Gold Price Today: ಬೆಲೆ ಇಳಿಕೆಯಾದ್ದರಿಂದ ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ; ಬೆಳ್ಳಿ ದರ 500 ರೂ. ಕುಸಿತ

Silver Price Today: ಭಾರತದಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 52,960 ರೂ. ಇದ್ದುದು 52,800 ರೂ. ಆಗಿದೆ. ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 500 ರೂ. ಇಳಿಕೆಯಾಗಿದೆ.

Gold Price Today: ಬೆಲೆ ಇಳಿಕೆಯಾದ್ದರಿಂದ ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ; ಬೆಳ್ಳಿ ದರ 500 ರೂ. ಕುಸಿತ
ಚಿನ್ನದ ಬೆಲೆ
Edited By:

Updated on: May 01, 2022 | 6:02 AM

ಬೆಂಗಳೂರು: ನಮ್ಮ ದೇಶದಲ್ಲಿ ಬಂಗಾರದ ಬೆಲೆ ಗಗನಕ್ಕೇರಿದರೂ ಚಿನ್ನ ಖರೀದಿ ಮಾಡುವವರ ಸಂಖ್ಯೆಯೇನೂ ಕಡಿಮೆಯಾಗುತ್ತಿಲ್ಲ. ಇನ್ನೇನು ಅಕ್ಷಯ ತೃತೀಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಇಂದು ಚಿನ್ನದ ದರ (Gold Rate) 160 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 500 ರೂ. ಇಳಿಕೆಯಾಗಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 48,550 ರೂ. ಇದ್ದುದು 48,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,960 ರೂ. ಇದ್ದುದು 52,800 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,030 ರೂ. ಮುಂಬೈ- 48,400 ರೂ, ದೆಹಲಿ- 48,400 ರೂ, ಕೊಲ್ಕತ್ತಾ- 48,400 ರೂ, ಬೆಂಗಳೂರು- 48,400 ರೂ, ಹೈದರಾಬಾದ್- 48,400 ರೂ, ಕೇರಳ- 48,400 ರೂ, ಪುಣೆ- 48,480 ರೂ, ಮಂಗಳೂರು- 48,400 ರೂ, ಮೈಸೂರು- 48,400 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,490 ರೂ, ಮುಂಬೈ- 52,800 ರೂ, ದೆಹಲಿ- 52,800 ರೂ, ಕೊಲ್ಕತ್ತಾ- 52,800 ರೂ, ಬೆಂಗಳೂರು- 52,800 ರೂ, ಹೈದರಾಬಾದ್- 52,800 ರೂ, ಕೇರಳ- 52,800 ರೂ, ಪುಣೆ- 52,880 ರೂ, ಮಂಗಳೂರು- 52,800 ರೂ, ಮೈಸೂರು- 52,800 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಕುಸಿತವಾಗಿದೆ. ಬೆಳ್ಳಿ ಬೆಲೆ (Silver Price) ಕೂಡ ಇಳಿಕೆಯಾಗಿದೆ.

ಇಂದಿನ ಬೆಳ್ಳಿಯ ದರ:
ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 500 ರೂ. ಇಳಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 64,000 ರೂ. ಇದ್ದುದು ಇಂದು 63,500 ರೂ.ಗೆ ಇಳಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 69,500 ರೂ, ಮೈಸೂರು- 69,500 ರೂ., ಮಂಗಳೂರು- 69,500 ರೂ., ಮುಂಬೈ- 63,500 ರೂ, ಚೆನ್ನೈ- 69,500 ರೂ, ದೆಹಲಿ- 63,500 ರೂ, ಹೈದರಾಬಾದ್- 69,500 ರೂ, ಕೊಲ್ಕತ್ತಾ- 63,500 ರೂ. ಆಗಿದೆ.

Web contact

TV9 Kannada

Read More
Follow Us