೆಡೆ ಉದ್ಯೋಗ ಕಡಿತ ಮುಂದುವರಿದಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Fri, 20 January 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ