Gold Price Today: ಚಿನ್ನದ ಬೆಲೆ 440 ರೂ. ಕುಸಿತ; ಬೆಳ್ಳಿ ದರವೂ ಇಳಿಕೆ

ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 55,900 ರೂ. ಇದ್ದುದು ಇಂದು 55,600 ರೂ. ಆಗಿದೆ.

Gold Price Today: ಚಿನ್ನದ ಬೆಲೆ 440 ರೂ. ಕುಸಿತ; ಬೆಳ್ಳಿ ದರವೂ ಇಳಿಕೆ
ಚಿನ್ನದ ಬೆಲೆ
Edited By:

Updated on: Jul 22, 2022 | 5:46 AM

Gold Price on 22 July 2022 | ಬೆಂಗಳೂರು: ಭಾರತದಲ್ಲಿ 3 ದಿನಗಳಿಂದ ಚಿನ್ನದ ಬೆಲೆ (Gold Rate) ಏರಿಕೆಯಾಗುತ್ತಿದೆ. ಆದರೆ, ಇಂದು 10 ಗ್ರಾಂ ಚಿನ್ನದ ಬೆಲೆ 440 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆ (Silver Price) ನಿನ್ನೆ 300 ರೂ. ಹೆಚ್ಚಳವಾಗಿತ್ತು. ಆದರೆ, ಇಂದು ಬೆಳ್ಳಿ ದರದಲ್ಲಿ ಇಂದು 300 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಕೂಡ ಭಾರೀ ಕುಸಿತವಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,400 ರೂ. ಇದ್ದುದು 46,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,620 ರೂ. ಇದ್ದುದು 50,180 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,300 ರೂ. ಮುಂಬೈ- 46,000 ರೂ, ದೆಹಲಿ- 46,000 ರೂ, ಕೊಲ್ಕತ್ತಾ- 46,000 ರೂ, ಬೆಂಗಳೂರು- 46,070 ರೂ, ಹೈದರಾಬಾದ್- 46,000 ರೂ, ಕೇರಳ- 46,000 ರೂ, ಪುಣೆ- 46,040 ರೂ, ಮಂಗಳೂರು- 46,070 ರೂ, ಮೈಸೂರು- 46,070 ರೂ. ಇದೆ.

ಇದನ್ನೂ ಓದಿ: Gold Price Today: 2 ದಿನಗಳ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರವೂ ಕೊಂಚ ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 50,500 ರೂ, ಮುಂಬೈ- 50,180 ರೂ, ದೆಹಲಿ- 50,180 ರೂ, ಕೊಲ್ಕತ್ತಾ- 50,180 ರೂ, ಬೆಂಗಳೂರು- 50,250 ರೂ, ಹೈದರಾಬಾದ್- 50,180 ರೂ, ಕೇರಳ- 50,180 ರೂ, ಪುಣೆ- 50,220 ರೂ, ಮಂಗಳೂರು- 50,250 ರೂ, ಮೈಸೂರು- 50,250 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 55,900 ರೂ. ಇದ್ದುದು ಇಂದು 55,600 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,000 ರೂ, ಮೈಸೂರು- 61,000 ರೂ., ಮಂಗಳೂರು- 61,000 ರೂ., ಮುಂಬೈ- 55,600 ರೂ, ಚೆನ್ನೈ- 61,000 ರೂ, ದೆಹಲಿ- 55,600 ರೂ, ಹೈದರಾಬಾದ್- 61,000 ರೂ, ಕೊಲ್ಕತ್ತಾ- 55,600 ರೂ. ಆಗಿದೆ.

Web contact

TV9 Kannada

Read More
Follow Us