Gold and Silver Rate: ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia- Ukraine War) ಸಾರಿದ ಬಳಿಕ ನಿನ್ನೆ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಇದ್ದಕ್ಕಿದ್ದಂತೆ 10 ಗ್ರಾಂಗೆ 1,000 ರೂ. ಕುಸಿತ ಕಂಡಿದೆ. ರಷ್ಯಾ- ಉಕ್ರೇನ್ ಸಂಘರ್ಷ ಬೇರೆ ದೇಶಗಳ ಮೇಲೂ ಪರಿಣಾಮ ಬೀರುತ್ತಿದ್ದು, ಭಾರತದಲ್ಲಿ ಚಿನ್ನದ ಬೆಲೆ (Gold Rate) ಗಗನಕ್ಕೇರುವ ಆತಂಕ ಎದುರಾಗಿತ್ತು. ಆದರೆ, ಇಂದು ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ ಕಂಡಿರುವುದರಿಂದ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,000 ರೂ. ಕುಸಿತವಾಗಿದೆ. ಅತ್ತ ಬೆಳ್ಳಿ ದರದಲ್ಲಿ ಕೂಡ ಭಾರೀ ಕುಸಿತವಾಗುತ್ತಿದ್ದು, ನಿನ್ನೆಗಿಂತ ಇಂದು 1,500 ರೂ. ಕಡಿಮೆಯಾಗಿದೆ.
ಗುರುವಾರ ಭಾರತದಲ್ಲಿ 24 ಕ್ಯಾರೆಟ್ 10ಗ್ರಾಂ ಚಿನ್ನದ ದರ 51,000 ರೂ. ಗಡಿ ದಾಟಿತ್ತು. ಆದರೆ, ನಿನ್ನೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದರೂ ಕೂಡ ಭಾರತದಲ್ಲಿ ಮಾತ್ರ ಕುಸಿತ ಕಂಡಿದೆ. ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಇನ್ನಷ್ಟು ಹೆಚ್ಚಳವಾಗೋ ನಿರೀಕ್ಷೆಯಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು ರಷ್ಯಾ ಹಾಗೂ ಉಕ್ರೇನ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಎರಡನೆಯದು ಜಾಗತಿಕ ಆರ್ಥಿಕತೆಯಲ್ಲಿನ ಹಿಂಜರಿಕೆ ಹಾಗೂ ಹಣದುಬ್ಬರ ದರದಲ್ಲಿ ಏರಿಕೆಯಾಗಿರುವುದು ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಬಹುದು. ಇದೇ ಪರಿಸ್ಥಿತಿ ಮುಂದುವರೆದರೆ ಈ ವರ್ಷಾಂತ್ಯದ ವೇಳೆಗೆ ಚಿನ್ನದ ಬೆಲೆ 60,000 ರೂ. ಗಡಿ ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,850 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 51,110 ರೂ. ಇದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,010 ರೂ, ಮುಂಬೈ- 46,850 ರೂ, ದೆಹಲಿ- 47,260 ರೂ, ಕೊಲ್ಕತ್ತಾ- 46,850 ರೂ, ಬೆಂಗಳೂರು- 46,850 ರೂ, ಹೈದರಾಬಾದ್- 46,850 ರೂ, ಕೇರಳ- 46,850 ರೂ, ಪುಣೆ- 46,900 ರೂ, ಮಂಗಳೂರು- 46,850 ರೂ, ಮೈಸೂರು- 46,850 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,370 ರೂ, ಮುಂಬೈ- 51,110 ರೂ, ದೆಹಲಿ- 51,110 ರೂ, ಕೊಲ್ಕತ್ತಾ- 51,110 ರೂ, ಬೆಂಗಳೂರು- 51,110 ರೂ, ಹೈದರಾಬಾದ್- 51,110 ರೂ, ಕೇರಳ- 51,110 ರೂ, ಪುಣೆ- 51,200 ರೂ, ಮಂಗಳೂರು- 51,110 ರೂ, ಮೈಸೂರು- 51,110 ರೂ. ಇದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಭಾರೀ ಕುಸಿತ ಕಂಡುಬಂದಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 1,500 ರೂ. ಕುಸಿತವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 65,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ ಬೆಂಗಳೂರು- 70,000 ರೂ, ಮೈಸೂರು- 70,000 ರೂ., ಮಂಗಳೂರು- 70,000 ರೂ., ಮುಂಬೈ- 65,000 ರೂ, ಚೆನ್ನೈ- 65,000 ರೂ, ದೆಹಲಿ- 70,000 ರೂ, ಹೈದರಾಬಾದ್- 70.000 ರೂ, ಕೊಲ್ಕತ್ತಾ- 65,000 ರೂ. ಇದೆ.
ಇದನ್ನೂ ಓದಿ: Gold and Silver Rate: ಚಿನ್ನ, ಬೆಳ್ಳಿ ದರ ಫೆಬ್ರವರಿ 25ರಂದು ಯಾವ ನಗರದಲ್ಲಿ ಹೆಚ್ಚು, ಎಲ್ಲಿ ಕಮ್ಮಿ ತಿಳಿಯಿರಿ